8th Pay Update: 8 ನೇ ವೇತನ ಆಯೋಗದ ಬಿಗ್ ಅಪ್ಡೇಟ್, ಸರ್ಕಾರೀ ನೌಕರರಿಗೆ ಕೇಂದ್ರದಿಂದ ಬರುತ್ತಾ ಸಿಹಿಸುದ್ದಿ…?

ಸರ್ಕಾರೀ ನೌಕರರ 8 ನೇ ವೇತನ ಆಯೋಗದ ಬಿಗ್ ಅಪ್ಡೇಟ್.

8th Pay Commission Update: ದೇಶದಲ್ಲಿ ಫೆಬರವರಿ 1 ರಂದು 2024 ರ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಮಂಡನೆಗೆ ಇನ್ನು ಕೇವಲ 2 ದಿನಗಳು ಬಾಕಿ ಇವೆ. ಕೇಂದ್ರ ಸರ್ಕಾರ ಈ ಬಜೆಟ್ ಘೋಷಣೆಯ ವೇಳೆ ಸಾಕಷ್ಟು ಬದಲಾವಣೆ ತರಲು ನಿರ್ಧರಿಸಿದೆ.

ಮುಖ್ಯವಾಗಿ ಕೇಂದ್ರ ನೌಕರರ ವೇತನ ಹೆಚ್ಚಳದ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಲು ಸಾಕಷ್ಟು ಚರ್ಚೆ ನಡೆಸುತ್ತಿದೆ. ಇದೀಗ ನಾವು ಈ ಲೇಖನದಲ್ಲಿ ಕೇಂದ್ರ ಸರ್ಕಾರ ಯಾವೆಲ್ಲ ವಿಚಾರಗಳ ಬಗ್ಗೆ ಸರ್ಕಾರೀ ನೌಕರರಿಗೆ ಘೋಷಣೆ ಹೊರಡಿಸಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

8th Pay Commission
Image Credit: Gconnect

ಸರ್ಕಾರೀ ನೌಕರರಿಗೆ ಕೇಂದ್ರದಿಂದ ಬರುತ್ತಾ ಸಿಹಿಸುದ್ದಿ…?

•ನೌಕರರ ವೇತನ ಹೆಚ್ಚಳ
ಫೆಬ್ರವರಿ 1 ರಂದು ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಕೇಂದ್ರ ನೌಕರರಿಗೆ ವೇತನ ಹೆಚ್ಚಳವನ್ನು ಘೋಷಿಸಬಹುದು. ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಸರಕಾರಿ ನೌಕರರ ಸಂಘದ ಜತೆ ಹಲವು ಬಾರಿ ಚರ್ಚೆ ನಡೆಸಲಾಗಿದೆ. ಸರ್ಕಾರ ಬಜೆಟ್‌ ನಲ್ಲಿ ಫಿಟ್‌ ಮೆಂಟ್ ಅಂಶವನ್ನು ಹೆಚ್ಚಿಸಿದರೆ, ನೌಕರರ ಕನಿಷ್ಠ ಮೂಲ ವೇತನ 18,000 ರೂ. ನಿಂದ 26,000 ರೂ. ಹೆಚ್ಚಳವಾಗಲಿದೆ.

•8 ನೇ ವೇತನ ಆಯೋಗದ ಬಿಗ್ ಅಪ್ಡೇಟ್
ಸರ್ಕಾರವು ಕೇಂದ್ರ ಬಜೆಟ್ 2024 ರಲ್ಲಿ 8 ನೇ ವೇತನ ಆಯೋಗವನ್ನು ಘೋಷಿಸಬಹುದು. ಸರ್ಕಾರ ವೇತನವನ್ನು ಹೆಚ್ಚಳ ಮಾಡಿದರೆ, ಸಣ್ಣ ಹುದ್ದೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರ ಸಂಬಳವೂ ಹೆಚ್ಚಾಗುತ್ತದೆ. ಆದರೆ ಪ್ರಸ್ತುತ ಎಂಟನೇ ವೇತನ ಆಯೋಗವನ್ನು ತರುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಸರ್ಕಾರ ಈ ಹಿಂದೆಯೇ ಹೇಳಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಸದ್ಯದಲ್ಲೇ ಸರ್ಕಾರ ಈ ಬಗ್ಗೆ ಘೋಷಣೆ ಹೊರಡಿಸಲಿದೆ.

Join Nadunudi News WhatsApp Group

Central Government Employees
Image Credit: India TV News

•18 ತಿಂಗಳ ಡಿಎ ಬಾಕಿ
ಕೇಂದ್ರ ನೌಕರರು ಮತ್ತು ಪಿಂಚಣಿದಾರರ 18 ತಿಂಗಳ ಡಿಎ ಬಾಕಿಯನ್ನು ಸದ್ಯದಲ್ಲೇ ನೌಕರರಿಗೆ ಬಿಡುಗಡೆ ಮಾಡಬಹುದು. ಈ ಡಿಎ ಬಾಕಿಯು ಜನವರಿ 2020 ರಿಂದ ಜೂನ್ 2021 ರ ವರೆಗೆ ಇದೆ. ಸಚಿವಾಲಯವು ಇದನ್ನು ಹೆಚ್ಚಿಸಿದರೆ, ಉದ್ಯೋಗಿಗಳ ಸಂಬಳದಲ್ಲಿ ದೊಡ್ಡ ಹೆಚ್ಚಳವನ್ನು ಕಾಣಬಹುದು. ತುಟ್ಟಿ ಭತ್ಯೆ ಶೇ.17 ರಷ್ಟಿದ್ದು, ಶೇ.11ರಿಂದ ಶೇ.28ಕ್ಕೆ ಹೆಚ್ಚಿಸಲಾಗಿತ್ತು. ಅಂದಿನಿಂದ ಕೇಂದ್ರ ನೌಕರರು ಸರ್ಕಾರದಿಂದ ಈ 18 ತಿಂಗಳ ಡಿಎ ಬಾಕಿಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Join Nadunudi News WhatsApp Group