Abhishek Marriage: ಅಭಿಷೇಕ್ ಮದುವೆಗೆ ಖರ್ಚಾದ ಹಣ ಎಷ್ಟು, ಇದೊಂದು ಐಷಾರಾಮಿ ಮದುವೆ.

ಅಭಿಷೇಕ್ ಅಂಬರೀಷ್ ಮದುವೆಗೆ ಎಷ್ಟು ಹಣ ಖರ್ಚಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Abhishek Ambareesh Marriage Expense: ಅಭಿಷೇಕ್ (Abhishek Ambareesh) ಹಾಗೂ ಅವಿವಾ (Aviva) ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೈರಲ್ ಆಗುತ್ತಿದೆ. ಚಂದನವನದ ಸ್ಟಾರ್ ನಟ ನಟಿಯರು ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಅಭಿಷೇಕ್ ಹಾಗೂ ಅವಿವಾ ಮದುವೆಗೆ ಸಾಕ್ಷಿಯಾಗಿದ್ದಾರೆ.

ಬಹುಕಾಲದ ಗೆಳತಿಯ ಕೈಹಿಡಿದ ಅಂಬಿ ಪುತ್ರ
ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿ ಹಾಗೂ ಅವಿವಾ ಮದುವೆ ನಡೆದಿದೆ. ಸಾಕಷ್ಟು ಕಲಾವಿದರು, ಗಣ್ಯರು. ಕುಟುಂಬದವರ ಜೊತೆ ಅವಿವಾ ಹಾಗು ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30 ರಿಂದ 10:30 ಮುಹೂರ್ತದಲ್ಲಿ ಅಭಿಶೇಕ್ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

Abhishek's wedding expenses
Image Credit: publictv

ಇಬ್ಬರು ಜೊತೆಯಾಗಿ ಸಪ್ತಪದಿ ತುಳಿದು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಭಿಷೇಕ್ ಮದುವೆಗೆ ಖರ್ಚಾದ ಹಣ
ಇನ್ನು ನಟ ಅಂಬರೀಷ್ ಅವರ ಮಗ ಅಭಿಷೇಕ್ ಅಂಬರೀಷ್ ಅವರ ಮದುವೆ ಅದ್ದೂರಿಯಾಗಿ ನಡೆದಿದೆ. ಈ ಶುಭ ಸಮಾರಂಭ ಎಲ್ಲರ ಮನ ಸೆಳೆದಿದೆ. ಹಸೆ ಮನೆ ಮೇಲೆ ಕುಳಿತ ಜೋಡಿ ಅಲಂಕಾರದಿಂದ ಕಂಗೊಳಿಸುತ್ತಿದ್ದರು. ಇನ್ನು ಹಿರಿಯ ನಟ ನಟಿಯರ ಮಗನಾದ ಅಭಿಷೇಕ್ ಅಂಬರೀಷ್ ಮದುವೆಗೆ ಎಷ್ಟು ಹಣ ಖರ್ಚಾಗಿದೆ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿದೆ. ಅಭಿಷೇಕ್ ಹಾಗು ಅವಿವಾ ಮದುವೆಗೆ ಸಾಧಾರಣಾ 10 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗುತ್ತಿದೆ.

Abhishek's wedding expenses
Image Credit: timesofindia

ಅಭಿಷೇಕ್ ಮದುವೆಗೆ ಕಿಚ್ಚನ ದುಬಾರಿ ಉಡುಗೊರೆ
ಅಭಿಷೇಕ್ ಹಾಗು ಅವಿವಾ ಮದುವೆ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ ಕೂಡ ಆಗಮಿಸಿದ್ದಾರೆ. ಕಿಚ್ಚ ಸಖ್ಖತ್ ಎಂಟ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

ಇನ್ನು ಕಿಚ್ಚ ಸುದೀಪ್ ತಮ್ಮ ಪತ್ನಿ ಹಾಗೂ ಮಗಳ ಜೊತೆ ಅಭಿಷೇಕ್ ಅವಿವಾ ಮದುವೆಗೆ ಭಾಗಿಯಾಗಿದ್ದಾರೆ. ಇನ್ನು ಕಿಚ್ಚ ನವ ಜೋಡಿಗೆ ಹಾರೈಸುತ್ತಾ ಅಭಿಷೇಕ್ ದುಬಾರಿ ಉಡುಗೊರೆ ನೀಡಿದ್ದಾರೆ. ದುಬಾರಿ ಮೌಲ್ಯದ ಚಿನ್ನದ ಸರವನ್ನು ಕಿಚ್ಚ ಅಂಭಿ ಪುತ್ರನ ಕೊರಳಿಗೆ ಹಾಕಿದ್ದಾರೆ.

Join Nadunudi News WhatsApp Group