Yuva Nidhi 2024: ಪ್ರತಿ ತಿಂಗಳು ಈ ದಾಖಲೆ ಸಲ್ಲಿಸದಿದ್ದರೆ ಯುವ ನಿಧಿ ಯೋಜನೆಯ ಹಣ ರದ್ದು, ರಾತ್ರೋರಾತ್ರಿ ಹೊಸ ರೂಲ್ಸ್
ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಡೆಯಬೇಕಿದ್ದರೆ ಫಲಾನುಭವಿಗಳು ಈ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ
Yuva Nidhi New Rule: ರಾಜ್ಯದಲ್ಲಿ ರಾಜ್ಯ ಸರ್ಕಾರದ ಕೊನೆಯ ಯೋಜನೆಯಾದ Yuva Nidhi ಸದ್ಯ 2024 ಜನವರಿ 12 ರಂದು ಅನುಷ್ಠಾನಗೊಂಡಿದೆ. ರಾಜ್ಯದ ನಿರುದ್ಯೋಗ ವಿದ್ಯಾವಂತರು ಯುವ ನಿಧಿ ಯೋಜನೆಯಡಿ ಮಾಸಿಕ ಭತ್ಯೆ ಪಡೆಯುತ್ತಿದ್ದಾರೆ.
2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ. ಸದ್ಯ ಯುವ ನಿಧಿ ಯೋಜನೆಯ ಕುರಿತು ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
![Yuva Nidhi New Rule](https://nadunudi.in/wp-content/uploads/2024/01/Yuva-Nidhi-New-Rule.png)
ಯುವ ನಿಧಿ ಯೋಜನೆಗೆ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿ
ಸದ್ಯ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ಪಡೆಯುತ್ತಿರುವವರಿಗೆ ಹೊಸ ರೂಲ್ಸ್ ಜಾರಿಮಾಡಿದೆ. ಯುವ ನಿಧಿ ಯೋಜನೆಗೆ ಸರ್ಕಾರ ವಿಧಿಸಿರುವ ನಿಯಮಗಳ ಉಲ್ಲಂಘನೆ ಆಗಬಾರದು ಎನ್ನುವ ಕಾರಣದಿಂದ ಸರ್ಕಾರ ಈ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಿರುದ್ಯೋಗ ಭತ್ಯೆಪಡೆಯಬೇಕಿದ್ದರೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ. ಇನ್ನುಮುಂದೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಪಡೆಯಬೇಕಿದ್ದರೆ ಫಲಾನುಭವಿಗಳು ಈ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.
ಪ್ರತಿ ತಿಂಗಳು ಈ ದಾಖಲೆ ಸಲ್ಲಿಸದಿದ್ದರೆ ಯುವ ನಿಧಿ ಯೋಜನೆಯ ಹಣ ರದ್ದು
ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ ಲೋಡ್ ಮಾಡಬೇಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. NAD (National Academy Depository) ಬಳಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣಪತ್ರಗಳಿವೆ.
![Yuva Nidhi Scheme Latest News Update](https://nadunudi.in/wp-content/uploads/2024/01/Yuva-Nidhi-Scheme-Latest-News-Update.png)
ಅಲ್ಲಿಂದ ಮಾಹಿತಿ ಪಡೆಯಲಾಗುತ್ತಿದೆ. ದಾಖಲೆಗಳು ತಾಳೆಯಾಗಿದ್ದು, ಫಲಿತಾಂಶ ಬಂದ ಆರು ತಿಂಗಳ ನಂತರ ಅಭ್ಯರ್ಥಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳು ಅಭ್ಯರ್ಥಿಗಳು ತಾವು ಉದ್ಯೋಗ ಪಡೆದಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಹೋಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್ ಲೋಡ್ ಮಾಡಬೇಕು ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಈ ಕುರಿತು ಹೇಳಿಕೆ ನೀಡಿದ್ದಾರೆ.