7th Pay 2024: 7 ನೇ ವೇತನದ ಬಗ್ಗೆ ಇನ್ನೊಂದು ಬಿಗ್ ಅಪ್ಡೇಟ್, ನೌಕರರ ಮೂಲ ವೇತನದಲ್ಲಿ ಮತ್ತೆ ಇಷ್ಟು ಹೆಚ್ಚಳ

ಸರ್ಕಾರೀ ನೌಕರರ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

7th Pay Commission Latest Update: ಕೇಂದ್ರ ಸರಕಾರ (Central Government) ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳದ ಕುರಿತಾದ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಕೇಂದ್ರ ಸರಕಾರ  ಸರ್ಕಾರಿ ನೌಕರರಿಗೆ ಸಾಲುಸಾಲು ಸಿಹಿಸುದ್ದಿ ನೀಡುತ್ತಿದೆ.

ಈಗಾಗಲೇ 7 ನೇ ವೇತನ ಆಯೋಗದಲ್ಲಿ (7th Pay Commission) ಸಂಬಳ ಹೆಚ್ಚಾಗುವ ಕುರಿತು ಸಾಕಷ್ಟು ಸುದ್ದಿಗಳು ಹರಡಿದ್ದವು. ಇದೀಗ ಮತ್ತೆ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ತಿಳಿಯೋಣ.

Govt Employees 7th Pay Commission Latest Update
Image Credit: abp news

ಸರ್ಕಾರೀ ನೌಕರರ 7 ನೇ ವೇತನದ ಕುರಿತು ಬಿಗ್ ಅಪ್ಡೇಟ್
ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ.

ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು. ಸದ್ಯ 7 ನೇ ವೇತನದ ಅಡಿಯಲ್ಲಿ ನೌಕರರ ವೇತನದ ಎಷ್ಟು ಹೆಚ್ಚಾಗುತ್ತದೆ ಎನ್ನುವುದರ ಲೆಕ್ಕಾಚಾರ ನೋಡೋಣ.

Govt Employees New Updates
Image Credit: Thebegusarai

ನೌಕರರ ಮೂಲ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ..?
CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ January ಯಲ್ಲಿ 46% ತಲುಪಲಿದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

Join Nadunudi News WhatsApp Group

ಪ್ರಸ್ತುತ, ಪೇ-ಬ್ಯಾಂಡ್ ಹಂತ-1 ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ರೂ.18,000 ಆದರೆ, ಅದೇ ಲೆಕ್ಕಾಚಾರದಲ್ಲಿ ಶೇ.50 ರಷ್ಟು ಭತ್ಯೆ ಲೆಕ್ಕ ಹಾಕಿದಾಗ 1000 ರೂ. ಆಗುತ್ತದೆ. ಇನ್ನು ತುಟ್ಟಿಭತ್ಯೆ 50 ಪ್ರತಿಶತವನ್ನು ತಲುಪಿದ ನಂತರ, ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಮತ್ತು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ 18,000 ರೂಪಾಯಿ ಮೂಲ ವೇತನಕ್ಕೆ 50 % DA ಆಧಾರದಲ್ಲಿ ನೌಕರರು 9000 ರೂ. ಹಣವನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ.

Join Nadunudi News WhatsApp Group