Narendra Modi Twitted About RRR: RRR ಚಿತ್ರಕ್ಕೆ ಶುಭಾಶಯವನ್ನು ತಿಳಿಸಿದ ಪ್ರಧಾನಿ ಮೋದಿ, ವೈರಲ್ ಆಯಿತು ಟ್ವೀಟ್.
PM Narendra Modi Twitted About RRR Movie: ರಾಮ್ ಚರಣ್ ತೇಜ (Ram Charan Teja) ಹಾಗೂ ಜೂನಿಯರ್ ಏನ್ ಟಿಆರ್ (Junior NTR) ಅಭಿನಯದ ಆರ್.ಆರ್.ಆರ್ (RRR Movie) ಚಿತ್ರ (Ram Charan Teja And Jr. NTR) ಬೆಸ್ಟ್ ಒರಿಜಿನಲ್ ಸಾಂಗ್ ಅವಾರ್ಡ್ (Best Original Song Award) ಪಡೆದಿದಿದೆ.
RRR ಚಿತ್ರ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಗೋಲ್ಡನ್ ಗ್ಲೊಬ್ ಪ್ರಶಸ್ತಿ ಪಡೆದ ಮೊದಲ ಸಿನಿಮಾ ಎನ್ನುವ ವಿಶೇಷ ದಾಖಲೆಯನ್ನು ಮಾಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi ) ಆರ್.ಆರ್.ಆರ್ ಚಿತ್ರತಂಡಕ್ಕೆ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
![Prime Minister Modi congratulated the film RRR, the tweet went viral.](https://nadunudi.in/wp-content/uploads/2023/01/RRR-song.jpg)
ಗೋಲ್ಡನ್ ಗ್ಲೊಬ್ ಪ್ರಶಸ್ತಿ (Golden Globe Award) ತ್ರಿಬ್ಬಲ್ ಆರ್
ರಾಮ್ ಚರಣ್ ತೇಜ್ ಹಾಗೂ ಜೂನಿಯರ್ ಏನ್ ಟಿಆರ್ ಅಭಿನಯದ ಆರ್.ಆರ್.ಆರ್ ಚಿತ್ರ ಇದೀಗ ಗೋಲ್ಡನ್ ಗ್ಲೊಬ್ ಪ್ರಶಸ್ತಿ ಪಡೆದು ಮತ್ತೊಂದು ಹೊಸ ದಾಖಲೆ ಬರೆದಿದೆ.
![A song from the Golden Globe Award winning movie RRR](https://nadunudi.in/wp-content/uploads/2023/01/RRR-naatu-naatu-song.jpg)
ಸದ್ಯ ಆಸ್ಕರ್ ಅಂಗಳದಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿರುವ ಆರ್.ಆರ್.ಆರ್ ಚಿತ್ರ ತಂಡಕ್ಕೆ ಗೋಲ್ಡನ್ ಗ್ಲೊಬ್ ಪ್ರಶಸ್ತಿ ಅನಿರೀಕ್ಷಿತವಾಗಿ ಬಂದಿದೆ. ಹಾಲಿವುಡ್ ನ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೊಬ್ ಪ್ರಶಸ್ತಿಯು ಆರ್.ಆರ್.ಆರ್ ಚಿತ್ರದ ನಾಟು ನಾಟು ಹಾಡಿಗೆ ಸಂದಿದೆ.
A very special accomplishment! Compliments to @mmkeeravaani, Prem Rakshith, Kaala Bhairava, Chandrabose, @Rahulsipligunj. I also congratulate @ssrajamouli, @tarak9999, @AlwaysRamCharan and the entire team of @RRRMovie. This prestigious honour has made every Indian very proud. https://t.co/zYRLCCeGdE
— Narendra Modi (@narendramodi) January 11, 2023
ಆರ್.ಆರ್.ಆರ್ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ
ಬಹಳ ವಿಶೇಷವಾದ ಸಾಧನೆಗೆ ಅಭಿನಂದನೆಗಳು ಎಂಎಂ ಕೀರವಾಣಿ. (M.M Keeravani) ಪ್ರೇಮ್ ರಕ್ಷಿತ್, ಕಾಲ ಭೈರವ, ಚಂದ್ರ ಬೋಸ್, ರಾಹುಲ್ ಸಿಪ್ಲಿಗುಂಜ್ ಅವರನ್ನು ನಾನು ಅಭಿನಂದಿಸುತ್ತಿದ್ದೇನೆ.
ಎಸ್.ಎಸ್ ರಾಜಮೌಳಿ (S.S Rajamouli), ಜೂನಿಯರ್ ಏನ್ ಟಿಆರ್, ರಾಮ್ ಚರಣ್ ತೇಜ್ ಮತ್ತು ಇಡೀ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಅಭಿನಂದನಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
![Prime Minister Narendra Modi congratulated the team of RRR who won the Golden Globe Award](https://nadunudi.in/wp-content/uploads/2023/01/RRR-latest-news.jpg)
ವಿಡಿಯೋ ಟ್ವೀಟ್ ಮಾಡಿದ ಮೋದಿ
ಪ್ರಧಾನಿ ಮೋದಿ ಅವರು ತ್ರಿಬ್ಬಲ್ ಆರ್ ಸಿನಿಮಾದ ಟ್ವಿಟರ್ ಖಾತೆ ಟ್ವೀಟ್ ಮಾಡಿದ ವಿಡಿಯೋವನ್ನು ರೀಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಈ ವಿಡಿಯೋವನ್ನು ಅವಾರ್ಡ್ ಅನೌನ್ಸ್ ಮಾಡುವಾಗ ತ್ರಿಬ್ಬಲ್ ಆರ್ ತಂಡ ಖುಷಿಯಲ್ಲಿ ಎದ್ದು ಸಂಭ್ರಮಿಸುವುದನ್ನು ಕಾಣಬಹುದು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈಗಾಗಲೇ ಮೂರು ಮಿಲಿಯನ್ ವಿವ್ಸ್ ಪಡೆದುಕೊಂಡಿದೆ.