100 Rs Note: ದೇಶದಲ್ಲಿ 100 ರೂಪಾಯಿ ನೋಟುಗಳು ಬ್ಯಾನ್, ನೋಟ್ ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ RBI

ದೇಶದಲ್ಲಿ 100 ರೂ ನೋಟ್ ಬ್ಯಾನ್, ನೋಟ್ ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ RBI

100 Rs Note Ban Latest Update: ಸಾಮಾಜಿಕ ಜಾಲತಾಣದಲ್ಲಿ ಕ್ಷಣಕ್ಕೊಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಜನ ಗೊಂದಲಕ್ಕೊಳಗಾಗುವುದನ್ನು ಕಾಣುತ್ತೇವೆ. ಈ ಹಿಂದೆ 500 ರೂಪಾಯಿ ನೋಟುಗಳು ನಕಲಿ ಎಂಬ ಸುದ್ದಿ ಎಲ್ಲರನ್ನೂ ಸಂಕಷ್ಟಕ್ಕೆ ಗುರಿ ಮಾಡಿತ್ತು, ಆದರೆ ಈಗ 100 ರೂಪಾಯಿ ನೋಟುಗಳು ಬ್ಯಾನ್ ಎಂಬ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಇಂತಹ ಸುದ್ದಿಗಳು ಕ್ಷಣಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ.

ಸದ್ಯ ದೇಶದಲ್ಲಿ ಹಳೆ 100 ರೂಪಾಯಿ ನೋಟು ರದ್ದತಿಗೆ ಒತ್ತಾಯಿಸುವ ಕೆಲ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತಿದೆ. ಅದೇ ರೀತಿಯಲ್ಲಿ ದೇಶದಲ್ಲಿ 100 ರೂಪಾಯಿ ನೋಟುಗಳು ಬ್ಯಾನ್ ಆಗುತ್ತದೆ ಅನ್ನುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸುದ್ದಿಗೆ ಈಗ RBI ಸ್ಪಷ್ಟನೆ ನೀಡಿದೆ 

100 Rs Note Ban
Image Credit: Oneindia

ಹಳೆಯ 100 ರೂಪಾಯಿ ನೋಟು ರದ್ದು

ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಳೆಯ 100 ರೂಪಾಯಿ ನೋಟು ರದ್ದಾಗಲಿದೆ ಎಂದು ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಆರ್‌ಬಿಐ ಮಾರ್ಚ್ 31, 2024 ಅನ್ನು ಇದಕ್ಕೆ ಕೊನೆಯ ದಿನಾಂಕ ಎಂದು ನಿಗದಿಪಡಿಸಿರುವುದರಿಂದ ಈ ನೋಟುಗಳನ್ನು ತಕ್ಷಣವೇ ಬ್ಯಾಂಕ್‌ ಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲೇ ಈ ಪೋಸ್ಟ್ ವೈರಲ್ ಆಗಿತ್ತು. ಹಳೆ 100 ರೂಪಾಯಿ ನೋಟುಗಳ ಬಗ್ಗೆ ಜನರಲ್ಲಿ ಚರ್ಚೆ ಶುರುವಾಗಿದೆ.

100 Rs Note Ban Latest Update
Image Credit: Scroll

ಎಲ್ಲಾ ವದಂತಿಗಳಿಗೂ ಆರ್‌ಬಿಐಯಿಂದ ಸ್ಪಷ್ಟನೆ

Join Nadunudi News WhatsApp Group

ಹಳೆಯ 100 ರೂಪಾಯಿ ನೋಟನ್ನು ಅಂಗಡಿಯವರೊಬ್ಬರು ತೆಗೆದುಕೊಂಡಿಲ್ಲ, ಈ ಬಗ್ಗೆ ಯಾವುದೇ ಆದೇಶ ಹೊರಡಿಸಲಾಗಿದ್ಯಾ? ಅಂತ ಒಬ್ಬರು ಆರ್‌ಬಿಐ ಗೆ ಟ್ಯಾಗ್ ಮಾಡಿದ್ದಾರೆ. ಹಳೆಯ 100 ರೂಪಾಯಿ ನೋಟುಗಳು ನಿಜವಾಗಿಯೂ ರದ್ದಾಗಿರುವ ಕುರಿತು ಆರ್‌ಬಿಐ ಯಾವುದೇ ಘೋಷಣೆ ಮಾಡಿಲ್ಲಎಂದು ಈ ಬಗ್ಗೆ ಆರ್‌ಬಿಐ ಪ್ರತಿನಿಧಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಮುಕ್ತಯಗೊಂಡಿದೆ. ಯಾವುದೇ ನೋಟುಗಳ ರದ್ದತಿ ಕುರಿತು, ಏನೇ ವಿಚಾರ ಇರಲಿ ಅದನ್ನು RBI ತಿಳಿಸಲಿದ್ದು, ಜನರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎನ್ನಲಾಗಿದೆ.

Join Nadunudi News WhatsApp Group