Aadhaar Link Process: ಮೊಬೈಲ್ ಮೂಲಕ ಆಸ್ತಿ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

ಮೊಬೈಲ್ ಮೂಲಕ ಆಸ್ತಿ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ...? ಇಲ್ಲಿದೆ ಡೀಟೇಲ್ಸ್

Aadhaar Link With RTC Online Process: ಸದ್ಯ ಎಲ್ಲ ರೀತಿಯ ಕೆಲಸಗಳಿಗೂ ಅಗತ್ಯವಿರುವ ಮುಖ್ಯ ದಾಖಲೆಯಾಗಿರುವ ಆಧಾರ್ ಕಾರ್ಡ್ ಅನ್ನು RTC ಜೊತೆಗೆ ಲಿಂಕ್ ಮಾಡಲು ಸರ್ಕಾರ ಸೂಚನೆ ನೀಡಿದೆ. ವಿಶೇಷವಾಗಿ ರೈತರು ತಮ್ಮ ಪಹಣಿಯ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅಗತ್ಯವಾಗಿದೆ.

ರಾಜ್ಯದಲ್ಲಿರುವ ರೈತರ ಅಂಕಿಅಂಶಗಳ ಲೆಕ್ಕಾಚಾರವನ್ನು ತಿಳಿಯಲು ಹಾಗೂ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ತಿಂದರೆ ಆಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ RTC ಜೊತೆ ಆಧಾರ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.

Aadhaar Link With RTC Online
Image Credit: Original Source

ನಿಮ್ಮ ಪಹಣಿಯ ಜೊತೆ ಆಧಾರ್ ಲಿಂಕ್ ಮಾಡಿಸುವುದು ಅಗತ್ಯ
ರೈತರು ತಮ್ಮ ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಕೊಂಡರೆ ಸರ್ಕಾದ ಯಾವುದೇ ಯೋಜನೆಗಳಿಂದ ವಂಚಿತರಾಗಲು ಸಾಧ್ಯವಿಲ್ಲ. RTC ಜೊತೆ ಆಧಾರ್ ಲಿಂಕ್ ಮಾಡಿಸಿಕೊಂಡರೆ ವಂಚನೆಯಿಂದಲೂ ಕೂಡ ತಪ್ಪಿಸಿಕೊಳ್ಳಬಹುದಾಗಿದೆ. ಇನ್ನು ರೈತರು ತಮ್ಮ RTC ಜೊತೆ ಆಧಾರ್ ಲಿಂಕ್ ಮಾಡಲು ಹೆಚ್ಚು ಕಷ್ಟಪಡಬೇಕಿಲ್ಲ.

ನೀವು Online ಅಥವಾ Offline ನಲ್ಲಿ Aadhar Link ಅನ್ನು ಮಾಡಬಹುದು. ರಾಜ್ಯ ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ವೆಬ್ ಸೈಟ್ ಅನ್ನು ನೀಡಿದೆ. ನೀವು ಈ ವೆಬ್ ಸೈಟ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ನೀಡಿದರೆ ಸುಲಭವಾಗಿ ಕುಳಿತಲ್ಲಿಯೇ ನಿಮ್ಮ ಪಹಣಿಯ ಜೊತೆ ಆಧಾರ್ ಲಿಂಕ್ ಅನ್ನು ಮಾಡಿಕೊಳ್ಳಬಹುದಾಗಿದೆ. RTC ಜೊತೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯ ಬಗ್ಗೆ ನಾವೀಗ ಈ ಲೇಖನದಲ್ಲಿ ಹೇಳಲಿದ್ದೇವೆ.

Aadhaar Link With RTC Latest Update
Image Credit: Original Source

ಮೊಬೈಲ್ ಮೂಲಕ ಆಸ್ತಿ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ…?
•RTC ಜೊತೆಗೆ ಆಧಾರ್ ಲಿಂಕ್ ಮಾಡಲು ಮೊದಲು http://landrecords.karnataka.gov.in/service4  ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

Join Nadunudi News WhatsApp Group

•ಭೂಮಿ ನಾಗರೀಕ ಸೇವಾ Website ಗೆ Login ಆಗಿ ಅಲ್ಲಿ ಕೇಳದಾದಾಗ ಮಾಹಿತಿಯನ್ನು ಭರ್ತಿ ಮಾಡಬೇಕು.

•OTP ಯೊಂದಿಗೆ Website Login ಆದ ಬಳಿಕ ಅಲ್ಲಿ RTC ಜೊತೆಗೆ Aadhar Link ಆಯ್ಕೆ ಕಾಣುತ್ತದೆ. ಅಲ್ಲಿ ಪಹಣಿ ಪತ್ರ ಯಾರ ಹೆಸರಿನಲ್ಲಿದೆ ಎನ್ನುವುದನ್ನು ನಮೂದಿಸಬೇಕು.

•ನಂತರ ಆಧಾರ್  ನಲ್ಲಿರುವ ಸರಿಯಾದ ಮಾಹಿತಿಯನ್ನು ನಮೂದಿಸಿ ರೈಟ್ ಸೆಡ್ ನಲ್ಲಿ ಕಾಣಸಿಗುವು Verify ಆಯ್ಕೆಯನ್ನು ಕ್ಲಿಕ್ ಮಾಡಬೇಕು.

•ನಂತರ E -KYC ಓಪನ್ ಆಗುತ್ತದೆ. ಆಧಾರ್ ಮಾಹಿತಿ ನೀಡಿ, ಮೊಬೈಲ್ ಗೆ ಬರುವ OTP ಯನ್ನು ನಮೂದಿಸಿ Submit ಮಾಡಬೇಕು.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ  ನಿಮ್ಮ Profile ಓಪನ್ ಆಗುತ್ತದೆ.

•ನಿಮ್ಮ Profile ನಲ್ಲಿ 3 ಡಾಟ್ ನ ಕ್ಲಿಕ್ ಮಾಡಿದಾಗ Link Aadhaar ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು.

•ಇದಾದ ಬಳಿಕ ನಿಮ್ಮ ಜಮೀನಿನ ಪೂರ್ಣ ಮಾಹಿತಿ ಕೇಳಲಾಗುತ್ತದೆ. ಎಲ್ಲ ಮಾಹಿತಿಯನ್ನು ನಮೂದಿಸಿದರೆ ನಿಮ್ಮ Aadhar Link ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Join Nadunudi News WhatsApp Group