75 Rs Coin Details: ಇಂದಿನಿಂದ ದೇಶದಲ್ಲಿ 75 ರೂ ನಾಣ್ಯ ಚಲಾವಣೆ, ನಾಣ್ಯದ ವಿಶೇಷತೆ ತಿಳಿದುಕೊಳ್ಳಿ.

ಇಂದು ದೇಶದೆಲ್ಲೆಡೆ ಹೊಸ 75 ರೂ.ಮುಖಬೆಲೆಯ ನಾಣ್ಯದ ಚಲಾವಣೆ ಆರಂಭಗೊಳ್ಳಲಿದೆ.

75 Rs Coin Details: ದೇಶದೆಲ್ಲೆಡೆ ಇದೀಗ ನೋಟು ಹಾಗೂ ನಾಣ್ಯಗಳ ಕುರಿತು ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿದೆ. ದೇಶದಲ್ಲಿ ಹೊಸ ಹೊಸ ಹೊಸ ನಾಣ್ಯಗಳ ಬರುವಿಕೆಯ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿವೆ. ಇನ್ನು ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಲು ನಿರ್ಧರಿಸಿದೆ.

2000 ನೋಟುಗಳು ಬ್ಯಾನ್ ಆಗುತ್ತಿದಂತೆ ಹೊಸ ನೋಟುಗಳು ಹಾಗೂ ನಾಣ್ಯಗಳು ಮುದ್ರಣದ ಬಗ್ಗೆ ಸುದ್ದಿಗಳು ಹರಡುತ್ತಿದೆ. ಇನ್ನು ಇಂದಿನಿಂದ ದೇಶದೆಲ್ಲೆಡೆ ಹೊಸ 75 ರೂ.ಮುಖಬೆಲೆಯ ನಾಣ್ಯದ ಚಲಾವಣೆ ಆರಂಭಗೊಳ್ಳಲಿದೆ. ಈ 75 ರೂ. ನಾಣ್ಯದ ವಿಶೇಷತೆಗಳ ಬಗ್ಗೆ ಒಂದಿಷ್ಟು ವಿವರ ತಿಳಿಯೋಣ.

Special feature of Rs 75 coin
Image Credit: youtube

75 ರೂ ನಾಣ್ಯ ದ ವಿಶೇಷತೆ
ಈ 75 ರೂ ನಾಣ್ಯವು ಒಂದು ಬದಿಯಲ್ಲಿ ಸಂಸತ್ತಿನ ಸಂಕೀರ್ಣ ಮತ್ತು ಇನ್ನೊಂದು ಬದಿಯಲ್ಲಿ ಹೊಸ ಸಂಸತ್ತಿನ ಕಟ್ಟಡದ ಚಿತ್ರವನ್ನು ಹೊಂದಿರುತ್ತದೆ. 75 ರೂ ನಾಣ್ಯವು 44 ಎಂಎಂ ವೃತ್ತಾಕಾರದ ವ್ಯಾಸವನ್ನು ಹೊಂದಿದೆ. ನಾಣ್ಯವನ್ನು ನಾಲ್ಕು ಲೋಹಗಳಿಂದ ಮಾಡಲಾಗಿದೆ.

ಈ ನಾಣ್ಯದಲ್ಲಿ 50 ಪ್ರತಿಶತ ಬೆಳ್ಳಿ, 40 ಪ್ರತಿಶತ ತಾಮ್ರ, 5 ಪ್ರತಿಶತ ನಿಕಲ್ ಮತ್ತು 5 ಪ್ರತಿಶತ ಸತುವನ್ನು ಸೇರಿಸಲಾಗಿದೆ. ಸಂಸತ್ತಿನ ಸಂಕೀರ್ಣದ ಚಿತ್ರದ ಕೆಳಗೆ 2023 ವರ್ಷವನ್ನು ಕೆತ್ತಲಾಗಿದೆ.

75 rupees coin circulation in the country from today
Image Credit: indianexpress

ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭವನ್ನು ಮಾಡಲಾಗುವುದು ಮತ್ತು ಕೆಳಭಾಗದಲ್ಲಿ 75 ರೂ.ಎಂದು ಬರೆಯಲಾಗಿದೆ. ಹೊಸ 75 ರೂ. ಮುಖಬೆಲೆಯ ನಾಣ್ಯದ ತೂಕ ಸುಮಾರು 35 ಗ್ರಾಂ ಇರುತ್ತದೆ. ನಾಣ್ಯದ ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭರತ್ ಹೆಸರು ಮತ್ತು ಆಂಗ್ಲ ಭಾಷೆಯಲ್ಲಿ ಭಾರತ್ ಎಂದು ಬರೆಯಲಾಗಿದೆ.

Join Nadunudi News WhatsApp Group

ಸಂಸತ್ ಭವನ ಆವರಣದ ಚಿತ್ರವನ್ನು ಹೊಂದಿರುವ ಈ 75 ರೂ. ನಾಣ್ಯ ಬಹಳ ಆಕರ್ಷಣೀಯವಾಗಿದ್ದು ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಕೈ ಸೇರಲಿದೆ.

Join Nadunudi News WhatsApp Group