Note Ban: 1978 ರಲ್ಲಿ 5,000 ಮತ್ತು 10,000 ರೂ ನೋಟ್ ಬ್ಯಾನ್ ಮಾಡಿದ್ದು ಯಾಕೆ, ಸಾಕಷ್ಟು ಜನರಿಗೆ ತಿಳಿದಿಲ್ಲ.

5000 ಮತ್ತು 10000 ನೋಟುಗಳ ಚಲಾವಣೆಯನ್ನು ನಿಲ್ಲಿಸಲು ಕಾರಣ ಏನೆನ್ನುವ ಬಗ್ಗೆ ಮಾಹಿತಿ ಲಭಿಸಿದೆ.

5,000 And 10,000 Rs Note Note Ban In India: ದೇಶದೆಲ್ಲೆಡೆ ಇದೀಗ ನೋಟು ಅಮಾನ್ಯೀಕರಣದ (Note Ban) ಸುದ್ದಿಗಳು ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಆರ್ ಬಿಐ ಹೊಸ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಜನಸಾಮಾನ್ಯರಿಗೆ ಸೆಪ್ಟೆಂಬರ್ 30 ರ ತನಕ ನೋಟು ವಿನಿಮಯ ಪ್ರಕ್ರಿಯೆಗೆ ಸಮಯಾವಕಾಶವನ್ನು ನೀಡಿದೆ.

ಇನ್ನು 2016 ರ ರಲ್ಲಿ 5,00 ಮತ್ತು 1,000 ನೋಟುಗಳನ್ನು ಬ್ಯಾನ್ ಮಾಡಲಾಗಿತ್ತು. ದೇಶದಲ್ಲಿನ ಕಪ್ಪು ಹಣ ನಿರ್ಮೂಲನೆಗಾಗಿ ಕೇಂದ್ರದ ಮೋದಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

10000 and 5000 notes were banned in 1978.
Image Credit: incredibleorissa

ದೇಶದಲ್ಲಿ 5,000 ಮತ್ತು 10,000 ನೋಟುಗಳು ಚಲಾವಣೆಯಲ್ಲಿದ್ದವು
ಇನ್ನು 5,00 ಮತ್ತು 1,000 ನೋಟುಗಳು ಮುದ್ರಣವಾಗುವ ಮೊದಲು 5000 ಮತ್ತು 10000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ 5,000 ಮತ್ತು 10,000 ನೋಟುಗಳ ಚಲಾವಣೆಯನ್ನು ಕೂಡ ನಿಲ್ಲಿಸಲಾಗಿತ್ತು. ಇದೀಗ 5,000 ಮತ್ತು 10,000 ನೋಟುಗಳ ಚಲಾವಣೆಯನ್ನು ನಿಲ್ಲಿಸಲು ಕಾರಣ ಏನು ಅನ್ನುವ ಬಗ್ಗೆ ಮಾಹಿತಿ ಲಭಿಸಿದೆ.

ಭಾರತದಲ್ಲಿ 5,000 ಮತ್ತು 10,000 ರೂ ನೋಟುಗಳನ್ನ ಬ್ಯಾನ್ ಮಾಡಿದ್ದು ಯಾಕೆ
ಆರ್ ಬಿಐ ಮೊದಲ ಬಾರಿಗೆ 1938 ರಲ್ಲಿ 10,000 ರೂಪಾಯಿಯ ನೋಟುಗಳನ್ನು ಮುದ್ರಣ ಮಾಡಿದೆ. ಆದರೆ 1946 ರಲ್ಲಿ ನೋಟುಗಳ ಚಲಾವಣೆಯನ್ನು ನಿಲ್ಲಿಸಿ ಮತ್ತೆ 1954 ರಲ್ಲಿ ಆರಂಭಿಸಿತು. ಆದರೆ ಕೊನೆಯದಾಗಿ ಮತ್ತೆ 1978 ರಲ್ಲಿ 10,000 ಮತ್ತು 5,000 ನೋಟುಗಳನ್ನು ಬ್ಯಾನ್ ಮಾಡಿತ್ತು.

5 and 10 thousand notes starting again
Image Credit: indiatimes

ಮತ್ತೆ ಆರಂಭವಾಗುತ್ತಾ 5 ಮತ್ತು10 ಸಾವಿರ ನೋಟುಗಳು
ಆರ್ ಬಿಐ ನ ಮಾಜಿ ಗವರ್ನರ್ 5,000 ಮತ್ತು 10,000 ನೋಟುಗಳನ್ನು ಮತ್ತೆ ಆರಂಭಿಸಲು ಸಲಹೆ ನೀಡಿದ್ದರು. 2014 ರ ಅಕ್ಟೊಬರ್ ನಲ್ಲಿ ಕೇಂದ್ರ ಬ್ಯಾಂಕ್ ಈ ಬಗ್ಗೆ ಶಿಫಾರಸ್ಸು ಮಾಡಿದೆ ಎನ್ನುವ ಮಾಹಿತಿ ಲಭಿಸಿದೆ. ಹಣದುಬ್ಬರದ ಕಾರಣ 1,000 ನೋಟಿನ ಮೌಲ್ಯ ಕುಸಿಯುತ್ತಿದೆ ಎಂದು 5 ಮತ್ತು 10 ಸಾವಿರ ನೋಟುಗಳನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

Join Nadunudi News WhatsApp Group

 

Join Nadunudi News WhatsApp Group