Aviva Age: ಅವೀವಾ ಬಿಡಪಾ ಅವರು ಅಭಿಷೇಕ್ ಗಿಂತ ಎಷ್ಟು ವರ್ಷ ದೊಡ್ಡವಳು, ವೈರಲ್ ಆಗಿದೆ ಇಬ್ಬರ ವಯಸ್ಸಿನ ಅಂತರ.

ಅಭಿಷೇಕ್ ಅಂಬರೀಷ್ ಮತ್ತು ಅವೀವಾ ಬಿಡಪಾ ಅವರ ವಯಸ್ಸಿನ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

Abhishek And Aviva Age Difference: ಕನ್ನಡ ಚಿತ್ರರಂಗದ ಹಿರಿಯ ಖ್ಯಾತ ನಟ ಅಂಬರೀಷ್ (Ambareesh) ಹಾಗು ನಟಿ ಸುಮಲತಾ (Sumalatha) ಅವರ ಪುತ್ರ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಇದೆ ಜೂನ್ 5 ರಂದು ಅದ್ದೂರಿಯಾಗಿ ಖ್ಯಾತ ಡಿಸೈನರ್ ಅವಿವಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

The age gap between Aviva Bidapa and Abhishek Ambarish has been the cause of debate on social media.
Image Credit: vistaranews

ಅಭಿಷೇಕ್ ಅವಿವಾ ಅದ್ದೂರಿ ಮದುವೆ ಸಂಭ್ರಮ
ಇನ್ನು ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿ ಹಾಗೂ ಅವಿವಾ ಮದುವೆ ನಡೆದಿದೆ. ಸಾಕಷ್ಟು ಕಲಾವಿದರು, ಗಣ್ಯರು ಹಾಗೂ ಕುಟುಂಬದವರ ಮುಂದೆ ಅವಿವಾ ಹಾಗು ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಜೂನ್ 5 ರ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30 ರಿಂದ 10:30 ಮುಹೂರ್ತದಲ್ಲಿ ಅಭಿಷೇಕ್ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಅಭಿಷೇಕ್ ಮತ್ತು ಅವಿವಾ ನಡುವಿನ ವಯಸ್ಸಿನ ಅಂತರ ಎಷ್ಟು
ಅವಿವಾ ಅಭಿಷೇಕ್ ಅವರಿಗಿಂತ ಮೂರು ವರ್ಷ ದೊಡ್ಡವರಂತೆ. ಅಭಿಷೇಕ್ ಅಕ್ಟೋಬರ್ 3 ,1993 ರಲ್ಲಿ ಜನಿಸಿದರು. ಅಭಿಷೇಕ್ ಗೆ 29 ವರ್ಷ. ಹಾಗೆ ಅವಿವಾ ಅವರು 1991 ರಲ್ಲಿ ಜನಿಸಿದ್ದು ಇವರ ವಯಸ್ಸು ಮೂವತ್ತೆರಡು ವರ್ಷವಾಗಿದೆ. ಅವಿವಾ ಅವರು ಅಭಿಷೇಕ್ ಗಿಂತ 2 ವರ್ಷ ದೊಡ್ಡವರಂತೆ.

Aviva Bidapa is two years older than Abhishek Ambareesh
Image Credit: postsen

ಅಭಿಷೇಕ್ ಪತ್ನಿ ಅವಿವಾ ಮೊದಲನೇ ಮದುವೆ
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಫ್ಯಾಶನ್ ಡಿಸೈನರ್ ಪ್ರಾಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಜೂನ್ 5 ರಂದು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಇದೀಗ ಅಭಿಷೇಕ್ ಅವರ ಪತ್ನಿ ಅವಿವಾ ಮೊದಲು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.  ಜೊತೆಗೆ ಅವಿವಾ ಅಭಿಷೇಕ್ ಗಿಂತ ದೊಡ್ಡವರಾಗಿದ್ದರಿಂದ ಯಾಕೆ ಮದುವೆಯಾಗಿದ್ದೀರಿ ಎಂದು ಅಭಿಷೇಕ್ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಅವಿವಾ ಈ ಮೊದಲು ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು ಮದುವೆಯಾಗಿದ್ದು 2016 ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದಾರಂತೆ. ಆ ಬಳಿಕ ಸಿಂಗಲ್ ಆಗಿದ್ದ ಅವಿವಾ ಅವರಿಗೆ ಪಾರ್ಟಿ ಒಂದರಲ್ಲಿ ಸ್ನೇಹಿತರ ಮೂಲಕ ಅಭಿಷೇಕ್ ಅಂಬರೀಷ್ ಅವರ ಪರಿಷಯ ಆಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಇದೀಗ ಎರಡು ಕುಟುಂಬದವರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದಾರೆ.

Join Nadunudi News WhatsApp Group

Abhishek is married to Aviva Bidapa who is two years older than him
Image Credit: indiatoday

ಅಭಿಷೇಕ್ ಹಾಗು ಅವಿವಾ ಮದುವೆಯ ನಂತರ ಅವರಿಬ್ಬರ ವಯಸ್ಸಿನ ಅಂತರ ಚರ್ಚೆ ಆಗುತ್ತಿದೆ. ಅಲ್ಲದೆ ಅವಿವಾ ಅವರಿಗೆ ಇದು ಎರಡನೇ ಮದುವೆಯಾಗಿದ್ದರಿಂದ ಸಾಕಷ್ಟು ಜನರು ಅವಿವಾ ಅವರ ಮೊದಲ ಮದುವೆ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡುತ್ತಿದ್ದಾರೆ.

Join Nadunudi News WhatsApp Group