100 Rs Note: 100 ನೋಟಿನ ಮೇಲೆ ಇನ್ನೊಂದು ಆದೇಶ ಹೊರಡಿಸಿದ RBI, ಹೊಸ ರೂಲ್ಸ್ ಜಾರಿಗೆ.

100 ರೂ. ಹಳೆಯ ನೋಟುಗಳನ್ನು ಅಮಾನತ್ತುಗೊಳಿಸುವುದರ ಬಗ್ಗೆ RBI ಹೇಳುವುದೇನು..?

100 Rs Note Ban: ದೇಶದಲ್ಲಿ 2000 ರೂ. ನೋಟಿನ ಬ್ಯಾನ್ ನ ಬೆನ್ನಲ್ಲೇ 500 ರೂ. ನೋಟಿನ ಬ್ಯಾನ್ ಬಗ್ಗೆ ಸುದ್ದಿ ವೈರಲ್ ಆಗುತ್ತಿತ್ತು. ಈ ಬಗ್ಗೆ RBI ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದೆ. 500 ರೂ. ನೋಟಿನ ರದ್ದಿತಿಯ ಬಗ್ಗೆ ಸುದ್ದಿಗಳು ವೈರಲ್ ಆಗುವುದು ಕಡಿಮೆಯಾಗುತ್ತಿದ್ದಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಳೇಯ 100 ರೂ. ನೋಟಿನ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

ಸದ್ಯ ಹಳೆಯ 100 ರೂಪಾಯಿ ನೋಟಿನ ಬಗ್ಗೆ ಜನರಲ್ಲಿ ಚರ್ಚೆ ಶುರುವಾಗಿದೆ. ಹೌದು ಹಳೆಯ 100 ರೂಪಾಯಿ ನೋಟು ಅಮಾನ್ಯವಾಗುತ್ತದೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದಷ್ಟು ಬೇಗ ನಿಮ್ಮ ಬಳಿ ಇರುವ ಈ 100 ರೂಪಾಯಿ ನೋಟನ್ನು ಖರ್ಚು ಮಾಡುವುದು ಅಥವಾ ಬ್ಯಾಂಕ್ ಗೆ ಹಿಂದಿರುಗಿಸುದು ಉತ್ತಮ ಎನ್ನುವ ಬಗ್ಗೆ ಮಾಹಿತಿ ವೈರಲ್ ಆಗುತ್ತಿದೆ. ಆದರೆ ದೇಶದಲ್ಲಿ 100 ರೂ. ಹಳೆಯ ನೋಟುಗಳನ್ನು ಅಮಾನತ್ತುಗೊಳಿಸುವುದರ ಬಗ್ಗೆ RBI ಹೇಳುವುದೇನು..? ಎನ್ನುವ ಬಗ್ಗೆ ವಿವರ ಇಲ್ಲಿದೆ.

100 Rs Note Ban
Image Credit: India TV News

100 ನೋಟಿನ ಮೇಲೆ ಇನ್ನೊಂದು ಆದೇಶ ಹೊರಡಿಸಿದ RBI
ಇದೀಗ ಹಳೆಯ 100 ರೂ ನೋಟುಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಉಲ್ಲೇಖಿಸಿ ಪ್ರಸಿದ್ಧ ಹಕ್ಕುಗಳಲ್ಲಿ, ಈಗ ಹಳೆಯ ನೋಟುಗಳನ್ನು ಮಾರ್ಚ್ 31, 2024 ರ ವರೆಗೆ ಬದಲಾಯಿಸಬಹುದು ಎಂದು ಹೇಳಲಾಗುತ್ತಿದೆ. ಅದರ ನಂತರ ಅದರ ಕಾನೂನು ಮಾನ್ಯತೆ ಕೊನೆಗೊಳ್ಳುತ್ತದೆ ಮತ್ತು ಅದನ್ನು ಸ್ವೀಕರಿಸಲಾಗುವುದಿಲ್ಲ ಎನ್ನುವ ಸಂದೇಶ ಇದೆ.

ಡಿಸೆಂಬರ್ 20, 2023 ರಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್ ಈಗ ಈ ಪೋಸ್ಟ್‌ ನಲ್ಲಿ ಹಳೆಯ 100 ರೂ ನೋಟಿನ ಫೋಟೋವನ್ನು ಸಹ ಪೋಸ್ಟ್ ಮಾಡಲಾಗಿದೆ. ಅದರೊಂದಿಗೆ ಈಗ ಈ ಹಳೆಯ 100 ರೂ ನೋಟು ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಬರೆದಿದ್ದಾರೆ. RBI ನೋಟು ಬದಲಾವಣೆಯ ಪರೀಕ್ಷಾ ದಿನಾಂಕವನ್ನು ಮಾರ್ಚ್ 31, 2024 ಎಂದು ನಿಗದಿಪಡಿಸಿದೆ.

100 Rs Note Ban New Update
Image Credit: Oneindia

100 ರೂ. ನೋಟಿನ ಕುರಿತು RBI ಸ್ಪಷ್ಟನೆ
100 ರೂಪಾಯಿಯ ಹಳೆಯ ನೋಟು ಅಮಾನ್ಯವಾಗಿದ್ದು ಮಾರ್ಚ್ 31 ರಂದು 100 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿದೆ. ಹಾಗಾಗಿ ಬ್ಯಾಂಕ್‌ ಗಳಲ್ಲಿ ನೀವು ನಿಮ್ಮ 100 ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಬೇಕಾಗಿದೆ. ಏಕೆಂದರೆ ಈ ನೋಟುಗಳು ಏಪ್ರಿಲ್ 1 ರಿಂದ ಮಾನ್ಯವಾಗಿರುವುದಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

ಆದರೆ ಇದೊಂದು ಸುಳ್ಳು ಸುದ್ದಿ. ಹಳೆಯ 100 ರೂಪಾಯಿ ನೋಟನ್ನು ಬ್ಯಾನ್ ಮಾಡುವ ಬಗ್ಗೆ RBI ಯಾವುದೇ ಘೋಷಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು 100 ರೂ. ನೋಟುಗಳನ್ನು ಬ್ಯಾನ್ ಮಾಡುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇಂತಹ ಸುಳ್ಳು ಸುದ್ದಿಗಳಿಗೆ ಗಮನ ಹರಿಸಬೇಡಿ ಎಂದು RBI ಜನರಿಗೆ ಎಚ್ಚರಿಕೆ ನೀಡಿದೆ.

100 Rs Note Ban Latest News
Image Credit: TV9telugu

Join Nadunudi News WhatsApp Group