2000 Note: 2000 ರೂ ನೋಟಿನ ಮೇಲೆ ರಾತ್ರೋರಾತ್ರಿ ಇನ್ನೊಂದು ಘೋಷಣೆ, ಸೇವೆ ಬಂದ್ ಮಾಡಿದ ಕೇಂದ್ರ ಸರ್ಕಾರ

2000 ರೂ ನೋಟಿನ ಮೇಲೆ ದಿಡೀರ್ ಇನ್ನೊಂದು ಘೋಷಣೆ

2000 Note Exchange Update: ದೇಶದಲ್ಲಿ May 19 ರಂದು RBI 2000 ರೂ. ನೋಟುಗಳನ್ನು ಅಮಾನ್ಯಗೊಳಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು ನೋಟು ವಿನಿಮಯ ಅಥವಾ ಠೇವಣಿ RBI ನಿಗದಿಪಡಿಸಿದ್ದ ದಿನಾಂಕ ಕೂಡ ಮುಗಿದಿದ್ದು, ದೇಶದಲ್ಲಿ 2000 ರೂ. ತನ್ನ ಮೌಲ್ಯವನ್ನು ಕಳೆದುಕೊಂಡಿದೆ ಎನ್ನಬಹುದು. October 7 ರ ವರೆಗೆ ಜನರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು.

ಆದರೆ October 8 ರಿಂದ ಬ್ಯಾಂಕ್ ನಲ್ಲಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಬ್ಯಾಂಕುಗಳ ಬದಲಾಗಿ 2000 ನೋಟುಗಳನ್ನು ಇಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ದಿನದಂದು 2000 ರೂ. ನೋಟಿನ ವಿನಿಮಯ ಸೌಲಭ್ಯ ಲಭ್ಯವಿರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

RBI About 2000 Note
Image Credit: India TV News

2000 ರೂ. ನೋಟಿನ ಕುರಿತು ಬಿಗ್ ಅಪ್ಡೇಟ್
ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ. Reserve Bank Of India (RBI) 19 ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯ ವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಜ. 22 ರಂದು 2000 ರೂ. ನೋಟಿನ ವಿನಿಮಯ ಸೌಲಭ್ಯ ಬಂದ್
2000 ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಮುಂದುವರೆಯಲಿದೆ ಹಾಗೂ ಜನರು ದೇಶದ ಯಾವುದೇ ಅಂಚೆ ಕಚೇರಿಯ ಮೂಲಕ ತನ್ನ ಬಳಿ ಇರುವ ಹಣವನ್ನು ಠೇವಣಿ ಮಾಡಬಹುದು ಎಂದು RBI ಅಧಿಕೃತ ಹೇಳಿಕೆ ನೀಡಿತ್ತು. ಅದರಂತೆಯೇ October 9 ರಿಂದ RBI ವಿತರ ಖಚೇರಿಗಳು 2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ.

2000 Note Latest Update
Image Credit: Hindustantimes

ಆದರೆ ಜನವರಿ 22 ರಂದು ಸರ್ಕಾರೀ ಕಚೇರಿಗಳನ್ನು ಅರ್ಧ ದಿನಗಳು ಮುಚ್ಚಲಾಗುವ ಕಾರಣ 22 ರ ಸೋಮವಾರ 2000 ನೋಟುಗಳ ವಿನಿಮಯ ಲಭ್ಯವಿರುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ. ಜನವರಿ 23 ರಿಂದ ಮತ್ತೆ ನೋಟು ವಿನಿಮಯ ಪ್ರಕ್ರಿಯೆ ಪುನರಾರಂಭಗೊಳ್ಳಲಿದೆ ಎಂದು RBI ಹೇಳಿಕೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group