Team India Mistake: ಇಂಡಿಯಾ ಫೈನಲ್ ಪಂದ್ಯ ಸೋಲಲು ಅಸಲಿ ಕಾರಣ ತಿಳಿಸಿದ ICC, ಈ ತಪ್ಪುಗಳೇ ತಂಡದ ಸೋಲಿಗೆ ಕಾರಣ

ವಿಶ್ವಕಪ್ ನಲ್ಲಿ ಭಾರತ ತಂಡ ಸೋಲಲು ಕಾರಣ ತಿಳಿಸಿದ ICC

Team India Mistake In World Cup Final 2023: ಏಕದಿನ ವಿಶ್ವಕಪ್ 2023 ರ ಪಂದ್ಯಗಳನ್ನು ಮರೆಯಲು ಕ್ರಿಕೆಟ್ ಅಭಿಮಾನಿಗಳಿಂದ ಇನ್ನು ಸಾಧ್ಯವಿಲ್ಲ.ಯಾಕೆಂದರೆ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದು ಸೈ ಅನ್ನಿಸಿಕೊಂಡು ಫೈನಲ್ ಹಂತ ತಲುಪಿತ್ತು. ಪ್ರತಿಯೊಂದು ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ ಕೊನೆಗೆ ಫೈನಲ್ ನಲ್ಲಿ ಹೀನಾಯವಾದ ಸೋಲನ್ನು ಕಂಡಿತು.

ನವೆಂಬರ್‌ 19 ರಂದು ಭಾರತ ಹಾಗು ಆಸ್ಟ್ರೇಲಿಯಾ ನಡುವೆ ರೋಚಕ ಪಂದ್ಯ ಏರ್ಪಟ್ಟಿತು ಕೊನೆಗೆ ಭಾರತ ಆಸೀಸ್‌ ಬೌಲರ್‌ಗಳ ರಣತಂತ್ರಕ್ಕೆ ಸಿಲುಕಿ ಪದರಾಡಿದರು. ಬೌಂಡರಿ, ಸಿಕ್ಸರ್‌ಗಳನ್ನು ಕಾಣದೆ ಅಭಿಮಾನಿಗಳು ಸಹ ನಿರಾಸೆ ಪಟ್ಟರು. ಆದ್ರೆ ಭಾರತ ಹೀನಾಯವಾಗಿ ಸೋಲಲು ಏನು ಕಾರಣ ಎಂಬುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.

World Cup Final
Image Credit: ETV Bharath

ಭಾರತ ಸೋಲಿಗೆ ಕಾರಣವಾದ ಪಿಚ್

ಕ್ರಿಕೆಟ್ ಪಂದ್ಯದ ವೇಳೆಯಲ್ಲಿ ಪಿಚ್ ಬಹಳ ಮುಖ್ಯವಾದ ಭಾಗ ಆಗಿದೆ. ಒಂದು ಪಿಚ್ ಪಂದ್ಯ ಗೆಲುವಿಗೂ ಕಾರಣವಾಗಬಹುದು, ಪಂದ್ಯದ ಸೋಲಿಗೂ ಕಾರಣ ಆಗಬಹುದು. ಹಾಗೆಯೆ ವಿಶ್ವಕಪ್ ನಲ್ಲಿ ಭಾರತ ತಂಡ ಸೋಲಲು ಪಿಚ್ ಕಾರಣ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಮೊದಲೇ ಆರೋಪಿಸಿದ್ದರು ಎಂದು ಹಿಂದಿನ ವರದಿಗಳು ಹೇಳಿದ್ದವು.

‘ಟೈಮ್ಸ್ ಆಫ್ ಇಂಡಿಯಾ’ ಪ್ರಕಾರ, ಐಸಿಸಿ ಐದು ವಿಶ್ವಕಪ್ ಪಂದ್ಯಗಳ ಪಿಚ್‌ಗಳಿಗೆ ಸರಾಸರಿ ರೇಟಿಂಗ್ ನೀಡಿದೆ. ಇದರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯವೂ ಸೇರಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಫೈನಲ್ ಪಂದ್ಯ ಸೋತಿದ್ದಕ್ಕೆ ಪಿಚ್ ಮೇಲೆ ಆರೋಪ ಮಾಡಿದ್ದರು. ವರದಿಗಳ ಪ್ರಕಾರ, ನಿರೀಕ್ಷೆಯಂತೆ ತಿರುವು ಸಿಗದ ಕಾರಣ ನಾವು ಸೋತಿದ್ದೇವೆ ಎಂದು ಮುಖ್ಯ ಕೋಚ್ ಹೇಳಿದ್ದರು. ಬೌಲ್‌ ಟರ್ನ್‌ ಆಗಿದ್ದರೆ ನಾವು ಗೆಲ್ಲುತ್ತಿದ್ದೆವು. ಈ ತಂತ್ರದಿಂದ ನಾವು ಮೊದಲ 10 ಪಂದ್ಯಗಳನ್ನು ಗೆದ್ದಿದ್ದೇವೆ, ಆದರೆ ಅದು ಫೈನಲ್‌ನಲ್ಲಿ ಫಲ ನೀಡಲಿಲ್ಲ ಎಂದು ತಿಳಿಸಿದ್ದರು.

Join Nadunudi News WhatsApp Group

World Cup Final 2023
Image Credit: TV9 kannada

ಕಳಪೆ ಪಿಚ್‌ನಲ್ಲಿ ಆಸೀಸ್ ಗೆಲುವಿಗೆ ಕಾರಣವೇನು?
ಭಾರತ ಸೋಲಿಗೆ ಪಿಚ್ ಕಾರಣ ಎಂದು ಸಾಬೀತಾದ ತರುವಾಗ ಆಸೀಸ್ ಹೇಗೆ ಗೆಲುವನ್ನು ಸಾಧಿಸಿತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ನರೇಂದ್ರ ಮೋದಿ ಸ್ಟೇಡಿಯಂನ ಪಿಚ್‌ ಗೆ ಸರಾಸರಿ ರೇಟಿಂಗ್ ನೀಡುವ ಮೂಲಕ ಐಸಿಸಿ ಪಿಚ್ ಉತ್ತಮವಾಗಿಲ್ಲ ಎಂದು ಖಚಿತಪಡಿಸಿದೆ. ಈ ಪಿಚ್‌ನಲ್ಲಿ ಟಾಸ್ ಸೋತಿದ್ದು ಟೀಮ್ ಇಂಡಿಯಾಕ್ಕೆ ಹಿನ್ನಡೆ ಆಯಿತು. ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು ಮತ್ತು ಟೀಮ್ ಇಂಡಿಯಾವನ್ನು 240 ರನ್‌ಗಳಿಗೆ ಆಲೌಟ್ ಮಾಡಿತು.

ಹಗಲಿನಲ್ಲಿ ಪಿಚ್ ಬೌಲರ್‌ಗಳಿಗೆ ಸ್ವಲ್ಪ ಮಟ್ಟಿಗೆ ಸಹಾಯಕವಾಗಿತ್ತು. ಆದರೆ ಭಾರತ ತಂಡ ಬೌಲಿಂಗ್ ಮಾಡುವಷ್ಟರಲ್ಲಿ ಲೈಟ್‌ ಗಳು ಆನ್ ಆಗಿದ್ದು ಮೈದಾನದಲ್ಲಿ ಇಬ್ಬನಿಯೂ ಕಾಣಿಸಿಕೊಂಡಿತ್ತು. ಅಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಭಾರತ ಹೀನಾಯವಾಗಿ ಪಂದ್ಯವನ್ನು ಸೋತಿತು ಎನ್ನಲಾಗಿದೆ.

Join Nadunudi News WhatsApp Group