75 Rs Coin: ಈ ಕಾರಣಕ್ಕೆ ಜನಸಾಮಾನ್ಯರು ಬಳಸಲು ಸಾಧ್ಯವಿಲ್ಲ 75 ರೂ ನಾಣ್ಯ, ನಾಣ್ಯದ ವಿಶೇಷತೆ ತಿಳಿಯಿರಿ.

75 ರೂಪಾಯಿ ನಾಣ್ಯಗಳನ್ನ ಸರ್ಕಾರ ಜಾರಿಗೆ ತಂದಿದೆ, ಆದರೆ ಜನಸಾಮಾನ್ಯರಿಗೆ ಅದರ ಉಪಯೋಗ ಇಲ್ಲ.

75 RS Coin Usage: ದೇಶದೆಲ್ಲೆಡೆ ಇದೀಗ ನೋಟು ಹಾಗೂ ನಾಣ್ಯಗಳ ಕುರಿತು ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿದೆ. ದೇಶದಲ್ಲಿ ಹೊಸ ಹೊಸ ಹೊಸ ನಾಣ್ಯಗಳ ಬರುವಿಕೆಯ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿವೆ. ಇನ್ನು ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಲು ನಿರ್ಧರಿಸಿದೆ.

2000 ನೋಟುಗಳು ಬ್ಯಾನ್ ಆಗುತ್ತಿದಂತೆ ಹೊಸ ನೋಟುಗಳು ಹಾಗೂ ನಾಣ್ಯಗಳು ಮುದ್ರಣದ ಬಗ್ಗೆ ಸುದ್ದಿಗಳು ಹರಡುತ್ತಿದೆ. ಇನ್ನು ಇಂದಿನಿಂದ ದೇಶದೆಲ್ಲೆಡೆ ಹೊಸ 75 ರೂ.ಮುಖಬೆಲೆಯ ನಾಣ್ಯದ ಚಲಾವಣೆ ಆರಂಭಗೊಳ್ಳಲಿದೆ.

Special feature of Rs 75 coin
Image Credit: numista

75 ರೂಪಾಯಿ ನಾಣ್ಯದ ವಿಶೇಷತೆ
ಈ 75 ರೂ ನಾಣ್ಯವು ಒಂದು ಬದಿಯಲ್ಲಿ ಸಂಸತ್ತಿನ ಸಂಕೀರ್ಣ ಮತ್ತು ಇನ್ನೊಂದು ಬದಿಯಲ್ಲಿ ಹೊಸ ಸಂಸತ್ತಿನ ಕಟ್ಟಡದ ಚಿತ್ರವನ್ನು ಹೊಂದಿರುತ್ತದೆ. 75 ರೂ ನಾಣ್ಯವು 44 ಎಂಎಂ ವೃತ್ತಾಕಾರದ ವ್ಯಾಸವನ್ನು ಹೊಂದಿದೆ. ನಾಣ್ಯವನ್ನು ನಾಲ್ಕು ಲೋಹಗಳಿಂದ ಮಾಡಲಾಗಿದೆ. ಈ ನಾಣ್ಯದಲ್ಲಿ 50 ಪ್ರತಿಶತ ಬೆಳ್ಳಿ, 40 ಪ್ರತಿಶತ ತಾಮ್ರ, 5 ಪ್ರತಿಶತ ನಿಕಲ್ ಮತ್ತು 5 ಪ್ರತಿಶತ ಸತುವನ್ನು ಸೇರಿಸಲಾಗಿದೆ. ಸಂಸತ್ತಿನ ಸಂಕೀರ್ಣದ ಚಿತ್ರದ ಕೆಳಗೆ 2023 ವರ್ಷವನ್ನು ಕೆತ್ತಲಾಗಿದೆ.

75 rupees coin cannot be circulated
Image Credit: numista

75 ರೂಪಾಯಿಯ ನಾಣ್ಯ ಚಲಾವಣೆಗೆ ಸಾಧ್ಯವಿಲ್ಲ
75 ರೂಪಾಯಿಯ ನಾಣ್ಯ ಬಿಡುಗಡೆಯಾಗಿದ್ದರು ಸಹ ಅದನ್ನು ಚಲಾವಣೆ ಮಾಡಲು ಸಾಧ್ಯವಿಲ್ಲ. ಅವುಗಳನ್ನು ವಹಿವಾಟುಗಳಿಗೆ ಬಳಸಲಾಗುವುದಿಲ್ಲ. ಇದಲ್ಲದೆ 75 ರೂಪಾಯಿಯ ನಾಣ್ಯದ ಅಂಶದಲ್ಲಿ ಬೇರೆಯೇ ವಿಚಾರ ಇದೆ. ವಾಸ್ತವವಾಗಿ ಈ ನಾಣ್ಯದ ಲೋಹದ ಮೌಲ್ಯವು ಅದರ ಕಾನೂನು ಮೌಲ್ಯಕ್ಕಿಂತ ಹೆಚ್ಚು ನಾಣ್ಯದ ಅರ್ಧದಷ್ಟು ಬೆಳ್ಳಿಯಿಂದ ಮಾಡಲ್ಪಟ್ಟಿದೆ.

ಹೊಸ 75 ರೂ. ಮುಖಬೆಲೆಯ ನಾಣ್ಯದ ತೂಕ ಸುಮಾರು 35 ಗ್ರಾಂ ಇರುತ್ತದೆ. ನಾಣ್ಯದ ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭರತ್ ಹೆಸರು ಮತ್ತು ಆಂಗ್ಲ ಭಾಷೆಯಲ್ಲಿ ಭಾರತ್ ಎಂದು ಬರೆಯಲಾಗಿದೆ. ಸಂಸತ್ ಭವನ ಆವರಣದ ಚಿತ್ರವನ್ನು ಹೊಂದಿರುವ ಈ 75 ರೂ. ನಾಣ್ಯ ಬಹಳ ಆಕರ್ಷಣೀಯವಾಗಿದೆ.

Join Nadunudi News WhatsApp Group

Join Nadunudi News WhatsApp Group