Kishore Kumar: ಮತ್ತೆ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಿಶೋರ್, ವೈರಲ್ ಆಗಿದೆ ಹೇಳಿಕೆ.

ನರೇಂದ್ರ ಮೋದಿಯವರನ್ನ ಮತ್ತೆ ಟೀಕಿಸಿ ಮಾತನಾಡಿದ್ದಾರೆ ನಟ ಕಿಶೋರ್.

Actor Kishore About Narendra Modi: ಕನ್ನಡದ ನಟ ಕಿಶೋರ್ (Kishor) ಹೆಚ್ಚಾಗಿ ವಿವಾದಗಳಲ್ಲಿಯೇ ಸುದ್ದಿಯಲ್ಲಿರುತ್ತಾರೆ. ನಟ ಕಿಶೋರ್ ಹೆಚ್ಚಾಗಿ ಬೇರೆಯವರನ್ನು ಟೀಕಿಸುವುದರಲ್ಲಿಯೇ ಸುದ್ದಿಯಲ್ಲಿರುತ್ತಾರೆ ಎನ್ನಬಹುದು.

ನಟ ಕಿಶೋರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟ ಕಿಶೋರ್ ಅವರ ಸಾಕಷ್ಟು ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ನಟ ಕಿಶೋರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ. ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Actor Kishore criticized Narendra Modi again.
Image Credit: deccanherald

ಸ್ಯಾಂಡಲ್ ವುಡ್ ನ ಹೆಸರಾಂತ ನಟ ಕಿಶೋರ್ ಮತ್ತೆ ಪ್ರಧಾನಿ ಮೋದಿ ಅವರ ವಿರುದ್ಧ ಮಾತನಾಡಿದ್ದಾರೆ, ಈಗಾಗಲೇ ಹಲವಾರು ಬಾರಿ ಪ್ರಧಾನಿ ಮೋದಿ ವಿರುದ್ಧ ಮಾತನಾಡಿರುವ ನಟ ಕಿಶೋರ್ ಈ ಬಾರಿ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನಿಟ್ಟುಕೊಂಡು ನರೇಂದ್ರ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದ್ದಾರೆ.

ಮತ್ತೆ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಿಶೋರ್
ಮಣಿಪುರ ಹಿಂಸಾಚಾರದಿಂದ ನಲಗುತ್ತಿದೆ. ಅಲ್ಲಿ ಶಾಂತಿ ಸ್ಥಾಪಿಸಲು ಹಲವಾರು ರೀತಿಯಲ್ಲಿ ಕಸರತ್ತುಗಳು ನಡೆಯುತ್ತಿವೆ. ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

Actor Kishore has spoken against Narendra Modi on the issue of Manipur.
Image Credit: theprint

ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ ನರೇಂದ್ರ ಮೋದಿ ಮೌನವಹಿಸಿದ್ದಾರೆ ಎನ್ನುವುದು ನಟ ಕಿಶೋರ್ ಆರೋಪ ಆಗಿದೆ. ಇನ್ನು ಈ ವಿಷಯದ ಕುರಿತು ನಟ ಕಿಶೋರ್ ಮಾತನಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Join Nadunudi News WhatsApp Group

ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್ ದೇಶದಲ್ಲಿ ಎಲ್ಲೇ ಅಶಾಂತಿ ನಡೆದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತಿ ಸರಳ, ಕಾಮನ್ ಸೆನ್ಸ್ ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನು ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು ಎಂದು ನಟ ಕಿಶೋರ್ ಪ್ರಶ್ನೆ ಮಾಡಿದ್ದಾರೆ.

Actor Kishore expressed opposition to actor Kishore's silence on the Manipur issue
Image Credit: abplive

ಮೋದಿ ವಿರುದ್ಧ ಕಿಡಿಕಾರಿದ ನಟ ಕಿಶೋರ್
ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ. 2002 ರಲ್ಲಿ ಗುಜರಾತ್ 2023 ರಲ್ಲಿ ಮಣಿಪುರ ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ. ಇತಿಹಾಸಕ್ಕೆ ನೆನಪಿರಲಿ ಎಂದು ಕಿಶೋರ್ ಬರೆದುಕೊಂಡಿದ್ದಾರೆ.

Join Nadunudi News WhatsApp Group