500 Rs Update: 500 ರೂ ನೋಟಿನ ಮೇಲೆ ರಾತ್ರೋರಾತ್ರಿ ಇನ್ನೊಂದು ಆದೇಶ ಹೊರಡಿಸಿದ RBI, ನೋಟ್ ಬಳಸುವ ಮುನ್ನ ಎಚ್ಚರ.

ನಕಲಿ ನೋಟುಗಳು ಹಾಗೂ ಅಸಲಿ ನೋಟುಗಳ ಗುರುತಿಸುವಿಕೆಗೆ RBI ಇದೀಗ ಹೊಸ ಮಾರ್ಗಸೂಚಿ ಹೊರಡಿಸಿದೆ.

500 Rs Fake Note Identification: ಸದ್ಯ 500 ರೂ. ನೋಟುಗಳು ಭಾರತೀಯ ಕರೆನ್ಸಿಯನ್ನು ಅತಿ ದೊಡ್ಡ ನೋಟಾಗಿ ಉಳಿದಿದೆ. ದೇಶದಲ್ಲಿ 2000 ರೂ. ನೋಟ್ ಬ್ಯಾನ್ (Note Ban) ನಿಂದಾಗಿ 500 ರೂ. ನೋಟಿನ ಪ್ರಾಮುಖ್ಯತೆ ಹೆಚ್ಚುವುದರ ಜೊತೆಗೆ ಜನತೆಗೆ ಈ ನೋಟಿನ ವಿಚಾರಕಾಗಿ ಸಾಕಷ್ಟು ಗೊಂದಲ ಕೂಡ ಉಂಟಾಗಿದೆ.

ಜನರಿಗೆ 500 ರೂ. ನೋಟಿನ ವಿಚಾರವಾಗಿ ಗೊಂದಲ ಉಂಟಾಗಲು ಮುಖ್ಯ ಕಾರಣ 500 ರೂ. ನಕಲಿ ನೋಟುಗಳು. ಈ ನಕಲಿ ನೋಟುಗಳ ಸಂಖ್ಯೆ ದೇಶದಲ್ಲಿ ಹೆಚ್ಚಿದೆ ಎನ್ನಬಹುದು. ಸಾಮಾನ್ಯ ವ್ಯಕ್ತಿಗೆ ನೋಟುಗಳ ಅಸಲಿ ಮತ್ತು ನಕಲಿಯನ್ನು ಕಂಡುಹಿಡಿಯುವುದು ಕಷ್ಟ. ಇದಕ್ಕಾಗಿ Reserve Bank Of India ಹೊಸ ಮಾರ್ಗವನ್ನು ಕಂಡು ಹಿಡಿದಿದೆ.

500 Rs. Fake Note Identification
Image Credit: Herzindagi

500 ರೂ. ನೋಟಿನ ಮೇಲೆ ರಾತ್ರೋರಾತ್ರಿ ಇನ್ನೊಂದು ಆದೇಶ ಹೊರಡಿಸಿದ RBI
ಸದ್ಯ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿದೆ. ಸದ್ಯದ ಪರಿಸ್ಥಿಯಲ್ಲಿ ಜನರಿಗೆ ನಕಲಿ ನೋಟುಗಳು ಹಾಗೂ ಅಸಲಿ ನೋಟುಗಳ ಗುರುತಿಸುವಿಕೆ ಕಷ್ಟವಾಗಿದೆ. ಜನರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು RBI ಇದೀಗ ಹೊಸ ಮಾರ್ಗಸೂಚಿ ಹೊರಡಿಸಿದೆ. RBI ಮಾರ್ಗಸೂಚಿಯ ಮೇರೆಗೆ ಜನರು ತಮ್ಮ ಬಳಿ ಇರುವ ನಕಲಿ ಹಾಗೂ ಅಸಲಿ 500 ರೂ. ಗಳ ನೋಟನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ನಿಮ್ಮ ಬಳಿ ಇರುವ 500 ರೂ. ನೋಟಿನ ಅಸಲೀಯತ್ತನ್ನು ಪರಿಶೀಲಿಸಿಕೊಳ್ಳಿ
*RBI ನೀಡಿರುವ ಮಾಹಿತಿಯ ಪ್ರಕಾರ, 500 ರೂ. ನೋಟಿನ ಗಾತ್ರವು 63 mm x 150 mm ಆಗಿದೆ.

*500 ರೂ. ನೋಟಿನ ಬಣ್ಣವು ಸ್ಟೋನ್ ಗ್ರೇ (ಕಲ್ಲು ಬೂದು ಬಣ್ಣ) ಆಗಿದ್ದು, ಕೆಂಪು ಕೋಟೆಯ ಲಕ್ಷಣವನ್ನು ಹೊಂದಿದೆ.

Join Nadunudi News WhatsApp Group

*ಮಹಾತ್ಮಗಾಂಧಿ ಸರಣಿಯಲ್ಲಿನ ರೂ. 500 ಮುಖಬೆಲೆಯ ನೋಟುಗಳು ಆರ್ ಬಿಐ ಗವರ್ನರ್ ಸಹಿಯನ್ನು ಹೊಂದಿದೆ.

*ದೇವನಾಗರಿ ಲಿಪಿಯಲ್ಲಿ ಭರತ್ ಮತ್ತು ಇಂಡಿಯಾ ಎಂದು ಬರೆಯಲಾಗಿದೆ.

500 Rs Update
Image Credit: Original Source

*ಭಾರತ್ ಮತ್ತು RBI ಶಾಸನಗಳೊಂದಿಗೆ ಬಣ್ಣದ ಭದ್ರತಾ ದಾರ ಇರುತ್ತದೆ. ನೋಟನ್ನು ತಿರುಗಿಸಿದಾಗ ದಾರದ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

*500 ರೂ. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನ ಇರುತ್ತದೆ.

*ನೋಟಿನ ಮೇಲೆ ಎಡ ಮತ್ತು ಕೆಳಭಾಗದಲ್ಲಿ ಆರೋಹಣ ಹಾಗೂ ಮುಂಭಾಗದಲ್ಲಿ ಅಂಕಿಗಳೊಂದಿಗೆ ಸಂಖ್ಯೆಯ ಫಲಕವನ್ನು ಇರಿಸಲಾಗಿದೆ.

*500 ರೂಪಾಯಿ ಮುಖಬೆಲೆಯ ನೋಟು ಎಲೆಕ್ಟ್ರೋಟೈಪ್ ವಾಟರ್‌ ಮಾರ್ಕ್ ಅನ್ನು ಹೊಂದಿದೆ.

Join Nadunudi News WhatsApp Group