About 8th Pay: 8ನೇ ವೇತನ ಆಯೋಗ ಬಂದರೆ ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ, 8ನೇ ವೇತನದ ಮಾಹಿತಿ.

8ನೇ ವೇತನ ಜಾರಿಗೆ ಬಂದರೆ ಸರ್ಕಾರೀ ನೌಕರರ ಸಂಬಳ ಎರಡುಪಟ್ಟು ಹೆಚ್ಚಳ ಆಗಲಿದೆ.

8th Pay Commission In India: ಕೇಂದ್ರದ ಸರ್ಕಾರೀ ನೌಕರರು (Central Government Employee) ಪ್ರಸ್ತುತ 7 ನೇ ವೇತನದ (7th Pay Commission) ಅಡಿಯಲ್ಲಿ ಸಂಬಳವನ್ನು ಪಡೆಯುತ್ತಿದ್ದಾರೆ. ಇನ್ನು ಈಗಾಗಲೇ 7 ನೇ ವೇತನದ ಅಡಿಯಲ್ಲಿ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.

ಆದರೆ ಸರ್ಕಾರೀ ನೌಕರರು 8 ನೇ ವೇತನ (8th Pay Commission) ಆಯೋಗದ ನೀರಿಕ್ಷೆಯಲ್ಲಿದ್ದಾರೆ. 8 ನೇ ವೇತನ ಆಯೋಗ ಜಾರಿಗೆ ಬರುವಂತೆ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ನಿರ್ಧಾರ ತಗದುಕೊಳ್ಳುತ್ತಿಲ್ಲ. 8 ಈ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

If the 8th salary is implemented, the salary of the government employees in the country will increase further.
Image Credit: ndtv

7ನೇ ವೇತನ ಆಯೋಗದ ಪ್ರಕಾರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ 42% ಹೆಚ್ಚಳ
ಕೇಂದ್ರ ನೌಕರರು ಮುಂದಿನ ದಿನಗಳಲ್ಲಿ ಶೇ. 42 ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ತುಟ್ಟಿಭತ್ಯೆಯನ್ನು ಶೇಕಡಾ 4 ರ ದರದಲ್ಲಿ ಹೆಚ್ಚಿಸಿದ ನಂತರ 1,262 ರೂ. ದರದಲ್ಲಿ ನಿಮ್ಮ ಖಾತೆಗೆ ವರ್ಷಕ್ಕೆ 15,144 ರೂ. ಪಿಂಚಣಿ ಬರಲಿದೆ. ಇನ್ನು ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಎರಡು ತಿಂಗಳ ಬಾಕಿ ವೇತನವು ಸಿಗಲಿದೆ.

ಇದೀಗ ಏಳನೇ ವೇತನದ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ, ಆದರೆ ನೌಕರರು ಶಿಫಾರಸ್ಸುಗಳ ಪ್ರಕಾರ ವೇತನವನ್ನು ಪಡೆಯುತ್ತಿಲ್ಲ, ಹೀಗಾಗಿ ಅನೇಕ ದೂರುಗಳು ಕಂಡುಬರುತ್ತಿದೆ.

If the 8th pay commission comes into effect, the salary and DA of government employees will increase
Image Credit: jansatta

ಈ ನಿಟ್ಟಿನಲ್ಲಿ ಸರ್ಕಾರ ಎಂಟನೇ ವೇತನ ಆಯೋಗಕ್ಕೆ ಬೇಡಿಕೆ ಇಡುತ್ತಿದೆ. ಪ್ರಸ್ತುತ 8 ನೇ ವೇತನ ಆಯೋಗದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

Join Nadunudi News WhatsApp Group

8 ನೇ ವೇತನ ಆಯೋಗದಲ್ಲಿ ಶೇ. 44 .44 ರಷ್ಟು ಹೆಚ್ಚಳದ ಸಾಧ್ಯತೆ
8 ನೇ ಆಯೋಗ ರಚನೆಯಾದರೆ ಅದರಲ್ಲಿಯೂ ಫಿಟ್ ಮೆಂಟ್ ಅಂಶವನ್ನೇ ಆಧಾರವಾಗಿ ಪರಿಗಣಿಸಲಾಗುತ್ತದೆ. ಫಿಟ್ ಮೆಂಟ್ ಅಂಶದ ಆಧಾರದ ಮೇಲೆ ನೌಕರರ ಫಿಟ್ ಮೆಂಟ್ ಅನ್ನು 3.68 ಬಾರಿ ಏರಿಕೆ ಮಾಡಬಹುದು. ಇದರ ಆಧಾರದ ಮೇಲೆ ನೌಕರರ ಕನಿಷ್ಠ ವೇತನದಲ್ಲಿ 44.44 % ಹೆಚ್ಚಳವಾಗಬಹುದು. ಇದರೊಂದಿಗೆ ಉದ್ಯೋಗಿಗಳ ಕನಿಷ್ಠಾ ವೇತನ 26,000 ರೂ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Join Nadunudi News WhatsApp Group