Xiaomi SU7: ಅಗ್ಗದ ಬೆಲೆಗೆ 700 Km ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ Xiaomi, ಸಂಕಷ್ಟದಲ್ಲಿ ಟೆಸ್ಲಾ

ಸ್ಮಾರ್ಟ್ ಫೋನ್ ಗಳಂತೆ ಅಗ್ಗದ ಬೆಲೆಗೆ ಪರಿಚಯವಾಯ್ತು ಶಿಯೋಮಿ EV, ಭರ್ಜರಿ 700km ಮೈಲೇಜ್.

Xiaomi SU7 Electric Car: ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Xiaomi ಇದೀಗ ಆಟೋ ವಲಯದಲ್ಲಿ ಸದ್ದು ಮಾಡಲು ತನ್ನ ಜನಪ್ರಿಯ ಸೆಡಾನ್ ಅನ್ನು ಪರಿಚಯಿಸಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ಕಾರಣ ಚೀನಾದ ಈ ಕಂಪನಿಯು ಇದೀಗ ತನ್ನ ಮೊಟ್ಟ ಮೊದಲ Electric car ಅನ್ನು ಪರಿಚಯಿಸಲು ಸಜ್ಜಾಗಿದೆ.

ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ Electric Car ಆದ Xiaomi SU7 ಮಾದರಿಯನ್ನು ಬಿಡುಗಡೆಗೊಳಿಸಿದೆ. ನಾವೀಗ ಈ ಲೇಖನದಲ್ಲಿ ಈ ಹೊಸ ಎಲೆಕ್ಟ್ರಿಕ್ ಆಮದಾರಿ ವೈಶಿಷ್ಟ್ಯ, ಬೆಲೆ, ಮೈಲೇಜ್, ಎಂಜಿನ್ ಸಾಮರ್ಥ್ಯ ಎಲ್ಲದರ ಬಗ್ಗೆ ಮಾಹಿತಿ ತಿಳಿಯೋಣ.

xiaomi suv 7 car price and features
Image Credit: Original Source

ಸ್ಮಾರ್ಟ್ ಫೋನ್ ಗಳಂತೆ ಅಗ್ಗದ ಬೆಲೆಗೆ ಪರಿಚಯವಾಯ್ತು ಶಿಯೋಮಿ EV
ನೂತನ Xiaomi SU7 ಎಲೆಕ್ಟ್ರಿಕ್ ಸೆಡಾನ್‌ ನ ಆರಂಭಿಕ ಬೆಲೆ ಅಂದಾಜು 25.34 ಲಕ್ಷ ರೂ. ಆಗಿದೆ. ಹೊಸ Xiaomi SU7 ಎಲೆಕ್ಟ್ರಿಕ್ ಸೆಡಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಅದರ ಸ್ಪೋರ್ಟಿ ಮತ್ತು ಯುವ ವಿನ್ಯಾಸದ ಗುಣಲಕ್ಷಣಗಳೊಂದಿಗೆ ಬಹಳ ಆಕರ್ಷಕವಾಗಿ ಕಾಣುತ್ತದೆ. ಈ ಹೊಸ ಎಲೆಕ್ಟ್ರಿಕ್ ಸೆಡಾನ್‌ ನ ಯಂಗ್ ಮತ್ತು ಸ್ಪೋರ್ಟಿನೆಸ್‌ ನ ಮಿಶ್ರಣವು ಅದರ ಕಡಿಮೆ-ಸ್ಲಂಗ್ ವಿನ್ಯಾಸ ಮತ್ತು ಕೂಪ್ ತರಹದ ರೂಫ್‌ ಲೈನ್‌ ನಿಂದ ಮತ್ತಷ್ಟು ಆಕರ್ಷಿಣಿಯವಾಗಿದೆ.

ಹೊಸ Xiaomi SU7 ಎಲೆಕ್ಟ್ರಿಕ್ ಸೆಡಾನ್ 997mm ಉದ್ದ, 1963mm ಅಗಲ, 1440mm ಎತ್ತರ ಮತ್ತು 3000mm ವೀಲ್‌ ಬೇಸ್ ಅನ್ನು ಹೊಂದಿದೆ. ಆದರೆ ಸುಮಾರು 5-ಮೀಟರ್ ಉದ್ದವಿದ್ದರೂ, Xiaomi ಎಲೆಕ್ಟ್ರಿಕ್ ಕಾರು 5.7 ಮೀಟರ್ ಗಳಷ್ಟು ಕಡಿಮೆ ಟರ್ನಿಂಗ್ ರೇಡಿಯಸ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು 517 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಕಾರು 16 ಇಂಚುಗಳಷ್ಟು ದೊಡ್ಡ ಇನ್ಫೋಟೈನ್ಮೆಂಟ್ ಘಟಕವನ್ನು ಹೊಂದಿದೆ. ಇದರ ಜೊತೆಗೆ, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 2 Xiaomi Pod 6S Pro ಟ್ಯಾಬ್ಲೆಟ್‌ ಗಳನ್ನು ಸಹ ಸೇರಿಸಲಾಗಿದೆ.

xiaomi suv 7 car price and features
Image Credit: original Source

ಭರ್ಜರಿ 700km ಮೈಲೇಜ್ ನೀಡುವ EV ಲಾಂಚ್
Xiaomi SU7 ಎಲೆಕ್ಟ್ರಿಕ್ ಸೆಡಾನ್ ಬೇಸ್-ಸ್ಪೆಕ್ SU7 73.6kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್ ನಲ್ಲಿ 700km ಮೈಲೇಜ್ ಅನ್ನು ನೀಡುತ್ತದೆ. ಮಾದರಿಯು 295bhp ಎಲೆಕ್ಟ್ರಿಕ್ ಮೋಟಾರ್‌ ನಿಂದ ಚಾಲಿತವಾಗಿದ್ದು, ಮಾದರಿಯನ್ನು 5.28 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ಗೆ ವೇಗಗೊಳಿಸುತ್ತದೆ. ಈ ಮಾದರಿಯು ಗಂಟೆಗೆ 210 ಕಿಮೀ ವೇಗವನ್ನು ಹೊಂದಿದೆ. SU7 ಪ್ರೊ ರೂಪಾಂತರವು ದೊಡ್ಡದಾದ 94.3kWh ಅನ್ನು ಹೊಂದಿದ್ದು, ಈ ಮಾದರಿಯು 830km ಮೈಲೇಜ್ ಅನ್ನು ನೀಡುತ್ತದೆ. ಈ ಮಾದರಿಯು 5.7 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ಗೆ ವೇಗವನ್ನು ಪಡೆಯುತ್ತದೆ. ಈ ರೂಪಾಂತರದ ಬೆಲೆ ರೂ. 28.87 ಲಕ್ಷ ಆಗಿದೆ.

Join Nadunudi News WhatsApp Group

xiaomi suv 7 electric car price and features
Image Credit: original Source

Join Nadunudi News WhatsApp Group