500 Rs Note: 500 ರೂ ನೋಟಿನ ಮೇಲೆ * ಚಿಹ್ನೆ ಇದ್ದರೆ ಅದು ನಕಲಿನಾ….? ಇಲ್ಲಿದೆ RBI ಕೊಟ್ಟ ಉತ್ತರ.

ನೋಟುಗಳ ಮೇಲೆ * ಚಿಹ್ನೆ ಇದ್ದರೆ ಅದು ನಕಲಿ ನೋಟ್, RBI ನಿಂದ ಸ್ಪಷ್ಟನೆ

500 Rs Fake Note: ದೇಶದಲ್ಲಿ ನೋಟ್ ಬ್ಯಾನ್ ಆದಾಗಿನಿಂದ ಪ್ರಸ್ತುತ ಚಲಾವಣೆಯಲ್ಲಿರುವ ನೋಟ್ ಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಅದರಲ್ಲೂ ದೇಶದಲ್ಲಿ 2000 ನೋಟ್ ಗಳ ಅಮಾನ್ಯಕರಣದ ನಂತರ 500 ರೂ. ನೋಟುಗಳ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿವೆ. 2000 ನೋಟಿನ ಬಳಿಕ 500 ರೂ. ಮುಖಬೆಲೆಯ ನೋಟ್ ಗಳು ಕೂಡ ರದ್ದಾಗಲಿದೆ ಎನ್ನುವ ಬಗ್ಗೆ ಸಾಕಷ್ಟು ವದಂತಿಗಳು ವೈರಲ್ ಆಗಿದ್ದವು.

ಇದಾದ ಬಳಿಕ RBI 500 ರೂ. ನೋಟುಗಳ ರದ್ದತಿಯ ಬಗ್ಗೆ ಸ್ಪಷ್ಟನೆ ನೀಡಿತ್ತು. ಇನ್ನು ನೋಟುಗಳ ರದ್ದತಿಯ ಸುದ್ದಿ ಕಡಿಮೆಯಾದ ನಂತರ ಇದೀಗ ನಕಲಿ 500 ರೂ. ನೋಟುಗಳ ಭೀತಿ ಆರಂಭವಾಗಿದೆ. 500 ರೂ. ಮುಖಬೆಲೆಯ ನಕಲಿ ನೋಟುಗಳು ಪ್ರಸ್ತುತ ಚಲಾವಣೆಯ ಆಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

500 Rs Fake Note
Image Credit: News 18

500 ರೂ ನೋಟಿನ ಮೇಲೆ * ಚಿಹ್ನೆ ಇದ್ದರೆ ಅದು ನಕಲಿನಾ….?
ಇದೀಗ ದೇಶದಲ್ಲಿ 500 ರೂ. ನಕಲಿ ನೋಟಿನ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. 500 ರೂ. ನೋಟಿನಲ್ಲಿ ಈ ಚಿಹ್ನೆ ಇದ್ದರೆ ನೋಟುಗಳು ನಕಲಿ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ವೈರಲ್ ಸುದ್ದಿ ಜನರಿಗೆ ಹೆಚ್ಚು ಚಿಂತೆಯನು ನೀಡುತ್ತಿದೆ ಎನ್ನಬಹುದು. 500 ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇರುವುದರಿಂದ ಬಹಳಷ್ಟು ಜನರು ಈ ನೋಟು ಪಡೆಯಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಈ ನೋಟು ನಕಲಿಯೋ ಅಸಲಿ ನೋಟೋ ಎಂಬ ಅನುಮಾನ ಹಲವರಿಗೆ ಇದೆ. ಹಾಗಾಗಿ 500 ರೂಪಾಯಿ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿ ಅಥವಾ ನಕಲಿ ಎನ್ನುವ ಬಗ್ಗೆ RBI ಏನು ಹೇಳುತ್ತದೆ ಎನ್ನುವುದನ್ನು ನೋಡೋಣ.

ಇಲ್ಲಿದೆ RBI ಕೊಟ್ಟ ಉತ್ತರ
500 ರೂಪಾಯಿ ನೋಟುಗಳು ಅಸಲಿ ಅಥವಾ ನಕಲಿ ಎಂಬ ಅನುಮಾನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ನಂಬರ್ ಪ್ಯಾನೆಲ್‌ ನಲ್ಲಿ ನಕ್ಷತ್ರ ಚಿಹ್ನೆ ಇರುವ ನೋಟುಗಳು ನಕಲಿ ಅಲ್ಲ, ಅಸಲಿ ನೋಟುಗಳು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ನಕ್ಷತ್ರ ಚಿಹ್ನೆ (*) ಗುರುತು ಇಲ್ಲದ ಇತರ ಬ್ಯಾಂಕ್ ನೋಟುಗಳಂತೆ ಇವುಗಳು ಅಸಲಿ ಎಂದು ಆರ್‌ಬಿಐ ವಿವರಿಸಿದೆ.

1 ರಿಂದ 100 ರವರೆಗಿನ ಕ್ರಮಸಂಖ್ಯೆಯ ನೋಟುಗಳಲ್ಲಿ ಮುದ್ರಣ ಸಮಸ್ಯೆಯಿದ್ದರೆ ಅವುಗಳ ಜಾಗದಲ್ಲಿ ಈ ನಕ್ಷತ್ರ ಚಿಹ್ನೆಯ ನೋಟುಗಳನ್ನು ಮುದ್ರಿಸಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ರೂ. 10 ನಾಣ್ಯಗಳನ್ನು ಕೆಲವರು ಮಾನ್ಯವೆಂದು ಪರಿಗಣಿಸುವುದಿಲ್ಲ. ರೂ.10 ನಾಣ್ಯವು ಮಾನ್ಯವಾಗಿರುತ್ತದೆ ಎಂದು ಆರ್‌ಬಿಐ ಪದೇ ಪದೇ ಹೇಳುತ್ತಿದೆ.

Join Nadunudi News WhatsApp Group

RBI About 500 Rs Note
Image Credit: Informalnewz

Join Nadunudi News WhatsApp Group