7th Pay Update: 12 ದಿನದಲ್ಲಿ ಸರ್ಕಾರೀ ನೌಕರರಿಗೆ ಬರಲಿದೆ ಬಂಪರ್ ಗುಡ್ ನ್ಯೂಸ್, ಸಂಬಳದಲ್ಲಿ ಇಷ್ಟು ಹೆಚ್ಚಳ.

ಸರ್ಕಾರೀ ನೌಕರರ 7 ನೇ ವೇತನದ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್

7th Pay Commission Latest Update: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಸರ್ಕಾರೀ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಹೊರಬೀಳಲಿದೆ. ಸರ್ಕಾರೀ ನೌಕರರ ಬಹುನಿರೀಕ್ಷಿತ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ಆದಷ್ಟು ಬೇಗ ಘೋಷಣೆ ಹೊರಡಿಸಲಿದೆ. 2024 ರ ಬಜೆಟ್ ಮಂಡನೆಗೂ ಮುನ್ನ ನೌಕರರ ವೇತನದ ಹೆಚ್ಚಳ ಆಗುವುದಾಗಿ ಸರ್ಕಾರ ಹೇಳಿಕೆ ನೀಡಿತ್ತು. ಹೀಗಾಗಿ ಸರ್ಕಾರೀ ನೌಕರರು ಸರ್ಕಾರದ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ. ಸದ್ಯ ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.

Govt Employees 7th Pay Commission
Image Credit: Thestatesman

12 ದಿನದಲ್ಲಿ ಸರ್ಕಾರೀ ನೌಕರರಿಗೆ ಬರಲಿದೆ ಬಂಪರ್ ಗುಡ್ ನ್ಯೂಸ್
ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ. ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು.

ಸದ್ಯ 7 ನೇ ವೇತನದ ಅಡಿಯಲ್ಲಿ ನೌಕರರ ವೇತನ ಹೆಚ್ಚಳದ ಜನವರಿ 30 ರೊಳಗೆ ಘೋಷಣೆ ಮಾಡಲಾಗುತ್ತದೆ. December AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ. ಇನ್ನು ನೌಕರ DA ಹೆಚ್ಚಳದ ಜೊತೆಗೆ ಜನವರಿಯಲ್ಲಿ TA ಹಾಗೂ HRA ಕೊಡ ಹೆಚ್ಚಾಗುವ ಸಾಧ್ಯತೆ ಇದೆ.

7th Pay Commission Latest Update
Image Credit: Informalnewz

ಮನೆ ಬಾಡಿಗೆ ಮತ್ತು ಪ್ರಯಾಣ ಭತ್ಯೆಯಲ್ಲಿ ಇಷ್ಟು ಹೆಚ್ಚಳ
*Travel Allowance Hike
ನೌಕರರ DA ಹೆಚ್ಚಳದ ಜೊತೆಗೆ TA ಕೂಡ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಪ್ರಯಾಣ ಭತ್ಯೆಯನ್ನು ವೇತನ ಶ್ರೇಣಿಯ ಹೆಚ್ಚಳದೊಂದಿಗೆ ಸೇರಿಸಿದರೆ, TA ಹೆಚ್ಚಳವು ಇನ್ನು ಹೆಚ್ಚಾಗಲಿದೆ. ಪ್ರಯಾಣ ಭತ್ಯೆಯನ್ನು ವಿವಿಧ ಪೇ ಬ್ಯಾಂಡ್ ಗಳಿಗೆ ಲಗತ್ತಿಸಲಾಗುತ್ತದೆ. ಹೆಚ್ಚಿನ TPTA ನಗರಗಳಲ್ಲಿ ಗ್ರೇಡ್ 1 ರಿಂದ 2ರ ದರಗಳು ಕ್ರಮವಾಗಿ 1800 ರೂ. ಮತ್ತು 1900 ರೂ., ಗ್ರೇಡ್ 3 ರಿಂದ 3600 ರೂ. ತುಟ್ಟಿಭತ್ಯೆ ಆಗಿದೆ.

*House Rent Allowance
ಇನ್ನು 2024 ರಲ್ಲಿ HRA ಕೂಡ ಹೆಚ್ಚಾಗುವ ಸಾಧ್ಯತೆ ಇದೆ. HRA ನಲ್ಲಿ ಮುಂದಿನ ಪರಿಷ್ಕರಣೆ ದರವು 3 ಪ್ರತಿಶತ ಇರುತ್ತದೆ. ನಿಯಮಗಳ ಪ್ರಕಾರ, ಬಡತನ ಭತ್ಯೆ 50 ಮೀರಿದರೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ HRA ಕೂಡ ಶೇ. 27 ರಿಂದ 30 ರವರೆಗೆ ಹೆಚ್ಚಾಗಲಿದೆ.

Join Nadunudi News WhatsApp Group

Join Nadunudi News WhatsApp Group