Ramya Marriage: ಮದುವೆ ಬಗ್ಗೆ ಮಾತನಾಡಿದ ನಟಿ ರಮ್ಯಾ, ಗೌಡ್ರು ಹುಡುಗ ಬೇಕು ಎಂದು ನಟಿ ರಮ್ಯಾ.

ಚುನಾವಣೆ ಪ್ರಚಾರದಲ್ಲಿ ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ತಿಳಿಸಿದ ರಮ್ಯಾ.

Actress Ramya: ಸ್ಯಾಂಡಲ್ ವುಡ್ ಸ್ಟಾರ್ ನಟಿ ರಮ್ಯಾ (Ramya) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಇನ್ನು ನಟಿ ರಮ್ಯಾ ಕರ್ನಾಟಕ ವಿಧಾನಸಭಾ ಚುನಾವಣೆಯ (Assembly Election) ಅಂಗವಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ನಟಿ ರಮ್ಯಾ ತೊಡಗಿದ್ದಾರೆ. ಇನ್ನು ಚುನಾವಣಾ ಪ್ರಚಾರದ ವೇಳೆ ಕೂಡ ನಟಿ ರಮ್ಯಾ ಅವರಿಗೆ ತಮ್ಮ ಮದುವೆಯ ವಿಚಾರವಾಗಿ ಪ್ರಶ್ನೆ ಎದುರಾಗಿದೆ. ಮದುವೆಯ ಬಗ್ಗೆ ನಟಿ ರಮ್ಯಾ ಯಾವ ರೀತಿ ಉತ್ತರಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

During the election campaign, Ramya told how a married boy should be.
Image Credit: timesofindia.indiatimes

ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮೋಹಕತಾರೆ
ನಟಿ ರಮ್ಯಾ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಇದ್ದು ರಾಜಕೀಯದಲ್ಲಿ ತೊಡಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ನಟಿ ರಮ್ಯಾ ತಮ್ಮದೇ ಆದ ಹೆಸರು ಮಾಡಿದ್ದಾರೆ. ಇತ್ತೀಚೆಗಷ್ಟೇ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಇನ್ನು ರಾಜ್ಯ ವಿಧಾನಸಭಾ ಚುನಾವಣಾ ಸಲುವಾಗಿ ರಮ್ಯಾ ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಮದುವೆ ಯಾವಾಗ ಎನ್ನುವ ಪ್ರಶ್ನೆ ಉತ್ತರಿಸಿದ ರಮ್ಯಾ
ನಟಿ ರಮ್ಯಾ ಅವರು ಇನ್ನು ಕೂಡ ಮದುವೆಯಾಗಿಲ್ಲ. ರಮ್ಯಾ ಅವರ ಮದುವೆಯ ಸುದ್ದಿಯನ್ನು ಕೇಳಲು ಕನ್ನಡ ಚಿತ್ರರಂಗ ಕಾಯುತ್ತಿದೆ. ಸಾಮಾನ್ಯವಾಗಿ ರಮ್ಯಾ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಪ್ರತಿ ಬಾರಿ ಎದುರಾಗುತ್ತದೆ. ಅದೇ ರೀತಿ ಚುನಾವಣಾ ಪ್ರಚಾರದ ವೇಳೆ ಕೂಡ ನಟಿ ರಮ್ಯಾ ಅವರಿಗೆ ಮದುವೆಯ ವಿಚಾರವಾಗಿ ಪ್ರಶ್ನೆ ಕೇಳಲಾಗಿದೆ.

Actress Ramya said that she wants a Gaudru boy to marry her during the Mandya election campaign.
Image Credit: thehindu

ಮದುವೆ ಯಾವಾಗ ಆಗುತ್ತೀರಾ ಎನ್ನುವ ಪ್ರಶ್ನೆ ರಮ್ಯಾ ನಗುತ್ತಲೇ ಉತ್ತರಿಸಿದ್ದಾರೆ. “ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿ ಕೊಡಿ. ನನಗು ಹುಡುಗನನ್ನು ನೋಡಿ ನೋಡಿ ಸಾಕಾಗಿದೆ. ಮಂಡ್ಯದಲ್ಲೇ ಸ್ವಯಂವರ ಮಾಡಿ” ಎಂದು ನಟಿ ರಮ್ಯಾ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group