Paaru Serial Sharath Padmanabh: ಪ್ರೇಯಸಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಾರು ಖ್ಯಾತಿಯ ಶರತ್ ಪದ್ಮನಾಭ್.

Paaru Serial Sharath Padmanabh Marriage: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪಾರು (Paaru Serial) ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲಿ ಪ್ರತಿಯೊಬ್ಬರ ಪಾತ್ರ ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ.

ಪಾರು ಧಾರಾವಾಹಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ಸೀರಿಯಲ್ ನಲ್ಲಿ ಶರತ್ ಪದ್ಮನಾಭ್ (Sharath padmanabh) ನಾಯಕ ನಟನಾಗಿ ಮಿಂಚುತ್ತಿದ್ದಾರೆ.

Paru serial lead actor Sarath Padmanabh has entered into his married life.
Image Credit: instagram

ಶರತ್ ಪದ್ಮನಾಭ್ ತಮ್ಮ ನಟನೆಯ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಪಾರು ಧಾರಾವಾಹಿಯ ನಾಯಕ ನಟ ಶರತ್ ಪದ್ಮನಾಭ್ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಸೆಮಣೆ ಏರಿದ ನಟ ಶರತ್ ಪದ್ಮನಾಭ್
ಕಿರುತೆರೆಯ ಜನಪ್ರಿಯ ಧಾರಾವಾಹಿ ಪಾರು ಮೂಲಕ ಮನೆ ಮಾಟದ ನಟ ಶರತ್ ಪದ್ಮನಾಭ್ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ ಶರತ್ ಪದ್ಮನಾಭ್ ಅವರು ತಮ್ಮ ಬಹುಕಾಲದ ಗೆಳತೀ ದಿವ್ಯಶ್ರೀ ಜೊತೆ ಹಸೆಮಣೆ ಏರಿದ್ದಾರೆ.

Sharat Padmanabh of Paru fame entered married life
Image Credit: instagram

ನಟ ಶರತ್ ಪದ್ಮನಾಭ್ ಮತ್ತು ದಿವ್ಯಶ್ರೀ ( Divyashree) ಅವರ ಮದುವೆ ಸಂಭ್ರಮ
ಜಸ್ಟ್ ಮಾತ್ ಮಾತಲ್ಲಿ ಪುಟ್ಟಮಲ್ಲಿ ಸೇರಿದಂತೆ ಹಲವು ಸೀರಿಯಲ್ ನಲ್ಲಿ ನಟಿಸಿದ್ದ ಪ್ರತಿಹನ್ವಿತ ನಟ ಶರತ್ ತಮ್ಮ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

Join Nadunudi News WhatsApp Group

ಬೆಂಗಳೂರಿನಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಜನವರಿ 22 ರಂದು ಶರತ್ ಮತ್ತು ದಿವ್ಯಶ್ರೀ ಮದುವೆ ಆಗಿದ್ದಾರೆ. ನಟ ಶರತ್ ಪದ್ಮನಾಭ್ ಮತ್ತು ದಿವ್ಯಶ್ರೀ ಮದುವೆಗೆ ಪಾರು ಸೀರಿಯಲ್ ತಂಡ ಮತ್ತು ಜೀ ವಾಹಿನಿಯ ಕೆಲವು ಸ್ನೇಹಿತರಿಗೆ ಆಹ್ವಾನ ನೀಡಲಾಗಿತ್ತು.

Sharat Padmanabh entered married life with his girlfriend
Image Credit: instagram

ನಟ ಅನಿರುದ್ದ್ (Actor Anirudd), ಗಟ್ಟಿಮೇಳ ಖ್ಯಾತಿಯ ರಕ್ಷ್ (Raksh), ಹಿಟ್ಲರ್ ಕಲ್ಯಾಣ ಸೀರಿಯಲ್ ನ ದೀಲಿಪ್ ರಾಜ್ (Deelip Raj) ಸೇರಿದಂತೆ ಹಲವಾರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ತಮ್ಮ ಮದುವೆ ಬಗ್ಗೆ ಆಗಲಿ ನಿಶ್ಚಿತಾರ್ಥದ ಬಗ್ಗೆ ಆಗಲಿ ಶರತ್ ಪದ್ಮನಾಭ್ ಯಾವುದೇ ರೀತಿಯಾದ ಸ್ಪಷ್ಟನೆ ನೀಡಿಲ್ಲ.

Join Nadunudi News WhatsApp Group