Abhishek: ವೈರಲ್ ಆಗಿದೆ ಅಭಿಷೇಕ್ ಬೀಗರೂಟದ ಮೆನು, ಅಂಬಿ ಪುತ್ರನ ಬೀಗರೂಟದಲ್ಲಿ ಏನೇನಿದೆ.

ಅಭಿಷೇಕ್ ಅಂಬರೀಷ್ ಮತ್ತು ಅವೀವಾ ಬೀಗರೂಟಕ್ಕೆ ಸುಮಾರು 50 ಸಾವಿರ ಜನರು ಬರಲಿದ್ದಾರೆ ಎಂದು ತಿಳಿದುಬಂದಿದೆ.

Abhishek And Aviva Reception Food Menu: ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂಬಿ ಪುತ್ರನ ಮದುವೆಯ ಸದ್ದು ಜೋರಾಗಿದೆ. ಜೂನ್ 5 ರಂದು ಅಭಿಷೇಕ್ ಅವಿವಾ (Abhishek Aviva Marriage) ಮದುವೆ ಬಹಳ ಅದೂರಿಯಾಗಿ ನಡೆದಿದೆ.

ಭಾರತೀಯ ಚಿತ್ರರಂಗದ ಸ್ಟಾರ್ ನಟ ನಟಿಯರಿಂದ ಹಿಡಿದು ಸಾಕಷ್ಟು ರಾಜಕೀಯ ಮುಖಂಡರು ಅಭಿ ಅವಿವಾ ಮದುವೆಗೆ ಆಗಮಿಸಿದ್ದರು. ಅಭಿಷೇಕ್ ಹಾಗೂ ಅವಿವಾ ಮದುವೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

It is known that around 50 thousand people will come to Abhishek Ambarish and Aviva's reception.
Image Credit: vijaykarnataka

ಮಂಡ್ಯದಲ್ಲಿ ಅಂಬಿ ಪುತ್ರನ ಭರ್ಜರಿ ಬೀಗರೂಟ
ಇನ್ನು ಜೂನ್ 7 ರಂದು ಅಂಬಿ ಪುತ್ರದ ಆರತಕ್ಷತೆ ಕೂಡ ಬಹಳ ಅದ್ದೂರಿಯಾಗಿ ನಡೆದಿದೆ. ಇದೀಗ ನಟಿ, ಸಂಸದೆ ಸುಮಲತಾ ತಮ್ಮ ಮಗನ ಬೀಗರೂಟ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಾರೆ. ಮಂಡ್ಯದಲ್ಲಿ ಬಹಳ ಅದ್ದೂರಿಯಾಗಿ ಬೀಗರೂಟ ಕಾರ್ಯಕ್ರಮ ನೆರವೇರಲಿದೆ. ಇನ್ನು ಅಭಿ ಅವಿವಾ ಮದುವೆಯ ಭೋಜನ ವ್ಯವಸ್ಥೆ ಕೂಡ ಬಹಳ ಅದ್ದೂರಿಯಾಗಿತ್ತು.

abhishek and aviva marriage program
Image Credit: sareeing

ವಿವಿಧ ಭಕ್ಷ್ಯ ಭೋಜನಗಳು ಒಂದೇ ತಟ್ಟೆಯಲ್ಲಿ ಇರಿಸಲಾಗಿತ್ತು. ಮದುವೆಯ ಮೆನು ಕೂಡ ಬಹಳ ವೈರಲ್ ಆಗಿತ್ತು. ಇದೀಗ ಅಭಿ ಅವಿವಾ ಬೀಗರೂಟದ ಮೆನು ಕೂಡ ಭರ್ಜರಿಯಾಗಿಯೇ ಸಿದ್ದಗೊಂಡಿದೆ. ಅಂಬಿ ಪುತ್ರನ ಬೀಗರೂಟ ಕಾರ್ಯಕ್ರಮಕ್ಕೆ ಯಾವ ಯಾವ ರೀತಿಯ ಮೆನು ಸಿದ್ದಪಡಿಸಲಾಗಿದೆ ಎನ್ನುವ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

ಅಂಬಿ ಪುತ್ರನ ಬೀಗರೂಟದಲ್ಲಿ ಏನೇನಿದೆ
ಜೂನ್ 16 ಶುಕ್ರವಾರದಂದು ಮಂಡ್ಯದಲ್ಲಿ ಬೀಗರೂಟ ನೆರವೇರಲಿದೆ. 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 50 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಅಂಬರೀಶ್ ಕುಟುಂಬದ ಆಪ್ತ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಹಾಗೆ ಸುಮಲತಾ ಬೀಗರೂಟಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ಮಂಡ್ಯ ಶೈಲಿಯಲ್ಲೇ ಔತಣ ಬಡಿಸಲು ಅಂಬಿ ಕುಟುಂಬ ಸಜ್ಜಾಗಿದೆ.

Join Nadunudi News WhatsApp Group

abhishek and aviva marriage program
Image Credit: news18

ರೆಬಲ್ ಸ್ಟಾರ್ ಪ್ರಿಯ ತಿನಿಸುಗಳು ಬೀಗರೂಟದಲ್ಲಿ ಮಾಡಲಾಗಿದೆ. ಊಟದಲ್ಲಿ ಮುದ್ದೆ, ಬೋಟಿ ಗೊಜ್ಜು, ಮಟನ್, ಚಿಕನ್, ಮೊಟ್ಟೆ, ಜಿ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಮ್ ಇನ್ನಿತರ ವಿವಿದ ತಿನಿಸುಗಳಿವೆ. ಶುಕ್ರವಾರ ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ಬೆಳಿಗ್ಗೆ 11 ಗಂಟೆಯಿಂದಲೇ ಊಟದ ವಿತರಣೆ ಆರಂಭವಾಗಲಿದೆ.

Join Nadunudi News WhatsApp Group