October Rule: ಇಂದಿನಿಂದ ಈ 7 ಹಣಕಾಸು ನಿಯಮಗಳು ಬದಲಾಗಿದೆ, ಹೊಸ ನಿಯಮದ ಬಗ್ಗೆ ಅರಿವಿರಲಿ.

ಸದ್ಯ ಈ 7 ಹಣಕಾಸಿನ ನಿಯಮದಲ್ಲಿ October 1 ರಿಂದ ಮಹತ್ವದ ಬದಲಾವಣೆ ಆಗಲಿದೆ.

7 Financial Rules Changed In October 1st: October 2023 ತಿಂಗಳು ಆರಂಭಗೊಂಡಿದ್ದು ಇಂದಿನ ದೇಶದಲ್ಲಿ ಅನೇಕ ನಿಯಮಗಳು ಜಾರಿಗೆ ಬರಲಿವೆ. Septembar ತಿಂಗಳ ಪ್ರಾರಂಭದಿಂದ ಅನೇಕ ನಿಯಮಗಳು ಬದಲಾಗಿದ್ದವು. ಪ್ರತಿ ತಿಂಗಳ ಆರಂಭದಲ್ಲಿ ಬದಲಾಗುವ ನಿಯಮದ ಬಗ್ಗೆ ಜನರು ತಿಳಿಯುವುದು ಉತ್ತಮ.

ಇದೀಗ ಸೆಪ್ಟೆಂಬರ್ ಮುಗಿದು ಅಕ್ಟೊಬರ್ ಆರಂಭವಾಗಿದ್ದು, ಇಂದಿನ ಹಣಕಾಸಿನ ಅನೇಕ ನಿಯಮಗಳು ಬದಲಾಗಲಿವೆ. ಅಕ್ಟೊಬರ್ ತಿಂಗಳಲ್ಲಿನ ನಿಯಮದ ಬದಲಾವಣೆ ಜನರಿಗೆ ಆರ್ಥಿಕ ಹೊರೆಯನ್ನು ನೀಡಲಿದೆ. ಸದ್ಯ ಈ 7 ಹಣಕಾಸಿನ ನಿಯಮದಲ್ಲಿ October 1 ರಿಂದ ಮಹತ್ವದ ಬದಲಾವಣೆ ಆಗಲಿದೆ. ನೀವು ಯಾವುದೇ ಹಕಾಸಿನ ವ್ಯವಹಾರ ಮಾಡುವ ಮುನ್ನ ಈ ಬದಲಾಗಿರುವ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

gas price hike
Image Credit: India

ಇಂದಿನಿಂದ ಈ 7 ಹಣಕಾಸು ನಿಯಮಗಳು ಬದಲಾಗಿದೆ
*LPG Gas Cylinder Price Hike
Septembar ತಿಂಗಳಿನಲ್ಲಿ ಜನರು ಗ್ಯಾಸ್ ಸಿಲಿಂಡರ್ ನಲ್ಲಿ 200 ರೂ. ಇಳಿಕೆಯನ್ನು ಕಂಡಿತ್ತು. ಕಳೆದ ತಿಂಗಳು ಇಳಿಕೆ ಕಂಡಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಇದೀಗ October ತಿಂಗಳ ಮೊದಲ ದಿನವೇ ಏರಿಕೆ ಕಂಡಿದೆ. ತೈಲ ಮಾರುಕಟ್ಟೆಯ ಕಂಪನಿಗಳು LPG ವಾಣಿಜ್ಯ Gas Cylinder ಬೆಲೆಯಲ್ಲಿ 209 ರೂ. ಏರಿಕೆ ಮಾಡಿದೆ. October 1 ರಿಂದ ಹೊಸ LPG ದರ ಜಾರಿಗೆ ಬರಲಿದೆ.

*ATF Price Hike
ಇದೀಗ ತೈಲ ಮಾರುಕಟ್ಟೆ ಕಂಪನಿಗಳು ವಿಮಾನ ಇಂಧನ ಬೆಲೆಯನ್ನು ಹೆಚ್ಚಿಸಿವೆ. ರಾಜಧಾನಿ ದೆಹಲಿಯಲ್ಲಿ, ಎಟಿಎಫ್ ಪ್ರತಿ ಕಿಲೋಲೀಟರ್‌ ಗೆ 5.50 ಪ್ರತಿಶತದಷ್ಟು ದುಬಾರಿಯಾಗಿ 1,18,199.17 ರೂ.ಗೆ ಮಾರಾಟವಾಗುತ್ತಿದೆ.

credit card and debit card
Image Credit: Mashable

*Natural Gas Price Increased
ಗೃಹಬಳಕೆಯ ನೈಸರ್ಗಿಕ ಅನಿಲದ ಬೆಲೆಯೂ ಇಂದಿನಿಂದ ಏರಿಕೆಯಾಗಿದೆ. ಇಂದಿನಿಂದ ದೇಶೀಯ ನೈಸರ್ಗಿಕ ಅನಿಲದ ಬೆಲೆಯು $8.60/MMBTU ನಿಂದ $9.20/mBtu ಗೆ ಹೆಚ್ಚಾಗಿದೆ. ಈ ಹೆಚ್ಚಳದ ನಂತರ, ವಿದ್ಯುತ್ ವಲಯ, ಉಕ್ಕು, ಪೆಟ್ರೋಕೆಮಿಕಲ್ ಮತ್ತು ರಸಗೊಬ್ಬರದಂತಹ ವಲಯಗಳ ವೆಚ್ಚ ಹೆಚ್ಚಾಗಬಹುದು.

Join Nadunudi News WhatsApp Group

*Credit And Debit Card Rule
ಅಕ್ಟೋಬರ್ 1 ರಿಂದ, ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ತಮ್ಮ ಕಾರ್ಡ್‌ ನ ನೆಟ್‌ ವರ್ಕ್ ಪೂರೈಕೆದಾರರನ್ನು ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ನೀಡಿದೆ. ಮೊದಲು ಇದನ್ನು ಕಾರ್ಡ್ ನೀಡುವ ಬ್ಯಾಂಕ್ ಅಥವಾ ಕಂಪನಿಯಿಂದ ಮಾತ್ರ ಆಯ್ಕೆ ಮಾಡಬಹುದಾಗಿತ್ತು, ಆದರೆ ಇಂದಿನಿಂದ ಗ್ರಾಹಕರು ಸಹ ಈ ಸ್ವಾತಂತ್ರ್ಯವನ್ನು ಪಡೆಯುತ್ತಾರೆ.

TCS Rule
Image Credit: Hindustantimes

*TCS Rule
ವಿದೇಶ ಪ್ರವಾಸ ಮಾಡುತ್ತಿದ್ದರೆ ಅಥವಾ ವಿದೇಶಿ ಷೇರುಗಳು, ಮ್ಯೂಚುವಲ್ ಫಂಡ್‌ ಗಳು, ವಿದೇಶಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದವರಿಗೆ ಇಂದಿನ ಹೊಸ ನಿಯಮ ಅನ್ವಯವಾಗಲಿದೆ. ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳನ್ನು ಹೊರತುಪಡಿಸಿ, ನೀವು ಈಗ 7 ಲಕ್ಷ ರೂ.ಗಿಂತ ಹೆಚ್ಚಿನ ಎಲ್ಲಾ ಅಂತಾರಾಷ್ಟ್ರೀಯ ರವಾನೆಗಳ ಮೇಲೆ ಶೇಕಡಾ 20 ರಷ್ಟು TCS ಅನ್ನು ಪಾವತಿಸಬೇಕಾಗುತ್ತದೆ.

*Aadhaar Card
ಇಂದಿನಿಂದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಕಡ್ಡಾಯವಾಗಿದೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮುಂತಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಆಧಾರ್ ಮಾಹಿತಿಯನ್ನು ನಮೂದಿಸುವುದು ಅನಿವಾರ್ಯವಾಗಿದೆ. ಇನ್ನು ಕೂಡ ನಿಮ್ಮ ಸಣ್ಣ ಉಳಿತಾಯ ಯೋಜನೆಗಳಿಗೆ Aadhaar Link ಮಾಡದಿದ್ದರೆ ನಿಮ್ಮ ಉಳಿತಾಯ ಖಾತೆಗಳು ಬ್ಲಾಕ್ ಆಗಲಿದೆ.

Aadhaar Card latest update
Image Credit: Navi

*Birth certificate
ಇನ್ನುಮುಂದೆ ಜನನ ಪ್ರಮಾಣ ಪತ್ರ ಏಕೈಕ ಮೂಲಾಧಾರವಾಗಲಿದೆ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು, ವಾಹನ ಚಾಲನಾ ಪರವಾನಗಿ ಪಡೆಯಲು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು, ಆಧಾರ್ ಸಂಖ್ಯೆ ನೋಂದಣಿ ಮಾಡಲು, ನವ ವದು ವರರ ವಿವಾಹ ನೋಂದಣಿ ಮಾಡಿಸಲು, ಸರ್ಕಾರೀ ಉದ್ಯೋಗ ನೇಮಕಾತಿ ಮಾಡಲು October 1 ರಿಂದ Birth certificate ಕಡ್ಡಾಯ ದಾಖಲೆಯಾಗಿದೆ.

Join Nadunudi News WhatsApp Group