Central Govt Salary Hike: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ, ಸಂಬಳದಲ್ಲಿ ಡಬಲ್ ಹೆಚ್ಚಳ.

7th pay commission salary scale for central government employees

7th Pay Commission For Government Employees: ಇದೀಗ ಕೇಂದ್ರ ಸರ್ಕಾರದ (Central Government) ನೌಕರರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. 4 % ತುಟ್ಟಿಭತ್ಯೆ ಹೆಚ್ಚಳಕ್ಕೆ ನರೇಂದ್ರ  ಮೋದಿ (Modi) ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ. ಇದಾದ ನಂತರ ಮಾರ್ಚ್ ತಿಂಗಳ ವೇತನದಲ್ಲಿ ಈ ಹಣ ನೌಕರರ ಖಾತೆಗೆ ಸೇರಲಿದೆ.

The salary of central government employees has been further increased under the 7th pay scale
Image Credit: indiatvnews

ಕೇಂದ್ರ ನೌಕರರಿಗೆ ಸರ್ಕಾರದಿಂದ ಹೊಸ ಸಿಹಿ ಸುದ್ದಿ
ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.42 ಕ್ಕೆ ಏರಿಕೆಯಾದಂತಾಗಲಿದೆ. ಅದನ್ನು ಶೇಕಡಾ 38 ರಿಂದ ಶೇಕಡಾ 42 ಕ್ಕೆ ಹೆಚ್ಚಿಸಲಾಗಿದೆ. CPI-IW ಡೇಟಾ ಪ್ರಕಾರ ಡಿಸೆಂಬರ್ 2022 ರವೆರೆಗೆ ತುಟ್ಟಿ ಭತ್ಯೆಯಲ್ಲಿ 4.23 % ಹೆಚ್ಚಳವಾಗಿದೆ. ಆದರೆ ಕೇಂದ್ರ ನೌಕರರಿಗೆ ರೌಂಡ್ ಫಿಗರ್ ಅಂಕಿ ಅಂಶ ನೀಡಲಾಗಿದ್ದು ಶೇ. 4 ರಷ್ಟು ಹೆಚ್ಚಿಸಲಾಗಿದೆ.

The central government employees are going to increase their salaries, which is a reason for the happiness of the employees
Image Credit: zeenews

ಕಳೆದ ಆರು ತಿಂಗಳಲ್ಲಿ ಅಂದರೆ ಜುಲೈ ಮತ್ತು ಡಿಸೆಂಬರ್ ನಡುವೆ ಗ್ರಾಹಕ ಬೆಲೆ ಸೂಚ್ಯಂಕ ನಡುವಿನ ಹಣದುಬ್ಬರ ಅಂಕಿ ಅಂಶವು 4.4 ಪ್ರತಿಶತದಷ್ಟು ಹೆಚ್ಚಾಗಿದೆ ಹೀಗಾಗಿ ಶೇ. 4 ರಷ್ಟು ಏರಿಕೆಯಾಗಿದೆ. ಇದರಿಂದ ಇದೀಗ ತುಟ್ಟಿಭತ್ಯೆ ಶೇ.42 ದರದಲ್ಲಿ ನೀಡಲಾಗುವುದು ಎನ್ನಲಾಗಿದೆ.

ಜನವರಿವರೆಗೆ ನೌಕರರು ಶೇ.38 ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದರು. ಇದಾದ ಬಳಿಕ ಡಿಎ ಹೆಚ್ಚಳ ಜುಲೈ ತಿಂಗಳಲ್ಲಿ ಆಗಲಿದೆ.

Allowances drawn by central employees are given under the recommendations of the 7th Pay Commission. As per the recommendations the dearness allowance i.e. DA has been increased.
Image Credit: tribuneindia

ಕೇಂದ್ರ ಸರ್ಕಾರದ ನೌಕರರಿಗೆ ಡಿಎ ಹೆಚ್ಚಳ
ಕೇಂದ್ರ ನೌಕರರು ಪಡೆಯುವ ಭತ್ಯೆಯನ್ನು 7 ನೇ ವೇತನ ಆಯೋಗದ ಶಿಫಾರಸ್ಸುಗಳ ಅಡಿಯಲ್ಲಿ ನೀಡಲಾಗುತ್ತದೆ. ಶಿಫಾರಸ್ಸುಗಳ ಪ್ರಕಾರ ತುಟ್ಟಿಭತ್ಯೆ ಅಂದರೆ ಡಿಎ ಅನ್ನು ಹೆಚ್ಚಿಸಲಾಗಿದೆ.

Join Nadunudi News WhatsApp Group

ಕಾರ್ಮಿಕ ಸಚಿವಾಲಯದ ಭಾಗವಾಗಿರುವ ಲೇಬರ್ ಬ್ಯುರೋ, ಗ್ರಾಹಕ ಬೆಲೆ ಸೂಚ್ಯಂಕ ಆಧಾರದ ಮೇಲೆ ಹಣದುಬ್ಬರ ಹೆಚ್ಚಿದ ಅನುಪಾತವನ್ನು ಲೆಕ್ಕಹಾಕುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆ ನೀಡಲಾಗುತ್ತದೆ.

Join Nadunudi News WhatsApp Group