Annapurna Yojana: ಮಹಿಳೆಯರಿಗಾಗಿ ಮತ್ತೊಂದು ಯೋಜನೆ, ಮಹಿಳೆಯರ ಖಾತೆಗೆ ಜಮಾ ಆಗಲಿದೆ 50 ಸಾವಿರ.

ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ

Annapurna Yojana  For Women’s: ಸದ್ಯ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದತ್ತ ತನ್ನ ಗುರಿಯನ್ನು ಇಟ್ಟುಕೊಂಡಿದೆ, ಮಹಿಳೆಯರಿಗೆ ಆಗಾಗ ಆರ್ಥಿಕ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹಿಳೆಯರಿಗಾಗಿ ಸಾಲ ಸೌಲಭ್ಯವನ್ನು ನೀಡಲು ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ಮಹಿಳೆಯಯರು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಸಹಾಯವಾಗಲು ಕೇಂದ್ರ ಸರ್ಕಾರ ಉದ್ಯಮ ಸಾಲವನ್ನು ನೀಡುತ್ತಿದೆ.

ಈಗಾಗಲೇ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮುದ್ರಾ ಲೋನ್, ಮಹಿಳಾ ಉದ್ಯಮ ನಿಧಿ, ಮಹಿಳಾ ವಿಕಾಸ ಯೋಜನೆ, ಉದ್ಯೋಗಿನಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯವನು ನೀಡುತ್ತಿದೆ. ಈ ಎಲ್ಲ ಯೋಜನೆಗಳ ಜೊತೆಗೆ ಇದೀಗ ಹೊಸ ಯೋಜನೆ ಕೂಡ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡಲಿದೆ.

Annapurna Yojana For Women's
Image Credit: Thebetterindia

ಮಹಿಳೆಯರ ಖಾತೆಗೆ ಜಮಾ ಆಗಲಿದೆ 50 ಸಾವಿರ
ಸದ್ಯ ಮಹಿಳೆಯರಿಗೆ ಪರಿಚಯಿಸಿರುವ ಸಾಲದ ಯೋಜನೆಗಳಲ್ಲಿ ಇನ್ನುಮುಂದೆ Annapurna Yojana ಕೂಡ ಒಂದಾಗಲಿದೆ. ಇದೀಗ ನಾವು ಈ ಲೇಖನದಲ್ಲಿ ಈ ಯೋಜನೆಯ ಕೇಂದ್ರ ಸರ್ಕಾರ ಅನ್ನಪೂರ್ಣ ಯೋಜನೆಯಡಿ ಯಾವ ಉದ್ಯಮಕ್ಕೆ ಸಾಲವನ್ನು ನೀಡುತ್ತಿದೆ..? ಎಷ್ಟು ಸಾಲವನ್ನು ನೀಡುತ್ತಿದೆ..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಇದೀಗ ಫುಡ್ ಕೇಟರಿಂಗ್ ಉದ್ಯಮ ಆರಂಭಿಸುವ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಅನ್ನಪೂರ್ಣ ಯೋಜನೆ ಜಾರಿಗೊಳಿಸುತ್ತಿದೆ. ಅನ್ನಪೂರ್ಣ ಯೋಜನೆಯಡಿ ಮಹಿಳೆಯರು ಪ್ರಾರಂಭಿಕ ವ್ಯಾಪಾರ ಸಾಲವಾಗಿ 50 ಸಾವಿರ ಪಡೆಯಬಹುದು. ಈ ಉದ್ಯಮ ಸಾಲವನ್ನು ಪಡೆಯುವ ಮೂಲಕ ನೀವು ಅಡುಗೆ ಉಪಕರಣಗಳು, ಫ್ರಿಜ್, ಗ್ಯಾಸ್ ಸಂಪರ್ಕ, ಡೈನಿಂಗ್ ಟೇಬಲ್‌ ಗಳನ್ನು ಖರೀದಿಸಬಹುದು.

ಅನ್ನಪೂರ್ಣ ಸಾಲವನ್ನು ಪಡೆಯಲು ಯಾರು ಅರ್ಹರು…?
•ಅನ್ನಪೂರ್ಣ ಸಾಲವನ್ನು ಪಡೆಯಲು 18-60 ವರ್ಷದೊಳಗಿನ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.

Join Nadunudi News WhatsApp Group

•ಸಾಲದ ಮೊತ್ತವನ್ನು ಮೂರು ವರ್ಷಗಳಲ್ಲಿ ಮರುಪಾವತಿ ಮಾಡಬೇಕು.

•SBI ಶಾಖೆಯನ್ನು ಸಂಪರ್ಕಿಸುವ ಮೂಲಕ ಮಹಿಳೆಯರು ಈ ಸಾಲವನ್ನು ಪಡೆದುಕೊಳ್ಳಬಹುದು.

Annapurna Loan Scheme
Image Credit: Mumbaitak

Join Nadunudi News WhatsApp Group