2000 Rs Update: 2000 ರೂ ನೋಟುಗಳ ಮೇಲೆ ರಾತ್ರೋರಾತ್ರಿ ಇನ್ನೊಂದು ಘೋಷಣೆ, RBI ಮಹತ್ವದ ಆದೇಶ.

ಇದೀಗ RBI 2000 ನೋಟುಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ.

2000 Note Exchange Latest Update: ಸದ್ಯ ದೇಶದಲ್ಲಿ 2023 ರ ಮೇ 19 ರಂದು 2,000 ರೂ ಮುಖಬೆಲೆಯ ನೋಟುಗಳನ್ನು Reserve Bank Of India ಬ್ಯಾನ್ ಮಾಡಿದೆ. ಈಗಾಗಲೇ ಆರ್ ಬಿಐ ಹೊಸ 2000 ನೋಟುಗಳ ರದ್ದತಿಯ ಬಗ್ಗೆ ಘೋಷಣೆ ಹೊರಡಿಸಿದೆ.

2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆದೇಶವನ್ನು ನೀಡಲಾಗಿದೆ. ಇದೀಗ RBI 2000 ನೋಟುಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ. ನೀವು ಇನ್ನು ಕೂಡ ನಿಮ್ಮ ಬಳಿ 2,000 ರೂ. ನೋಟುಗಳನ್ನು ಇಟ್ಟುಕೊಂಡಿದ್ದರೆ RBI ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯಿರಿ

2000 Note Exchange
Image Credit: Timesofindia

 

ಸೆಪ್ಟೆಂಬರ್ 30 ರ ನಂತರ 2000 ನೋಟುಗಳಿಗೆ ಬೆಲೆ ಇದೆಯಾ..?
ದೇಶದಲ್ಲಿ ರದ್ದಾಗಿರುವ 2000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ RBI ಸೆಪ್ಟೆಂಬರ್ ನ ವರೆಗೂ ಕಾಲಾವಕಾಶವನ್ನು ನೀಡಿದೆ. ಮೇ ಯಿಂದ ಸೆಪ್ಟೆಂಬರ್ ವರೆಗೆ ಕಾಲಾವಕಾಶವನ್ನು ನೀಡಿದ್ದು ಸೆಪ್ಟೆಂಬರ್ 30 ನೋಟು ವಿನಿಮಯ ಅಥವಾ ಠೇವಣಿಗೆ ಕೊನೆಯ ದಿನಾಂಕವಾಗಿದೆ. ಈಗಾಗಲೆ ಆರ್ ಬಿಐ ಈ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಾ ಇದೆ. ದೇಶದ ಜನರು ತಮ್ಮ ಬಳಿ ಇರುವ 2000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಅಗತ್ಯವಾಗಿದೆ.

ನೋಟು ವಿನಿಮಯ ದಿನಾಂಕದ ವಿಸ್ತರಣೆ ಸಾಧ್ಯವಿಲ್ಲ
ಈ ಹಿಂದೆ ನೋಟು ವಿನಿಮಯ ಹಾಗೂ ಠೇವಣಿಗೆ ನಿಗಧಿಪಡಿಸಿದ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. RBI ಕೊನೆಯ ದಿನಾಂಕದ ಮುಂದೂಡಿಕೆಯ ಬಗ್ಗೆ ಸಾಕಷ್ಟು ಬಾರಿ ಸ್ಪಷ್ಟನೇ ನೀಡಿದೆ. ಜನರು ಕೊನೆಯ ದಿನಾಂಕದ ವಿಸ್ತರಣೆಯ ನಿರೀಕ್ಷೆಯಲ್ಲಿದ್ದರು. ಆದರೆ RBI ಸೆಪ್ಟೆಂಬರ್ 30, 2,000 ರೂ ನೋಟಿನ ವಿನಿಮಯಕ್ಕೆ ಕೊನೆಯ ದಿನಾಂಕ ಎಂದು ಖಚಿತಪಡಿಸಿದೆ. ನೋಟು ವಿನಿಮಯದ ದಿನಾಂಕ ಬದಲಾವಣೆ ಆಗುವುದಿಲ್ಲ ಎನ್ನುವ ಬಗ್ಗೆ ಸ್ಪಷ್ಟನೇ ನೀಡಿದೆ.

Join Nadunudi News WhatsApp Group

RBI About 2000 Note Exchange
Image Credit: Ptcnews

ಇನ್ನು ಮೂರು ದಿನಗಳಲ್ಲಿ ಈ ಕೆಲಸ ಆಗಬೇಕಿದೆ
ಇನ್ನು ನೋಟು ವಿನಿಮಯದ ದಿನಾಂಕ ಹತ್ತಿರವಾಗುತ್ತಿದ್ದರು ಕೆಲವರು ಇನ್ನು ಕೂಡ ತಮ್ಮ ಬಳಿ ಇರುವ ಹಣವನ್ನು ವಿನಿಮಯ ಮಾಡಿಕೊಂಡಿಲ್ಲ. ಇನ್ನು 24,000 ಕೋಟಿ ರೂ. ಮೌಲ್ಯದ 2000 ನೋಟುಗಳು ಬ್ಯಾಂಕಿಗೆ ತಲುಪಿಲ್ಲ. ಅಂದರೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳಲ್ಲಿ ಶೇ. 93 ರಷ್ಟು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗೆ ತಲುಪಿದೆ.

ಇನ್ನು ಉಳಿದ ಶೇ. 7 ರಷ್ಟು ಹಣ ಬ್ಯಾಂಕಿಗೆ ತಲುಪಿಲ್ಲ. ಇನ್ನು ಕೂಡ ಜನರು ಹಣವನ್ನು ವಿನಿಮಯ ಮಾಡಿಕೊಳ್ಳುವುದು ಬಾಕಿ ಇದೆ. ಇನ್ನು ಮೂರು ದಿನಗಳು ಮಾತ್ರ ನೋಟು ವಿನಿಮಯ ಹಾಗೂ ಠೇವಣಿಗೆ ಅವಕಾಶ ಇರುವ ಕಾರಣ ಜನರು ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸುವುದು ಉತ್ತಮ.

Join Nadunudi News WhatsApp Group