December Deadline: ಡಿಸೆಂಬರ್ 31 ರೊಳಗೆ ಈ 5 ಕೆಲಸ ತಪ್ಪದೆ ಮುಗಿಸಿಕೊಳ್ಳಿ, ಹೊಸ ವರ್ಷದಿಂದ ಹೊಸ ನಿಯಮ.
ಡಿಸೇಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿಕೊಳಬೇಕಾಗದ ಮುಖ್ಯವಾದ 5 ಕೆಲಸಗಳು.
December 2023 Deadline: ಪ್ರಸ್ತುತ ನಾವೀಗ 2023 ರ ಕೊನೆಯ ತಿಂಗಳಿನಲ್ಲಿದ್ದೇವೆ. ಇನ್ನೇನು ಒಂದು ತಿಂಗಳು ಮುಗಿದರೆ 2024 ರ ಹೊಸ ವಾರ್ಷ ಆರಂಭವಾಗಲಿದೆ. ಇನ್ನು ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಇನ್ನು ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಜನರು ಸಾಕಷ್ಟು ಕೆಲಸಗಳನ್ನು December ತಿಂಗಳಿನಲ್ಲಿ ಪೂರ್ಣಗೊಳಿಸಿಕೊಳ್ಳಬೇಕಿದೆ.
ಹೌದು ಹೊಸ ವರ್ಷದಲ್ಲಿ ಹೊಸ ನಿಯಮಗಳು ಜಾರಿಗ ಬರಲಿದ್ದು ಜನರು ಈ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ ಡಿಸೆಂಬರ್ ಅಂತ್ಯದೊಳಗೆ ಮುಗಿಸಿಕೊಳ್ಳಬೇಕಾದ ಕೆಲಸಗಳು ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.
![SBI Amrit Kalash Last Date](https://nadunudi.in/wp-content/uploads/2023/12/SBI-Amrit-Kalash-Last-Date.jpg)
ಹೊಸ ವರ್ಷದಿಂದ ಹೊಸ ನಿಯಮ
ಡಿಸೇಂಬರ್ ತಿಂಗಳು ಮುಗಿಯುತ್ತಿದ್ದಂತೆ ಅನೇಕ ಹಣಕಾಸಿನ ನಿಯಮಗಳು ಬದಲಾಗಲಿವೆ. ಡಿಸೆಂಬರ್ ತಿಂಗಳಿನಲ್ಲಿ ಸಾಕಷ್ಟು ವಹಿವಾಟುಗಳಿಗೆ ಗಡುವು ಮತ್ತು ಕೆಲ ಹೊಸ ನಿಯಮಗಳು ಜಾರಿಗೆ ಬಂದಿದ್ದು ಡಿಸೆಂಬರ್ ಅಂತ್ಯದೊಳಗೆ ಈ ಎಲ್ಲ ಕೆಲಸಗಳನ್ನು ಮಾಡುವುದು ಕಡ್ಡಾಯವಾಗಿದೆ. ನಾವೀಗ ಡಿಸೇಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿಕೊಳಬೇಕಾಗದ ಮುಖ್ಯವಾದ 5 ಕೆಲಸಗಳ ಬಗ್ಗೆ ಮಹಿತಿ ಹೇಳಲಿದ್ದೇವೆ.
ಡಿಸೆಂಬರ್ 31 ರೊಳಗೆ ಈ 5 ಕೆಲಸ ತಪ್ಪದೆ ಮುಗಿಸಿಕೊಳ್ಳಿ
•SBI ಅಮೃತ್ ಕಲಶ ಕೊನೆಯ ದಿನಾಂಕ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಯ ವಿಶೇಷ FD ಯೋಜನೆಯಾದ ಅಮೃತ್ ಕಲಶ ಯೋಜನೆಯನ್ನು ಜನರಿಗಾಗಿ ನೀಡುತ್ತಿದೆ. ಬ್ಯಾಂಕ್ ಇದರ ಮೇಲೆ 7.10% ಬಡ್ಡಿಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು 31 ಡಿಸೆಂಬರ್ 2023 ಕೊನೆಯ ದಿನಾಂಕ ಆಗಿದೆ.
![Bank Locker Rules](https://nadunudi.in/wp-content/uploads/2023/12/Bank-Locker-Rules-1.jpg)
•ಬ್ಯಾಂಕ್ ಲಾಕರ್ ಒಪ್ಪಂದ
ಇನ್ನು Reserve Bank Of India ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಪ್ರತಿವರ್ಷ ಗ್ರಾಹಕರು ತಮ್ಮ ಬ್ಯಾಂಕುಗಳೊಂದಿಗೆ ಲ್ಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಆದೇಶಿಸಿದೆ. ಬಳಕೆದಾರರು ಬಾಡಿಗೆ ಪಾವತಿಸುವುದನ್ನು ಮುಂದುವರೆಸಿದರೆ ಮಾತ್ರ ಲಾಕರ್ ಗಳನ್ನೂ ಬಳಸಲು ಅವಕಾಶವಿರುತ್ತದೆ. ಈ ಒಪ್ಪಂದವನ್ನು ಮಾಡಲು December 31 ಕೊನೆಯ ದಿನಾಂಕವಾಗಿದೆ.
•ಉಚಿತ ಆಧಾರ್ ನವೀಕರಣ
ಇತ್ತೀಚೆಗಷ್ಟೇ UIDAI ಹತ್ತು ವರ್ಷಗಳಿಗೊಮ್ಮೆ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಲಿಂಗ, ಫೋನ್ ಸಂಖ್ಯೆ, ಲಿಂಗ ಮತ್ತು ಇಮೇಲ್ ಇತ್ಯಾದಿಯನ್ನು ಉಚಿತವಾಗಿ ಬದಲಾಯಿಸಬಹುದಾಗಿದೆ. ಬಳಕೆದಾರರು ತಮ್ಮ ದಾಖಲೆಗಳನ್ನು ಡಿಸೇಂಬರ್ 14 ರೊಳಗೆ ನವೀಕರಿಸುದು ಕಡ್ಡಾಯವಾಗಿದೆ.
•ಮ್ಯೂಚುವಲ್ ಫಂಡ್ ನಾಮನಿರ್ದೇಶನ ಸಲ್ಲಿಕೆಗೆ ಗಡುವು
ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆದಾರರಿಗೆ ನಾಮನಿರ್ದೇಶನ ವಿವರಗಳನ್ನು ಒದಗಿಸಲು December 31 2023 ರವರೆಗೆ SEBI ಗಡುವನ್ನು ನೀಡಿದೆ. ಭೌತಿಕ ಭದ್ರತಾ ಹೊಂದಿರುವವರು ತಮ್ಮ ಪಾನ್, ನಾಮನಿರ್ದೇಶನ, ಸಂಪರ್ಕ ವಿವರ ಎಲ್ಲವನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು.
![UPI Deactivation Update](https://nadunudi.in/wp-content/uploads/2023/12/UPI-Deactivation-Update-1.jpg)
•UPI ಸೇವೆ ಸ್ಥಗಿತ
ಸದ್ಯ National Payment Corporation Of India ಇದೀಗ UPI ಗೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ವರ್ಷಗಳಿಂದ ಬಳಸದೆ ಇರುವ UPI ID ಗಳನ್ನೂ ಸ್ಥಗಿತಗೊಳಿಸಲು NPCI ನಿರ್ಧಾರ ಕೈಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ID ಗಳನ್ನೂ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ವರ್ಷದಲ್ಲಿ ಯಾವುದೇ ವಹಿವಾಟು ಕಂಡುಬರದಿದ್ದರೆ ಅಂತಹ UPI ID ಯನ್ನು December 31 ರ ನಂತರದ ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಹೀಗಾಗಿ ನಿಮ UPI ID ಯನ್ನು ಉಳಿಸಿಕೊಳ್ಳಲು December 31 ರೊಳಗೆ ಒಮ್ಮೆಯಾದರೂ ವಹಿವಾಟು ನಡೆಸುವುದು ಉತ್ತಮ.