Ration India: ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿಕೊಳ್ಳಿ, ದೇಶದ ಯಾವುದೇ ಸ್ಥಳದಲ್ಲಿ ರೇಷನ್ ಪಡೆಯಬಹುದು.

ರೇಷನ್ ಕಾರ್ಡ್ ಇದ್ದವರು ಈ ಚಿಕ್ಕ ಕೆಲಸ ಮಾಡಿದರೆ ದೇಶದ ಯಾವುದೇ ರಾಜ್ಯದಲ್ಲಿ ಪಡಿತರ ದಾನ್ಯ ಪಡೆಯಬಹುದು.

One Nation One Ration Card: ದೇಶದಲ್ಲಿ ಮೋದಿ ಸರ್ಕಾರ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಅದರಲ್ಲೂ ದೇಶದಲ್ಲಿ ಕರೋನ ಪ್ರಾರಂಭವಾದಾಗಿನಿಂದ ಮೋದಿ ಸರ್ಕಾರ ಜನರಿಗೆ ಉಚಿತ ಪಡಿತರನ್ನು ನೀಡಲು ನಿರ್ಧರಿಸಿತ್ತು.

ಈಗಗಳು ಕೂಡ ದೇಶದ 80 ಕೋಟಿಗೂ ಅಧಿಕ ಜನರು ಪ್ರದಾನ ಮಂತ್ರಿ ಅವರ ಉಚಿತ ಪಡಿತರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದೀಗ ಈ ಉಚಿತ ಪಡಿತರ ವಿತರಣೆಯ ಕುರಿತಾಗಿ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ನೀವು ಉಚಿತ ಪಡಿತರ ಪ್ರಯೋಜನವನ್ನು ಪಡೆಯಲು ಈ ಕೆಲಸ ಮಾಡುವುದು ಅಗತ್ಯವಾಗಿದೆ.

Aadhaar link To Ration Card
Image Credit: TV9telugu

ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿಕೊಳ್ಳಿ
ಪಡಿತರ ಚೀಟಿದಾರರಿಗೆ ಉಚಿತ ಪಡಿತರ ವಿತರಣೆ ನೀಡಲಾಗುತ್ತಿದೆ. ಆದರೆ ಪಡಿತರ ಚೀಟಿ ಹೊಂದಿರುವವರು ಬೇರೆ ಕಡೆ ಸ್ಥಳಾಂತರಿಸಿದಾಗ ಅಂತವರು ಪಡಿತರ ವಿತರಣೆಯ ಲಾಭ ಪಡೆಯಲು ಕಷ್ಟವಾಗುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸಿದಾಗ ವಿಳಾಸ ಬದಲಾವಣೆ ಆಗುವುದು ಸಹಜ. ಇದೀಗ ಇಂತವರು ಉಚಿತ ಪಡಿತರ ವಿತರಣೆಯಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರಕಾರ ಹೊಸ ನಿಯಮ ರೂಪಿಸಿದೆ.

Aadhaar link To Ration Card
ಪಡಿತರ ವಿತರಣೆಯಿಂದ ಯಾರು ಕೂಡಾ ವಂಚಿತರಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರಾ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. ಆಧಾರ್ ಲಿಂಕ್ ಮಾಡುವ ಮೂಲಕ, ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಅಡಿಯಲ್ಲಿ, ಫಲಾನುಭವಿಯು ಯಾವುದೇ ರಾಜ್ಯ ಮತ್ತು ನಗರಕ್ಕೆ ಹೋಗಿ ಉಚಿತ ಪಡಿತರ ಪ್ರಯೋಜನವನ್ನು ಪಡೆಯಬಹುದು. ಇದಕ್ಕಾಗಿ ಆನ್‌ ಲೈನ್‌ ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಅನ್ನು ನವೀಕರಿಸಬೇಕಾಗಿದೆ. ಈ ರೀತಿ ಮಾಡುವುದರಿಂದ ದೇಶದ ಯಾವುದೇ ಸ್ಥಳದಲ್ಲಿ ಕೂಡ ನೀವು ರೇಷನ್ ಪಡೆಯಬಹುದು.

Aadhaar link To Ration Card Latest Update
Image Credit: Zeenews

ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ..?
*ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ನೀವು ನಿಮ್ಮ ರಾಜ್ಯದ PDS ನ ಅಧಿಕೃತ ವೆಬ್‌ ಸೈಟ್‌ ಗೆ ಹೋಗಬೇಕಾಗುತ್ತದೆ.

Join Nadunudi News WhatsApp Group

*ನಂತರ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.

*ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಈ ಸಂಖ್ಯೆಗೆ OTP ಬರುತ್ತದೆ.

*ನಂತರ ನೀವು ಈ OTP ಅನ್ನು ನಮೂದಿಸಬೇಕಾಗುತ್ತದೆ ಮತ್ತು ಆಧಾರ್‌ ಗೆ ಪಡಿತರವನ್ನು ಲಿಂಕ್ ಮಾಡಲು ನಿಮ್ಮ ವಿನಂತಿಯನ್ನು ಸಲ್ಲಿಸಲಾಗುತ್ತದೆ.

Ration Card Latest Update
Image Credit: Indiatodayne

ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗಿದೆಯೋ? ಇಲ್ಲವೋ? ಪರಿಶೀಲಿಸುವ ವಿಧಾನ
*ನಿಮ್ಮ ಪಡಿತರ ಚೀಟಿಯನ್ನು ಆಧಾರ್‌ ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಆನ್‌ ಲೈನ್‌ ನಲ್ಲಿ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

*ಇದಕ್ಕಾಗಿ ನೀವು ಪ್ಲೇ ಸ್ಟೋರ್‌ ನಿಂದ ‘Mera Ratio’ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

*ನಂತರ ಆಧಾರ್ ಸೀಡಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.

*ಇದಾದ ಬಳಿಕ ನಿಮ್ಮ ಪಡಿತರ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದು ಸುಲಭವಾಗಿ ತಿಳಿಯುತ್ತದೆ.

Join Nadunudi News WhatsApp Group