500 Rs Update: 500 ರೂ ನೋಟು ಬಳಸುವವರಿಗೆ ಎಚ್ಚರಿಕೆ ನೀಡಿದ RBI, ರಾತ್ರೋರಾತ್ರಿ ಮಹತ್ವದ ಘೋಷಣೆ.

ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಕಲಿ ಹಾಗೂ ಅಸಲಿ ನೋಟುಗಳ ಪತ್ತೆಹಚ್ಚುವಿಕೆಯ ಬಗ್ಗೆ RBI ಮಾಹಿತಿ ನೀಡಿದೆ.

500 Rs fake Note Identification: ದೇಶದಲ್ಲಿ ಪ್ರಸ್ತುತ 2000 ರೂ. ಗಳನ್ನೂ ರದ್ದು ಮಾಡಲಾಗಿದೆ. ರದ್ದಾಗಿರುವ 2000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ Septembar 30 ಕೊನೆಯ ದಿನಾಂಕವಾಗಿದೆ. ಇನ್ನು ದೇಶದ್ಲಲಿ 2000 ರೂ. ರದ್ದಾದ ಬಳಿಕ ನೋಟುಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿವೆ.

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ಆಗಾಗ ಬೆಳಕಿಗೆ ಬರುತ್ತವೆ. ಈ ಹಿಂದೆ ಹಳೆಯ 5,00 ಹಾಗೂ 1,000 ರೂ.ಮುಖಬೆಲೆಯ ನೋಟುಗಳು ಚಲಾವಣೆಗೊಳ್ಳುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವೈರಲ್ ಸುದ್ದಿಯ ಬಗ್ಗೆ ಕೇಂದ್ರ ಸರ್ಕಾರ (Central Government) ಈಗಾಗಲೇ ಸ್ಪಷ್ಟನೆ ನೀಡಿದೆ.

500 Rs fake Note Identification
Image Credit: Businesstoday

 

ದೇಶದಲ್ಲಿ ಹೆಚ್ಚುತ್ತಿದೆ 500 ರೂ.ನಕಲಿ ನೋಟುಗಳು
ಇನ್ನು ಇದೀಗ ನೋಟಿನ ವಿಚಾರವಾಗಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಕಲಿ  500 ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ಬಂದಿದೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಕಲಿ ಹಾಗೂ ಅಸಲಿ ನೋಟುಗಳ ಪತ್ತೆಹಚ್ಚುವಿಕೆಯ ಬಗ್ಗೆ ಆರ್ ಬಿಐ (RBI) ಮಾಹಿತಿ ನೀಡಿದೆ. ನಿಮ್ಮ ಬಳಿ ಇರುವ 500 ರೂ. ನೋಟುಗಳು ಈ ಕೆಳಗಿನಂತಿಲ್ಲದಿದ್ದರೆ ಅದು ನಕಲಿ ನೋಟು ಎಂದು ಪರಿಗಣಿಸಬಹುದಾಗಿದೆ.

500 ರೂ ನೋಟು ಬಳಸುವವರಿಗೆ ಎಚ್ಚರಿಕೆ ನೀಡಿದ RBI
*ಮಹಾತ್ಮಗಾಂಧಿ ಸರಣಿಯಲ್ಲಿನ ರೂ. 500 ಮುಖಬೆಲೆಯ ನೋಟುಗಳು ಆರ್ ಬಿಐ ಗವರ್ನರ್ ಸಹಿಯನ್ನು ಹೊಂದಿದೆ.

Join Nadunudi News WhatsApp Group

*500 ರೂ. ನೋಟಿನ ಬಣ್ಣವು ಸ್ಟೋನ್ ಗ್ರೇ ಆಗಿದ್ದು, ಕೆಂಪು ಕೋಟೆಯ ಲಕ್ಷಣವನ್ನು ಹೊಂದಿದೆ.

*RBI ನೀಡಿರುವ ಮಾಹಿತಿಯ ಪ್ರಕಾರ, 500 ರೂ. ನೋಟಿನ ಗಾತ್ರವು 63 mm x 150 mm ಆಗಿದೆ.

*ದೇವನಾಗರಿ ಲಿಪಿಯಲ್ಲಿ ಭರತ್ ಮತ್ತು ಇಂಡಿಯಾ ಎಂದು ಬರೆಯಲಾಗಿದೆ.

500 Rs fake Note Identification method
Image Credit: Fortuneindia

*ಭಾರತ್ ಮತ್ತು RBI ಶಾಸನಗಳೊಂದಿಗೆ ಬಣ್ಣದ ಭದ್ರತಾ ದಾರ ಇರುತ್ತದೆ. ನೋಟನ್ನು ತಿರುಗಿಸಿದಾಗ ದಾರದ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

*500 ರೂ. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನ ಇರುತ್ತದೆ.

* ನೋಟಿನ ಮೇಲೆ ಎಡ ಮತ್ತು ಕೆಳಭಾಗದಲ್ಲಿ ಆರೋಹಣ ಹಾಗೂ ಮುಂಭಾಗದಲ್ಲಿ ಅಂಕಿಗಳೊಂದಿಗೆ ಸಂಖ್ಯೆಯ ಫಲಕವನ್ನು ಇರಿಸಲಾಗಿದೆ.

Join Nadunudi News WhatsApp Group