7th Pay Update: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ, ವೇತನ ಹೆಚ್ಚಳ ಇನ್ನಷ್ಟು ವಿಳಂಬ.

ಸರ್ಕಾರೀ ನೌಕರರ ವೇತನ ಹೆಚ್ಚಳ ಇನ್ನಷ್ಟು ವಿಳಂಬ ಆಗಲಿದ್ದು ಇದು ನೌಕರರ ಬೇಸರಕ್ಕೆ ಕಾರಣವಾಗಿದೆ.

7th Pay Commission Salary Hike Updare: ಈಗಾಗಲೇ ಸರ್ಕಾರಿ ನೌಕರರಿಗೆ (Government Employees) ವೇತನ ಹೆಚ್ಚು ಮಾಡುವುದರ ಕುರಿತು ಕೇಂದ್ರ ಸರ್ಕಾರ ಸಾಕಷ್ಟು ಮಾಹಿತಿಗಳನ್ನು ಹೊರ ಹಾಕಿದೆ. ಕೇಂದ್ರ ಸರಕಾರ (Central Government) ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ ವೇತನ ಹೆಚ್ಚಳದಲ್ಲಿ ಇನ್ನು ಒಂದು ತಿಂಗಳು ವಿಳಂಬವಾಗಲಿದೆ ಎಂಬ ಸುದ್ದಿ ಇದೀಗ ಹೊರ ಬಿದ್ದಿದೆ.

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಭತ್ಯೆ ಸೌಲಭ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ 7 ನೇ ವೇತನ ಆಯೋಗ (7th Pay Commission) ದ ವರದಿ ಇನ್ನು ಒಂದು ತಿಂಗಳು ವಿಳಂಬ ಆಗುವ ಸಾಧ್ಯತೆ ಇದೆ. ಶೇಕಡಾ 30 ರಿಂದ 35 ರಷ್ಟು ವೇತನ ಹೆಚ್ಚಳ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರು ಪರಿಷ್ಕ್ರತ ವೇತನ ಪಡೆದುಕೊಳ್ಳಲು ಇನ್ನು ಮೂರೂ ನಾಲ್ಕು ತಿಂಗಳು ಕಾಯುವಂತಾಗಿದೆ.

7th  pay comission update
Image Credit: onmanorama

ರಾಜ್ಯದ ಸರ್ಕಾರಿ ನೌಕರರಿಗೆ ಹೊಸ ಮಾಹಿತಿ
ರಾಜ್ಯದ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯ 7 ನೇ ವೇತನ ಆಯೋಗ ವರದಿ ಸಿದ್ದಪಡಿಸಿದ್ದು ವರದಿ ಸಲ್ಲಿಕೆಗೆ ನೀಡಲಾಗಿದ್ದ ಕಾಲಾವಕಾಶ ಈ ತಿಂಗಳ 19 ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಆಯೋಗದ ಕಾರ್ಯ ಚಟುವಟಿಕೆ ವಿಳಂಬವಾಗಿದ್ದು ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ಕೇಳುವ ಸಾಧ್ಯತೆ ಇದೆ ಎಂದು ಹೇಳಾಲಾಗಿದೆ.

It is known that the salary increase of government employees is likely to be delayed further.
Image Credit: gsis

ಸರ್ಕಾರಿ ನೌಕರರಿಗೆ ಶೀಘ್ರವೇ ಡಿಎ ಹೆಚ್ಚಳ
ಮೂಲವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಏಪ್ರಿಲ್ ವೇತನದಲ್ಲೇ ಸರ್ಕಾರಿ ನೌಕರರ ಕೈ ಸೇರಿದೆ. ಆಯೋಗದ ಅಂತಿಮ ವರದಿ ಆಧರಿಸಿ ಒಟ್ಟಾರೆ ಶೇಕಡ 30 ರಿಂದ 35 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳವಾಗಲಿದೆ. ಸರ್ಕಾರಿ ನೌಕರರಿಗೆ ಶೀಘ್ರವೇ ಡಿಎ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ.

Join Nadunudi News WhatsApp Group

Join Nadunudi News WhatsApp Group