2000 Rupees Note Ban: ಚಲಾವಣೆಗೆ ಬರಲಿದೆ ₹1000 ನೋಟ್, ಬ್ಯಾನ್ ಆಗುವ ಭೀತಿಯಲ್ಲಿ ₹2000 ನೋಟ್.

2000 Rupees Note Ban: ಈಗಾಗಲೇ ಹಳೆಯ ನೋಟ್ ಗಳು ಬ್ಯಾನ್ (Note Ban) ಆಗಿ ಮಾರುಕಟ್ಟೆಗೆ ಹೊಸ ನೋಟ್ ಗಳು ಬಂದಿವೆ. ಆದರೆ ಹೊಸ ವಿಷಯವೇನೆಂದರೆ ಎರಡು ಸಾವಿರದ ಹೊಸ ನೋಟ್ ಬ್ಯಾನ್ ಆಗುವ ಭೀತಿಯಲ್ಲಿದೆ. ಇನ್ನೂ ಎರಡು ಸಾವಿರದ ನೋಟ್ ಗಳು ಬ್ಯಾನ್ ಆಗಿ ಹೊಸ ನೋಟ್ ಗಳು ಬರುತ್ತದೆ ಎನ್ನುವ ಸುದ್ದಿ ಕೇಳಿ ಬಂದಿದೆ.

₹1000 note to be launched, ₹2000 note in danger of being banned
Image Credit: tv9hindi

 

ಬ್ಯಾನ್ ಆಗುವ ಭೀತಿಯಲ್ಲಿರುವ 2000 ನೋಟ್
ಹೊಸ ವರ್ಷದಲ್ಲಿ ಹಲವಾರು ರೂಲ್ಸ್ ಗಳು ಬದಲಾಗಲಿವೆ. ಇನ್ನೂ ಈಗಿನ 2000 ಸಾವಿರ ನೋಟ್ ಗಳು ಬ್ಯಾನ್ ಆಗಿ ಹೊಸ ನೋಟ್ ಗಳು ಮಾರುಕಟ್ಟೆಗೆ ಬರುತ್ತದೆ ಎಂದು ಕೇಳಿಬರುತ್ತಿದೆ.

ಮಾರುಕಟ್ಟೆಗೆ ಬರಲಿರುವ ಹೊಸ 1000 ರೂ ನೋಟ್
2023 ಜನವರಿ 1 ರಿಂದ 1000 ರೂಪಾಯಿ ನೋಟ್ ಗಳನ್ನೂ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಲಾಗುತ್ತಿದೆ. ಇದನ್ನು ನೋಡಿದ ಜನರು ನೋಟ್ ಬ್ಯಾನ್ ಆಗಿ ಇಷ್ಟು ವರ್ಷ ಆಗಿ ಹೊಸ 1000 ರೂ ನೋಟ್ ಬರುತ್ತಾ ಎಂದು ತಲೆಕೆಡಿಸಿಕೊಂಡಿದ್ದಾರೆ.

1000 rupees notes will come into circulation again
Image Credit: businesstoday

ಸ್ಪಷ್ಟನೆ ನೀಡಿದ ಪಿಐಬಿ (PIB)
2000 ರೂ. ನ ನೋಟ್ ಗಳು ಬ್ಯಾನ್ ಆಗಿ ಹೊಸ 1000 ರೂ. ನೋಟ್ ಗಳು ಮಾರುಕಟ್ಟೆಗೆ ಬರುತ್ತದೆ ಎಂದು ವೈರಲ್ ಆಗಿರುವ ವಿಡಿಯೋ ಬಗ್ಗೆ ಪಿಐಬಿ ಮಾಹಿತಿ ನೀಡಿದೆ. ವಿಡಿಯೋದಲ್ಲಿ ಬಂದ ಮಾಹಿತಿ ಸುಳ್ಳು, ಹಾಗೂ ಈ ವಿಡಿಯೋವನ್ನು ಫಾರ್ವರ್ಡ್ ಮಾಡಬಾರದು ಎಂದು ಪಿಐಬಿ ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿದೆ.

Join Nadunudi News WhatsApp Group

ವೈರಲ್ ಆದ ವಿಡಿಯೋದಲ್ಲಿ ಇದ್ದ ಮಾಹಿತಿ
2000 ರೂ. ನ ನೋಟ್ ಗಳು ಬ್ಯಾನ್ ಆಗಿ ಹೊಸ 1000 ರೂ. ನೋಟ್ ಗಳು ಮಾರುಕಟ್ಟೆಗೆ ಬರುತ್ತದೆ ಎಂದು ವೈರಲ್ ಆದ ಸಂದೇಶದಲ್ಲಿ ಹೇಳಲಾಗಿದೆ. 5೦,೦೦೦ ಮಾತ್ರ ಠೇವಣಿ ಇಡಲು ನಿಮಗೆ ಅವಕಾಶವಿರುತ್ತದೆ. ಈ ಅನುಮತಿಯೂ 10 ದಿನಗಳವರೆಗೆ ಮಾತ್ರ ಇರುತ್ತದೆ. ನಂತರ ನೋಟುಗಳಿಗೆ ಯಾವುದೇ ಮೌಲ್ಯವಿರುದಿಲ್ಲ.

2000 rupee note ban news has gone viral on social media
Image Credit: timesnownews

ಹೀಗಾಗಿ 2000 ರೂಪಾಯಿಯ ನೋಟುಗಳನ್ನು ಹೆಚ್ಚು ಇಟ್ಟುಕೊಳ್ಳಬೇಡಿ ಎಂದು ವೈರಲ್ ಆದ ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ಪಿಐಬಿ ವೈರಲ್ ಆದ ವಿಡಿಯೋ ದಲ್ಲಿ ನೀಡಿದ ಮಾಹಿತಿ ನಕಲಿ ಎಂದು ಸ್ಪಷ್ಟ ಪಡಿಸಿದೆ.

Join Nadunudi News WhatsApp Group