55 Inch Smart TV: 55 ಇಂಚಿನ ಸ್ಮಾರ್ಟ್ ಟಿವಿ ಈಗ ಕೇವಲ 45 ಸಾವಿರಕ್ಕೆ, ಹೊಸ ಟಿವಿ ಖರೀದಿಸಲು ಇದು ಬೆಸ್ಟ್ ಟೈಮ್

55 ಇಂಚಿನ ಸ್ಮಾರ್ಟ್ ಟಿವಿಯನ್ನು ಈಗ 45 ಸಾವಿರಕ್ಕೆ ಖರೀದಿ ಮಾಡಬಹುದು

55 inches Best Smart TV: ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ TV ಇದ್ದೆ ಇರುತ್ತದೆ. ಸದ್ಯ ಜನರು ಟ್ರೆಂಡ್ ಗೆ ತಕ್ಕಂತೆ ಬದಲಾಗುತ್ತಿದ್ದಾರೆ. ಹಾಗಾಗಿ ಎಲ್ಲರ ಮನೆಯಲ್ಲೂ Smart TV ಬಳಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಂತೂ ಅನೇಕ ಬ್ರಾಂಡ್ ನ ಸ್ಮಾರ್ಟ್ ಟಿವಿಗಳು ಲಭ್ಯವಾಗುತ್ತಿದೆ.

ನಿಮ್ಮ ಆಯ್ಕೆಗೆ ಅನುಗುಣವಾಗಿ ವಿಭಿನ್ನ ಬೆಲೆಯೊಂದಿಗೆ ನೀವು ಆಕರ್ಷಕ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದಾಗಿದೆ. ಇನ್ನು ನೀವು 55 ಇಂಚಿನ ಸ್ಮಾರ್ಟ್ ಟಿವಿಯನ್ನು ಕೊಂಡುಕೊಳ್ಳುವ ಯೋಜನೆಯ್ಲಲಿದ್ದರೆ ಈ ಲೇಖನವನ್ನು ಒಮ್ಮೆ ಓದಿ. ನಾವೀಗ ನಿಮ್ಮ ಬಜೆಟ್ ಬೆಲೆಯಲ್ಲಿ ಲಭ್ಯವಾಗುವಂತಹ 55 ಇಂಚಿನ ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

LG HD Smart LED TV
Image Credit: Secondkart

55 ಇಂಚಿನ ಸ್ಮಾರ್ಟ್ ಟಿವಿ ಈಗ ಕೇವಲ 45 ಸಾವಿರಕ್ಕೆ
•LG HD Smart LED TV
ಇನ್ನು 55 ಇಂಚಿನ ಸ್ಮಾರ್ಟ್ ಟಿವಿಗಾಗಿ ಹುಡುಕುತ್ತಿರುವವರು LG ಯ 4K ಅಲ್ಟ್ರಾ HD ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಈ ಟಿವಿಯು 60 Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 4K ರೆಸಲ್ಯೂಶನ್ (3840×2160) ಪಿಕ್ಸೆಲ್‌ ಗಳೊಂದಿಗೆ ಬರುತ್ತದೆ. ಈ ಟಿವಿ ವೈ-ಫೈ ಬಿಲ್ಡ್ ಸೇರಿದಂತೆ ಹಲವು ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ನೀವು 2 USB ಪೋರ್ಟ್‌ ಗಳನ್ನು ಪಡೆಯುತ್ತೀರಿ. ಮಾರುಕಟ್ಟೆಯಲ್ಲಿ ಈ ಟಿವಿ 43,990 ರೂ. ಗಳಲ್ಲಿ ಲಭ್ಯವಿದೆ.

•Xiaomi 55 inch Smart TV
Xiaomi ಯ ಈ ಸ್ಮಾರ್ಟ್ ಟಿವಿ 55 ಇಂಚುಗಳೊಂದಿಗೆ ಬರುತ್ತದೆ. ಇದರಲ್ಲಿ ನೀವು 4K ರೆಸಲ್ಯೂಶನ್ ಮತ್ತು 60Hz ನ ರಿಫ್ರೆಶ್ ದರ ಬೆಂಬಲವನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ Google TV, ಅಂತರ್ನಿರ್ಮಿತ Chromecast ಮತ್ತು Google Assistant ಅನ್ನು ಸಹ ನೀಡಲಾಗಿದೆ. ಇದು Netflix, Prime Video ಮತ್ತು YouTube ನಂತಹ ಅಪ್ಲಿಕೇಶನ್‌ಗಳನ್ನು ಸಹ ಒದಗಿಸುತ್ತದೆ. ನೀವು ಇದರ ಬೆಲೆ 39,999 ರೂ. ಆಗಿದೆ.

Vu 55 inch Smart TV
Image Credit: India Mart

•Vu 55 inch Smart TV
ಈ ಟಿವಿ 60Hz ರಿಫ್ರೆಶ್ ದರದೊಂದಿಗೆ 4K ರೆಸಲ್ಯೂಶನ್‌ ನೊಂದಿಗೆ ಬರುತ್ತದೆ. ಇದರಲ್ಲಿ ನೀವು ಡಾಲ್ಬಿ ಅಟ್ಮಾಸ್ ಮತ್ತು ಪೂರ್ಣ-ಶ್ರೇಣಿಯ 4-ಸ್ಪೀಕರ್ ಸೆಟಪ್‌ ನೊಂದಿಗೆ ಶಕ್ತಿಯುತ ಧ್ವನಿಯನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ ಗೂಗಲ್ ಟಿವಿ, ಕಿಡ್ಸ್ ಮೋಡ್ ಮತ್ತು ಗೂಗಲ್ ಪ್ಲೇ ಸ್ಟೋರ್‌ ನಂತಹ ಕೆಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್ ಟಿವಿಯ ಬೆಲೆ ರೂ. 37,999 ಆಗಿದೆ.

Join Nadunudi News WhatsApp Group

•TCL 55 inch Smart TV
QLED ಡಿಸ್ಪ್ಲೇ ತಂತ್ರಜ್ಞಾನದೊಂದಿಗೆ 55 ಇಂಚಿನ TCL ನ ಈ ಸ್ಮಾರ್ಟ್ ಟಿವಿ ಸಹ ನಿಮ್ಮ ಆಯ್ಕೆಗೆ ಲಭ್ಯವಿದೆ. ಈ ಟಿವಿಯಲ್ಲಿ ನೀವು ನೆಟ್‌ ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್ ಸೇರಿದಂತೆ ಹಲವು ಅಪ್ಲಿಕೇಶನ್‌ ಗಳ ಬೆಂಬಲವನ್ನು ಪಡೆಯುತ್ತೀರಿ. ಇದಲ್ಲದೆ, ಇದು 24 W ನ ಧ್ವನಿ ಉತ್ಪಾದನೆಯನ್ನು ಸಹ ಹೊಂದಿದೆ. ಈ ಟಿವಿಯ ಬೆಲೆ 32,999 ರೂ. ಆಗಿದೆ.

TCL 55 inch Smart TV
Image Credit: pcmag

Join Nadunudi News WhatsApp Group