Pension Rules: ಆಧಾರ್ ಮತ್ತು ಪಾನ್ ಲಿಂಕ್ ಆಗದೆ ಇದ್ದರೆ ಸಿಗಲ್ಲ ಪಿಂಚಣಿ, ಕೇಂದ್ರ ಸರ್ಕಾರದ ಆದೇಶ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಪಿಂಚಣಿ ಪಡೆಯುವವರಿಗೆ ಸಮಸ್ಯೆ ಆಗಲಿದೆ.

Aadhar And Pan Link Update: ಕೆಲವು ತಿಂಗಳುಗಳ ಹಿಂದೆ ಆಧಾರ್ ಕಾರ್ಡ್ (Aadhar Card) ಹಾಗು ಪಾನ್ ಕಾರ್ಡ್ (Pan Card) ಲಿಂಕ್ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದವು. ಇನ್ನು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕವನ್ನು ಕೂಡ ವಿಸ್ತರಿಸಿತ್ತು.

ಇನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಸರ್ಕಾರ 1000 ದಂಡ ವಿಧಿಸಿತ್ತು. ಜೂನ್ 30 ರೊಳಗೆ ಪಾನ್ ಲಿಂಕ್ ಮಾಡದಿದ್ದರೆ ಪಿಂಚಣಿದಾರರಿಗೆ ತೊಂದರೆ ಆಗಲಿದೆ.

If Aadhaar Card and PAN Card are not linked then it will be a problem for pensioners.
Image Credit: airtel

ಪಾನ್ ಲಿಂಕ್ ಮಾಡದಿದ್ದರೆ ಪಿಂಚಣಿ ಪಡೆಯುವವರಿಗೆ ಆಗಲಿದೆ ನಷ್ಟ
ಜೂನ್ 30 ರೊಳಗೆ ಪಾನ್ ಮತ್ತು ಆಧಾರ್ ಲಿಂಕ್ ಆಗದೆ ಇದ್ದರೆ, ಪಿಂಚಣಿದಾರರಿಗೆ ಜುಲೈನಿಂದ ಪಿಂಚಣಿ ಪಡೆಯಲು ಸಹ ಆಗುವುದಿಲ್ಲ. ದಂಡವನ್ನು ಸಹ ವಿಧಿಸುವ ಸಾಧ್ಯತೆ ಇದೆ. ಇನ್ನು ಪಾನ್ ಮತ್ತು ಆಧಾರ್ ಲಿಂಕ್ ಗಡುವನ್ನು ತಪ್ಪಿದರೆ ಕೇಂದ್ರೀಯ ತೆರಿಗೆ ಮಂಡಲಿ ನಂತರ ದಂಡವನ್ನು ವಿಧಿಸುವುದಾಗಿ ಹೇಳಿದೆ. ಏನ್ ಪಿ ಯಸ್ (National Pention Scheme) ಖಾತೆಯನ್ನು ಸಹ ಮುಚ್ಚಲಾಗುವುದು ಎಂದು ಪಿಂಚಣಿ ನಿಧಿ ಹೇಳಿದೆ.

It is mandatory to link Aadhaar card and PAN card for pension recipients
Image Credit: livehindustan

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ 1000 ದಂಡ
ಈ ಹಿಂದೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿತ್ತು.ಆದರೆ ಜನಸಾಮಾನ್ಯರ ಕಷ್ಟವನ್ನು ಅರಿತು ಸರ್ಕಾರ ಈ ಗಡುವನ್ನು ಜೂನ್ 30 ರ ತನಕ ವಿಸ್ತರಿಸಿದೆ. ಆದರೆ ದಿನಾಂಕದ ಗಡುವನ್ನು ಮಾತ್ರ ವಿಸ್ತರಿಸಲಾಗಿದೆ. 1000 ದಂಡ ಪಾವತಿಸುವಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಇನ್ನು ಸಹ 1000 ಪಾವತಿಸಿ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುತ್ತಿದ್ದಾರೆ.

Linking of Aadhaar card and PAN card is mandatory for the pensioners, the central government said.
Image Credit: herzindagi

ಪ್ಯಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದವರಿಗೆ ಹೊಸ ಸುದ್ದಿ
ಆದಾಯ ತೆರಿಗೆ ಇಲಾಖೆಯು ಮೌಲ್ಯಮಾಪನ ವರ್ಷದ ಆಯ್ಕೆಯನ್ನು ಬದಲಾಯಿಸಿದೆ. ಆದ್ದರಿಂದ ಮೌಲ್ಯಮಾಪನ ವರ್ಷ 2023-24 ಅನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಹೊಸ ವರ್ಷ ಪ್ರಾರಂಭವಾಗಿದೆ. ಆದ್ದರಿಂದ ಮೌಲ್ಯಮಾಪನ ವರ್ಷ 2024-25 ಅನ್ನು ಆಯ್ಕೆ ಮಾಡಬೇಕಾಗಿದೆ.

Join Nadunudi News WhatsApp Group

ಪಾವತಿಯ ಪ್ರಕಾರವನ್ನು ಇತರೆ ರಸೀದಿಗಳು 500 ಆಯ್ಕೆಯಾಗಿ ಆಯ್ಕೆ ಮಾಡಬೇಕು. ಈ ಬದಲಾವಣೆಗಳನ್ನು ಗಮನಿಸದೆ ದಂಡವನ್ನು ಪಾವತಿಸಿದರೆ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ.

Join Nadunudi News WhatsApp Group