Abhishek And Aviva: ಅಭಿಷೇಕ್ ಮತ್ತು ಅವಿವಾಗೆ ಭರ್ಜರಿ ಉಡುಗೊರೆ ನೀಡಿದ ಮಂಡ್ಯ ಜನರು, ಕೃತಜ್ಞತೆ ಸಲ್ಲಿಸಿದ ಅಭಿಷೇಕ್ .

ಅಭಿಷೇಕ್ ಅಂಬರೀಷ್ ಬೀಗರೂಟಕ್ಕೆ ಬಂದ ಜನರು ಬಹಳ ಒಳ್ಳೆಯ ಉಡುಗೊರೆಯನ್ನ ನೀಡಿದ್ದಾರೆ.

Abhishek Ambareesh Reception In Mandya: ಸ್ಯಾಂಡಲ್ ವುಡ್ ನ ನಟರಾದ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ತಮ್ಮ ಬಹುಕಾಲದ ಗೆಳತಿಯ ಜೊತೆ ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 5 ರಂದು ಅಭಿಷೇಕ್ ಅವಿವಾ (Abhishek Aviva Marriage) ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ.

ಭಾರತೀಯ ಚಿತ್ರರಂಗದ ಸ್ಟಾರ್ ನಟ ನಟಿಯರಿಂದ ಹಿಡಿದು ಸಾಕಷ್ಟು ರಾಜಕೀಯ ಗಣ್ಯರು ಅಭಿ ಅವಿವಾ ಮದುವೆಗೆ ಆಗಮಿಸಿದ್ದರು. ಅಭಿಷೇಕ್ ಹಾಗೂ ಅವಿವಾ ಮದುವೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Special gift to Aviva Abhishek in Mandya
Image Credit: news18

ಅವಿವಾ ಅಭಿಷೇಕ್ ಗೆ ಮಂಡ್ಯದಲ್ಲಿ ಸ್ಪೆಷಲ್ ಗಿಫ್ಟ್
ಸ್ಯಾಂಡಲ್ ವುಡ್ ನ ಖ್ಯಾತ ನಟ ಅಭಿಷೇಕ್ ಅಂಬರೀಷ್ ಅವರು ಅವೀವಾ ಬಿದ್ದಪ್ಪ ಅವರನ್ನು ಮದುವೆಯಾಗಿದ್ದು ಮಂಡ್ಯದಲ್ಲಿ ಅದ್ದೂರಿಯಾಗಿ ಬೀಗರ ಔತಣವನ್ನು ಏರ್ಪಡಿಸಿದ್ದಾರೆ. ಅಂಬಿ ಅವರ ಪ್ರೀತಿಯ ಊರು ಮಂಡ್ಯದಲ್ಲಿ ಅದ್ದೂರಿಯಾಗಿ ಬೀಗರ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಅಭೀಷೇಕ್ ಅಂಬರೀಷ್ ಅವರಿಗೆ ಹಾಗೂ ಅವಿವಾ ಅವರಿಗೆ ವಿಶೇಷವಾದ ಒಂದು ಗಿಫ್ಟ್ ಸಿಕ್ಕಿದೆ. ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರನ ಮದುವೆಯಲ್ಲಿ ಅಭಿಮಾನಿಯೊಬ್ಬರು ಸ್ಪೆಷಲ್ ಆಗಿರುವ ಗಿಫ್ಟ್ ಕೊಟ್ಟಿದ್ದಾರೆ. ಈ ಗಿಫ್ಟ್ ನೋಡಿ ನವಜೋಡಿ ಫಿದಾ ಆಗಿದ್ದಾರೆ.

Special gift to Aviva Abhishek in Mandya
Image Credit: news18

ಎತ್ತಿನ ಮೇಲೆ ನವಜೋಡಿಯ ಫೋಟೋ
ಎತ್ತಿನ ಮೇಲೆ ನವಜೋಡಿಯ ಫೋಟೋವನ್ನು ಚಿತ್ರಿಸಲಾಗಿದೆ. ಈ ಫೋಟೋದಲ್ಲಿ ಅಭಿ ಹಾಗೂ ಅವಿವಾ ಅವರ ಲುಕ್ ಸುಂದರವಾಗಿ ಮೂಡಿ ಬಂದಿದೆ. ಎತ್ತಿನ ಮುಖದಲ್ಲಿ ಮುಂಭಾಗ ಅಂಬರೀಷ್ ಹಾಗೂ ಸುಮಲತಾ ಅವರ ಫೋಟೋ ಹಾಕಿ ಸುಂದರವಾಗಿ ಅಲಂಕರಿಸಲಾಗಿತ್ತು. ಎತ್ತಿನ ಜೊತೆ ನಿಂತು ನವಜೋಡಿ ಪೋಸ್ ಕೊಟ್ಟಿದ್ದಾರೆ.

Join Nadunudi News WhatsApp Group

ಅಭಿಷೇಕ್ ಹಾಗು ಅವಿವಾ ಮದುವೆ ಸಂಭ್ರಮ ಇನ್ನು ಮುಗಿದಿಲ್ಲ. ನಿನ್ನೆ ಮಂಡ್ಯದಲ್ಲಿ ಎಲ್ಲರಿಗೂ ಬೀಗರೂಟ ಬಡಿಸಲಾಯಿತು. ಆದರೆ ಕೊನೆಯ ಹಲವು ಜನರಿಗೆ ಊಟ ಸಿಕ್ಕಿಲ್ಲ ಎಂದು ಬೇಸರಮಾಡಿಕೊಂಡಿದ್ದರು ಆ ಕಾರಣಕ್ಕೆ ಅಭಿಷೇಕ್ ಅಂಬರೀಷ್ ಕೆಲವು ಮಾತನಾಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಡ್ಯ ಜನತೆ ಆಶೀರ್ವಾದ ಮಾಡಿದ್ದಾರೆ. ನಮ್ಮ ತಂದೆ ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಡಿಸಿದ್ದೇವೆ. ತುಂಬಾ ಜನ ಕಷ್ಟಪಟ್ಟು ವ್ಯವಸ್ಥೆ ಮಾಡಿದ್ದಾರೆ. ಬೀಗರ ಊಟದಲ್ಲಿ ಶಾರ್ಟೆಜ್ ಆಗಿಲ್ಲ. ಯಾರಿಗೂ ದುಡ್ಡು ಕೊಟ್ಟು ಕರೆಸಿಲ್ಲ, ಪ್ರೀತಿ ಅಭಿಮಾನದಿಂದ ಬಂದಿದ್ದಾರೆ ಎಂದು ಹೇಳಿದ್ದಾರೆ.

Special gift to Aviva Abhishek in Mandya
Image Credit: news18

Join Nadunudi News WhatsApp Group