1000 Rs Update: ದೇಶದಲ್ಲಿ ಚಲಾವಣೆಗೆ ಬರುತ್ತಾ 1000 ರೂ. ನೋಟುಗಳು…? RBI ಸ್ಪಷ್ಟನೆ.

1000 ರೂಪಾಯಿ ನೋಟುಗಳು ಮತ್ತೆ ಚಲಾವಣೆಗೆ ಬರುವುದರ ಬಗ್ಗೆ ಸ್ಪಷ್ಟನೆ ನೀಡಿದ RBI.

1000 Rs Note Latest Update: ದೇಶದಲ್ಲಿ Note Ban ಭೀತಿ ಆಗಾಗ ಹೆಚ್ಚುತ್ತಲೇ ಇರುತ್ತವೆ. ಅದಕ್ಕೆ ಕಾರಣವೆಂದರೆ ಸೋಶಿಯಲ್ ಮೀಡಿಯಾದಲ್ಲಿ ಹರಡುವ ಸುದ್ದಿಗಳಾಗಿವೆ. ಕೇಂದ್ರ ಮೋದಿ ಸರ್ಕಾರ 2016 ರಲ್ಲಿ ಒಮ್ಮೆ ನೋಟ್ ಬ್ಯಾನ್ ಮಾಡಿದಾಗಿನಿಂದ ನೋಟ್ ಬ್ಯಾನ್ ವಿಚಾರವಾಗಿ ಹೊಸ ಹೊಸ ಸುದ್ದಿಗಳು ಹರಿದಾಡುತ್ತಲೇ ಇದ್ದಿದ್ದವು.

ಇನ್ನು 2016 ರ ಬಳಿಕ 2023 ಮೇ 19 ರಂದು RBI ಚಾಲ್ತಿಯಲ್ಲಿರುವ 2000 ಮುಖಬೆಲೆಯ ನೋಟ್ ಗಳನ್ನೂ ಅಮಾನ್ಯಗೊಳಿಸಿತ್ತು.ಈಗಾಗಲೇ 2000 ನೋಟುಗಳ ವಿನಿಮಯ ಅಥವಾ ಠೇವಣಿಗೆ ನೀಡಿದ ಸಮಯಾವಕಾಶ ಮುಗಿದಿದ್ದು, ದೇಶದಲ್ಲಿ 2000 ರೂ. ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಂಡಿದೆ.

ಇದೀಗ 2000 ರೂ. ನೋಟುಗಳ ರದ್ದತಿಯ ನಂತರ ಮತ್ತೆ 1000 ರೂ. ನೋಟುಗಳು ಚಲಾವಣೆಗೆ ಬರಲಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಇನ್ನು 1000 ರೂ. ನೋಟುಗಳು ಚಲಾವಣೆಗೆ ಬರುವ ಬಗ್ಗೆ RBI ಏನು ಹೇಳುತ್ತದೆ ಎಂದು ನೋಡೋಣ.

1000 Rs Note Latest Update
Image Credit: Studycafe

ದೇಶದಲ್ಲಿ ಚಲಾವಣೆಗೆ ಬರುತ್ತಾ 1000 ರೂ. ನೋಟುಗಳು..?
ಇನ್ನು 2016 ರಲ್ಲಿ ರೂ. 500 ಹಾಗೂ ರೂ. 1000 ರೂ. ನೋಟುಗಳನ್ನು ಮೋದಿ ಸರ್ಕಾರ ಅಮಾನ್ಯಗೊಳಿಸಿರುವುದು ಎಲ್ಲರಿಗು ತಿಳಿದೇ ಇದೆ. 2016 ರಿಂದ ದೇಶದಲ್ಲಿ ರೂ. 500 ಹಾಗೂ ರೂ. 1000 ರೂ. ನೋಟುಗಳಿಗೆ ಯಾವುದೇ ಮೌಲ್ಯ ಇರಲಿಲ್ಲ. 2016 ರ ನೋಟ್ ಬ್ಯಾನ್ ಬಳಿಕ ಹೊಸ 500 ರೂ. ಹಾಗೂ ಹೊಸ 2000 ರೂ. ಚಲಾವಣೆಗೆ ಬಂದಿದ್ದವು.

ಸದ್ಯ 2000 ರೂಪಾಯಿ ನೋಟು ಕೂಡ ಅಮಾನ್ಯಗೊಂಡಿದ್ದು, 500 ರೂ. ಮಾತ್ರ ದೊಡ್ಡ ಮೊತ್ತದ ಭಾರತೀಯ ಕರೆನ್ಸಿಯಾಗಿ ಉಳಿದುಕೊಂಡಿದೆ. ಸದ್ಯ ದೇಶದಲ್ಲಿ ಮತ್ತೆ 1000 ರೂ. ಚಲಾವಣೆಗೆ ಬರುವುದಾಗಿ ಸುದ್ದಿ ವೈರಲ್ ಆಗುತ್ತಿದೆ. ಆದರೆ RBI “ದೇಶದಲ್ಲಿ ಮತ್ತೆ 1000 ರೂ. ನೋಟುಗಳನ್ನು ಜಾರಿಗೆ ತರುವ ಯೋಜನೆಯನ್ನು ಕೇಂದ್ರ ಸರ್ಕಾರವಾಗಲಿ, RBI ಆಗಲಿ ನಿರ್ಧರಿಸಿಲ್ಲ” ಎಂದು ಸ್ಪಷ್ಟನೆ ನೀಡಿದೆ. ದೇಶದಲ್ಲಿ ಮತ್ತೆ 1000 ರೂ. ನೋಟುಗಳು ಚಲಾವಣೆಗೆ ಬರುವುದಿಲ್ಲ ಎನ್ನುವುದು ಖಾತ್ರಿಯಾಗಿದೆ.

Join Nadunudi News WhatsApp Group

1000 Rs Note Latest Update
Image Credit: Odishabhaskar

2000 ರೂ. ನೋಟುಗಳನ್ನು ಇಲ್ಲಿ ಮಾತ್ರ ಬದಲಾಯಿಸಿಕೊಳ್ಳಬಹುದು
ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ.

Reserve Bank Of India (RBI) 19 ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

Join Nadunudi News WhatsApp Group