Rohit Sharma: ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರದ ಸುದ್ದಿ, ಬೇಸರದಿಂದ ಬಹುದೊಡ್ಡ ನಿರ್ಧಾರಕ್ಕೆ ಬಂದ ಶರ್ಮಾ.
ಸತತ ಸೋಲಿನ ನಂತರ ಬೇಸರದಿಂದ ಬಹುದೊಡ್ಡ ನಿರ್ಧಾರ ತಗೆದುಕೊಂಡ ರೋಹಿತ್ ಶರ್ಮಾ
Rohit Sharma Quit Mumnai Indians: ಸದ್ಯ ನಡೆಯುತ್ತಿರುವ 2024 ರ IPL ನಲ್ಲಿ Mumbai Indians ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈವರೆಗೆ ನಡೆದ ಮೂರು ಪಂದ್ಯಗಳಲ್ಲಿ ಕೂಡ MI ತಂಡ ಸೋಲನ್ನು ಕಂಡಿದೆ. ಈ ಬಾರಿ MI ತಂಡದ ನಾಯಕರಾಗಿ Hardik Pandya ಟೀಮ್ ಅನ್ನು ಮುನ್ನಡೆಸುತ್ತಿದ್ದಾರೆ. ಆದರೆ ಹಾರ್ದಿಕ ಪಾಂಡ್ಯ ಅವರ ಕ್ಯಾಪ್ಟನ್ಸಿ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿಬರುತ್ತಿದೆ.
ಅಭಿಮಾನಿಗಳಂತೂ ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮ ತಂಡದ ಕ್ಯಾಪ್ಟನ್ ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ನಡೆಯುವ ಪಂದ್ಯದಲ್ಲಿ MI ಗೆಲುವಿಗಾಗಿ ಅಭಿಮಾನಿಗಳು ಕಾಯುತ್ತಿದ್ದರೆ. ಸದ್ಯ ರೋಹಿತ್ ಶರ್ಮ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಬಿನ್ನಾಭಿಪ್ರಾಯ ಉಂಟಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಈ ಕಾರಣದಿಂದ ರೋಹಿತ್ ಶರ್ಮ MI ತಂಡವನ್ನು ತೊರೆಯಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ.
![Rohit Sharma Latest News](https://nadunudi.in/wp-content/uploads/2024/04/Rohit-Sharma-Latest-News-2.jpg)
ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರದ ಸುದ್ದಿ
ಪ್ರಸ್ತುತ 17 ನೇ ಆವೃತ್ತಿಯ IPL ನಡೆಯುತ್ತಿದೆ. ಈ ಸೀಸನ್ ಮುಗಿದ ನಂತ್ರ ಮುಂದಿನ ಸೀಸನ್ ನ ಹರಾಜು ಪ್ರಕ್ರಿಯೆ ನೆರವೇರಲಿದೆ. ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು ಮತ್ತು ಉಳಿದವರನ್ನು ಕೈಬಿಡಬಹುದು. ಹರಾಜಿನಲ್ಲಿ ಹೊಸ ತಂಡವನ್ನು ಕಟ್ಟಬೇಕಾಗುತ್ತದೆ.
ಕಳೆದೊಂದು ದಶಕದಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂದಿನ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅವರು ಮುಂಬೈ ಇಂಡಿಯನ್ಸ್ ತೊರೆಯಲು ಬಯಸಿದ್ದಾರೆ ಎಂಬ ವರದಿಗಳಿವೆ.
![MI New Captain Rohit Sharma](https://nadunudi.in/wp-content/uploads/2024/04/MI-New-Captain-Rohit-Sharma-1.jpg)
ಬೇಸರದಿಂದ ಬಹುದೊಡ್ಡ ನಿರ್ಧಾರಕ್ಕೆ ಬಂದ ಶರ್ಮಾ
ಇಷ್ಟು ವರ್ಷಗಳ ನಂತರ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸಾಧ್ಯತೆ ಇದೆ. ರೋಹಿತ್ ಮುಂದಿನ ಐಪಿಎಲ್ ಹರಾಜಿಗೂ ಲಭ್ಯರಾಗಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಿಂದ ರೋಹಿತ್ ಸ್ವಲ್ಪವೂ ಸಂತೋಷವಾಗಿಲ್ಲ ಮತ್ತು ಡ್ರೆಸ್ಸಿಂಗ್ ರೂಮ್ ನಲ್ಲಿಯೂ ಇಬ್ಬರ ನಡುವೆ ಬಿರುಕು ಮೂಡಿದೆ.
ಇದು ಪರಿಸ್ಥಿತಿಯನ್ನು ಹದಗೆಡುತ್ತಿದೆ ಎಂದು MI ಆಟಗಾರರೊಬ್ಬರು ಹೇಳಿದ್ದಾರೆ. ವಿವಿಧ ನಿರ್ಧಾರಗಳಿಗೆ ಸಂಬಂಧಿಸಿದಂತೆ ಇಬ್ಬರು ಆಟಗಾರರ ನಡುವೆ ಸಾಕಷ್ಟು ವಾಗ್ವಾದಗಳು ನಡೆಯುತ್ತಿದ್ದು, ಇದು ಡ್ರೆಸ್ಸಿಂಗ್ ರೂಮ್ ನಲ್ಲಿಯೂ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗಳ ಬಳಿಕ ಬೇಸರಗೊಂಡಿರುವ ರೋಹಿತ್ ಶರ್ಮ ಮುಂದಿನ IPL ನಲ್ಲಿ ಹೊಸ ತನದಕೆ ಸೇರಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.
![Rohit Sharma Latest Update](https://nadunudi.in/wp-content/uploads/2024/04/Rohit-Sharma-Latest-Update.jpg)