DA Hike: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಈ ದಿನದಂದು ಹೆಚ್ಚಾಗಲಿದೆ ನೌಕರರ ಸಂಬಳ.

ಸರ್ಕಾರೀ ನೌಕರರ ವೇತನ ಹೆಚ್ಚಳದ ಕುರಿತು ಮಹತ್ವದ ಮಾಹಿತಿ.

7th Pay Commission latest Update: ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ. ಈಗಾಗಲೇ ವೇತನ ಹೆಚ್ಚಳದ (Salary Hike) ಕುರಿತು ಸರ್ಕಾರ ವಿವಿಧ ರೀತಿಯ ಘೋಷಣೆಯನ್ನು ಹೊರಡಿಸಿತ್ತು. ಕೇಂದ್ರ ನೌಕರರು ಮತ್ತು ಪಿಂಚಣಿದಾರರು ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಇದೀಗ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

Important Information about Govt Employees Salary Hike
Image Credit: Businessleague

ವೇತನ ಹೆಚ್ಚಳದ ಕುರಿತು ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ
ಇದೀಗ ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಹೊಸ ತುಟ್ಟಿ ಭತ್ಯೆ ಅನ್ವಯವಾಗಲಿದೆ. ಶೇ. 4 ರಷ್ಟು ಡಿಎ ಹೆಚ್ಚಳ ಆಗುವಾ ಸಾಧ್ಯತೆ ಇದೆ. 7 ನೇ ವೇತನ ಆಯೋಗದ ಅಂತಿಮ ವರದಿ ಆಧರಿಸಿ ಒಟ್ಟಾರೆ ಶೇಕಡ 30 ರಿಂದ 35 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳವಾಗಲಿದೆ. ಸರ್ಕಾರೀ ನೌಕರರ ಡಿಎ 50 % ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿ ಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ. ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ.

Good news for government employees regarding salary hike
Image Credit: Economictimes

ಇನ್ನು ಈ ತಿಂಗಳಿನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ 46% ತಲುಪಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಹೊಸ ತುಟ್ಟಿಭತ್ಯೆಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಿಯಾಗಿದೆ. ಪಿಂಚಣಿದಾರರಿಗೆ ಮೂರು ತಿಂಗಳ ಬಾಕಿ ನೀಡಲಾಗುವುದು. 7 ನೇ ವೇತನದ ಅಡಿಯಲ್ಲಿ ವೇತನ ಪಡೆಯುತ್ತಿರುವ ನೌಕರರು ವೇತನ ಹೆಚ್ಚಳದ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group