Wedding Meal: ವೈರಲ್ ಆಗಿದೆ ಅಂಬಿ ಪುತ್ರನ ಮದುವೆಯ ಊಟದ ಮೆನು, ಇದೊಂದು ಭರ್ಜರಿ ಭೋಜನ ಕೂಟ.

ಅಭಿಷೇಕ್ ಅಂಬರೀಷ್ ಮತ್ತು ಅವೀವಾ ಮದುವೆಯಲ್ಲಿ ಭರ್ಜರಿ ಭೋಜನ ವ್ಯವಸ್ಥೆ.

Abhishek And Aviva Wedding Meal: ಅಭಿಷೇಕ್ (Abhishek Ambareesh) ಹಾಗೂ ಅವಿವಾ (Aviva) ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೈರಲ್ ಆಗುತ್ತಿದೆ. ಚಂದನವನದ ಸ್ಟಾರ್ ನಟ ನಟಿಯರು ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಅಭಿಷೇಕ್ ಹಾಗೂ ಅವಿವಾ ಮದುವೆಗೆ ಸಾಕ್ಷಿಯಾಗಿದ್ದಾರೆ.

ಇನ್ನು ಅಭಿಷೇಕ್ ಗೆ ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರೆಟಿಗಳಿಂದ ಹಿಡಿದು ನವ ಜೋಡಿಯ ಕುಟುಂಬದವರಿಂದ ದುಬಾರಿ ಬೆಲೆಯ ಉಡುಗೊರೆ ನೀಡಲಾಗಿದೆ. ಇದೀಗ ಅಭಿಷೇಕ್ ಅವಿವಾ ಮದುವೆಯ ಭರ್ಜರಿ ಭೋಜನದ ವಿವಿಧ ಅಡುಗೆಗಳ ಬಗ್ಗೆ ಮಾಹಿತಿ ಲಭಿಸಿದೆ. 

Grand dinner arrangement at Ambi's son's wedding
Image Credit: ottplay

ಅಭಿಷೇಕ್ ಅವಿವಾ ಅದ್ದೂರಿ ಮದುವೆ ಸಂಭ್ರಮ
ಇನ್ನು ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿ ಹಾಗೂ ಅವಿವಾ ಮದುವೆ ನಡೆದಿದೆ. ಸಾಕಷ್ಟು ಕಲಾವಿದರು, ಗಣ್ಯರು ಹಾಗೂ ಕುಟುಂಬದವರ ಜೊತೆ ಅವಿವಾ ಹಾಗು ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30 ರಿಂದ 10:30 ಮುಹೂರ್ತದಲ್ಲಿ ಅಭಿಶೇಕ್ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಇನ್ನು ಇನ್ನು ಜೂನ್ 7 ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಂಡ್ಯದಲ್ಲಿ ಅದ್ದೂರಿ ಆರತಕ್ಷತೆ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ.

ಮದುವೆಯಲ್ಲಿ ಅತಿಥಿಗಳಿಗಾಗಿ ಅದ್ದೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಅಂಬಿ ಪುತ್ರನ ಮದುವೆಯ ಬಗೆ ಬಗೆಯ ತಿನಿಸುಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Join Nadunudi News WhatsApp Group

Grand dinner arrangement at Ambi's son's wedding
Image Credit: vistaranews

ಅಂಬಿ ಪುತ್ರನ ಮದುವೆಯಲ್ಲಿ ಭರ್ಜರಿ ಭೋಜನ ವ್ಯವಸ್ಥೆ
ಇನ್ನು ಅಭಿಷೇಕ್ ಹಾಗೂ ಅವಿವಾ ಮದುವೆಗೆ ಸಾಕಷ್ಟು ಗಣ್ಯರು ಆಗಮಿಸಿದ್ದಾರೆ. ಇನ್ನು ಅಭಿ ಹಾಗೂ ಅವಿವಾ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹಲವು ಬಗೆಯ ಆಹಾರ ತಿನಿಸುಗಳು ಒಂದೇ ತಟ್ಟೆಯಲ್ಲಿ ಇರಿಸಲಾಗಿದೆ. ಇನ್ನು ಚಪಾತಿ, ಚಟ್ನಿ, ಉಪ್ಪಿನಕಾಯಿ, ಬೆಣ್ಣೆ, ಪಾಯಸ, ಪಲ್ಯ, ಕೋಸಂಬರಿ ಸೇರಿದಂತೆ ಇನ್ನಿತರ ಹತ್ತಾರು ತಿನಿಸುಗಳು ಭೋಜನಕ್ಕೆ ನೀಡಲಾಗಿದೆ.

Join Nadunudi News WhatsApp Group