Aadhar Card QR Code: ಆಧಾರ್ ಕಾರ್ಡ್ ನಲ್ಲಿ QR ಕೋಡ್ ಯಾಕಿದೆ ಅನ್ನುವುದು ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ, ಇದರಿಲ್ಲಿದೆ ನಿಮ್ಮ ಅಗತ್ಯ ಮಾಹಿತಿ.

ಒಬ್ಬ ಭಾರತದ ಪ್ರಜ್ಞೆಯ ಎಲ್ಲಾ ಮಾಹಿತಿಯನ್ನ ತಿಳಿದುಕೊಳ್ಳಲು ಆಧಾರ್ ಕಾರ್ಡ್ ನಿಂದ ಮಾತ್ರ ಸಾಧ್ಯವಾಗಿದೆ. ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಕಾರಣ ಆಧಾರ್ ಕಾರ್ಡ್ ಭಾರತದ ವ್ಯಕ್ತಿಯ ಪ್ರಮುಖವಾದ ಗುರುತಿನ ಚೀಟಿ ಆಗಿದೆ. ಅದೇ ರೀತಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ ಅಗತ್ಯ ಕೆಲಸಗಳಿಗೆ Aadhar Card ಬಳಕೆ ಮಾಡುತ್ತಾರೆ ಮತ್ತು ಆಧಾರ್ ಕಾರ್ಡ್ ಇಲ್ಲದೆ ಕೆಲವು ಅಗತ್ಯ ಕೆಲಸಗಳನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಆಧಾರ್ ಕಾರ್ಡ್ ಇರುವವರು ಅದರ ಮೇಲೆ QR Code ಬಗ್ಗೆ ಹೆಚ್ಚಿನ ಗಮನ ಕೊಡದೆ ಇರಬಹುದು. ಸಾಮಾನ್ಯವಾಗಿ ಹೆಚ್ಚಿನ ID Proof ಮೇಲೆ ಇಂತಹ QR Code ಇರುವ ಹಾಗೆ ಆಧಾರ್ ಕಾರ್ಡ್ ನಲ್ಲಿ ಕೂಡ ಇಂತಹ QR Code ಇದೆ ಎಂದು ಎಲ್ಲರೂ ಭಾವಿಸಿದ್ದಾರೆ.

Aadhar Card QR Code ನ ಬಗ್ಗೆ ಹೆಚ್ಚಿನ ಜನರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ ಮತ್ತು Aadhar Card QR Code ನಿಂದ ಏನು ಲಾಭ ಮತ್ತು ಈ QR Code ಅನ್ನು ಯಾವುದೇ ಬಳಕೆ ಮಾಡಿಕೊಳ್ಳಬಹುದು ಅನ್ನುವ ಪ್ರಶ್ನೆ ಹಲವು ಜನರ ತಲೆಯಲ್ಲಿ ಇದೆ. ಹಾಗಾದರೆ ಆಧಾರ್ ಕಾರ್ಡ್ ನಲ್ಲಿ QR Code ನ ಪ್ರಯೋಜನ ಏನು ಮತ್ತು ಈ QR Code ಅನ್ನು ಯಾವ ಸಮಯದಲ್ಲಿ ಬಳಸಬಹುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಆಧಾರ್ ಕಾರ್ಡ್ ನಲ್ಲಿ ಇರುವ QR Code ಮೂಲಕ ನಿಮ್ಮ ಆಧಾರ್ ಕಾರ್ಡ್ ಅಸಲಿನ ಅಥ ನಕಲಿನ ಅನ್ನುವುದನ್ನ ಪತ್ತೆಹಚ್ಚಬಹುದಾಗಿದೆ.

Aadhar car QR code
Image Credit: www.prabhatkhabar.com

ಅದೇ ರೀತಿಯಲ್ಲಿ ಆಧಾರ್ ಕಾರ್ಡ್ ನಲ್ಲಿ ಒಬ್ಬ ವ್ಯಕ್ತಿಯ ಮಾಹಿತಿಯನ್ನ ಈ QR Code ನಲ್ಲಿ ಶೇಖರಣೆ ಮಾಡಲಾಗಿರುತ್ತದೆ. ಹೇಗೆ ಆಧಾರ್ ನಲ್ಲಿ ನಿಮ್ಮ ಹೆಸರು ಮತ್ತು ಇತರೆ ಮಾಹಿತಿ ಇರುತ್ತದೆಯೋ ಅದೇ ರೀತಿಯಲ್ಲಿ Aadhar Card QR Code ನಲ್ಲಿ ಕೂಡ ನಿಮ್ಮ ಹೆಸರು, ಲಿಂಗ, ಜಾತಿ, ಪೋಷಕರ ಹೆಸರು, ಹುಟ್ಟಿದ ದಿನಾಂಕ ಮತ್ತು ಫೋಟೋ ಶೇಖರಣೆ ಮಾಡಲಾಗಿರುತ್ತದೆ ಮತ್ತು ಈ QR Code ಸ್ಕ್ಯಾನ್ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಬಹುದು.

ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ QR Code ಸ್ಕ್ಯಾನರ್ ಅನ್ನು ಡೌನ್ಲೋಡ್ ಮಾಡಿಕೊಂಡು ಸ್ಕ್ಯಾನ್ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಅಸಲಿನ ಅಥವಾ ನಕಲಿನ ಎಂದು ತಿಳಿದುಕೊಳ್ಳಬಹುದು. ಸದ್ಯ ಆಧಾರ್ ಕಾರ್ಡ್ ನಲ್ಲಿ QR Code ಬಗ್ಗೆ ಹೆಚ್ಚಿನ ಜನರು ಗಮನ ಕೊಟ್ಟಿರುವುದಿಲ್ಲ, ಆದರೆ ಈ QR Code ನಿಂದ ನೀವು ಹಲವು ಮಾಹಿತಿಗಳನ್ನ ತಿಳಿದುಕೊಳ್ಳಬಹುದಾಗಿದೆ. ಯಾವುದೇ ಒಂದು ದಾಖಲೆಯಲ್ಲಿ QR Code ಇದೆ ಅಂದರೆ ಆ ಕೋಡ್ ನಲ್ಲಿ ನಿಮ್ಮ ದಾಖಲೆಯ ಅಗತ್ಯ ಮಾಹಿತಿಗಳು ಶೇಖರಣೆ ಮಾಡಲಾಗಿರುತ್ತದೆ ಎಂದು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

Join Nadunudi News WhatsApp Group

Join Nadunudi News WhatsApp Group