Niveditha Gowda Dance Vedio: ಜಗ್ಗಪ್ಪನ ಜೊತೆ ಪುಷ್ಪ ಪುಷ್ಪ ಹಾಡಿಗೆ ಡಾನ್ಸ್ ಮಾಡಿದ ನಿವೇದಿತಾ ಗೌಡ.
Niveditha Gowda And Jagappa Dance Vedio: ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಜನರಿಗೆ ಪರಿಚಿತರಾದ ನಿವೇದಿತಾ ಗೌಡ ಈಗ ಕಿರುತೆರೆ ನಟಿ.
ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ಜನರನ್ನು ರಂಜಿಸುತ್ತಿರುವ ನಿವೇದಿತಾ ಗೌಡ (Neveditha Gowda) ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಅವರನ್ನು ಜನ ಮೆಚ್ಚಿಕೊಂಡಿದ್ದರು. ನಿವೇದಿತಾ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು.
ಹಾಸ್ಯ ಕಲಾವಿದ ಜಗ್ಗಪ್ಪನ ಜೊತೆ ಹೆಜ್ಜೆ ಹಾಕಿದ ನಿವೇದಿತಾ ಗೌಡ
ಇದೀಗ ಕಿರುತೆರೆ ನಟಿ ನಿವೇದಿತಾ ಗೌಡ ಪುಷ್ಪ ಪುಷ್ಪ ಹಾಡಿಗೆ ಹಾಸ್ಯ ಕಲಾವಿದ ಜಗ್ಗಪ್ಪನ ಜೊತೆಗೆ ಡಾನ್ಸ್ ಮಾಡಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ನಿವೇದಿತಾ ಗೌಡ ಮತ್ತು ಜಗ್ಗಪ್ಪನ (Jagappa) ಪುಷ್ಪ ಪುಷ್ಪ ಹಾಡಿನ ಡಾನ್ಸ್ ವಿಡಿಯೋವನ್ನು ಸಾಕಷ್ಟು ಜನರು ಮಚ್ಚಿಕೊಂಡಿದ್ದಾರೆ. ಅಲ್ಲದೆ ನಟಿ ನಿವೇದಿತಾ ಮತ್ತು ಜಗ್ಗಪ್ಪ ಈ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ.
ಪುಷ್ಪ ಪುಷ್ಪ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ
ನಟಿ ನಿವೇದಿತಾ ಗೌಡ ಹೆಚ್ಚಾಗಿ ರೀಲ್ಸ್ ಮತ್ತು ಫೋಟೋಶೂಟ್ ಮಾಡಿಸಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.
View this post on Instagram
ಕಿರುತೆರೆ ನಟಿ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಶೋ ನ ಮೂಲಕ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಾರೆ. ಈ ಶೋ ನಿಂದ ನಟಿ ನಿವೇದಿತಾ ಗೌಡ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಲ್ಲದೆ ನಿವೇದಿತಾ ಗೌಡ ಈ ಶೋ ನಲ್ಲಿ ಹಾಸ್ಯ ಕಲಾವಿದರಾಗಿ ವೀಕ್ಷಕರನ್ನು ರಂಜಿಸುತ್ತಾ ಇರುತ್ತಾರೆ.