Mosquito: ಈ ಆಪ್ ನ ಮೂಲಕ ಸೊಳ್ಳೆಗಳನ್ನು ಕಡಿಮೆ ಮಾಡಬಹುದು.

ಸೊಳ್ಳೆಗಳ ನಿವಾರಣೆಗೆ ಸ್ಮಾರ್ಟ್ ಫೋನ್ ಸಹಾಯವಾಗಲಿದೆ.

App For Mosquitos Control: ದೇಶದಲ್ಲಿ ಸ್ಮಾರ್ಟ್ ಫೋನ್ (Smartphone) ಬಳಕೆ ಹೆಚ್ಚುತ್ತಿದೆ. ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬರುತ್ತಿದಂತೆ ಅದರ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ. ಇನ್ನು ಸ್ಮಾರ್ಟ್ ಫೋನ್ ಜನಸಾಮಾನ್ಯರಿಗೆ ಹೆಚ್ಚಿನ ಸಹಾಯ ಮಾಡಲಿದೆ. ಬ್ಯಾಂಕಿಂಗ್ ವ್ಯವಹಾರ, ಯುಪಿಐ ಸೇರಿದಂತೆ ಇನ್ನಿತರ ಹತ್ತು ಹಲವು ಕೆಲಸಗಳನ್ನು ಮೊಬೈಲ್ ನಲ್ಲಿಯೇ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಜನರು ಹೆಚ್ಚಾಗಿ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಾರೆ.

App For Mosquitos Control
Image Credit: Engadget

ಸೊಳ್ಳೆಗಳ ನಿವಾರಣೆಗೆ ಸ್ಮಾರ್ಟ್ ಫೋನ್ ಸಹಾಯವಾಗಲಿದೆ
ಪ್ರಸ್ತುತ ಮಳೆಗಾಲ ನಡೆಯುತ್ತಿದೆ. ಮಳೆಗಾಲದಲ್ಲಿ ಸೊಳ್ಳೆಗಳ (Mosquito) ಕಾಟ ಹೆಚ್ಚಿರುತ್ತದೆ. ಸೊಳ್ಳೆಗಳನ್ನು ಓಡಿಸಲು ಜನರು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಸೊಳ್ಳೆ ನಿವಾರಣೆಗಾಗಿ ಸೊಳ್ಳೆ ಬತ್ತಿ, ಬ್ಯಾಟ್, ಇನ್ನಿತರ ವಸ್ತುಗಳನ್ನು ಉಪಯೋಗಿಸುತ್ತಾರೆ. ಆದರೆ ಇವುಗಳಿಂದ ಕೆಲವು ಸಮಸ್ಯೆ ಕೂಡ ಎದುರಾಗುತ್ತದೆ. ಸೊಳ್ಳೆ ಬತ್ತಿ ಹಚ್ಚಿದರೆ ಅದರ ಹೊಗೆ ಜನರಿಗೆ ಅಪಾಯಕಾರಿಯಾಗಿರುತ್ತದೆ. ಇದೀಗ ನೀವು ನಿಮ್ಮ ಬಳಿ ಇರುವ ಮೊಬೈಲ್ ನಲ್ಲಿಯೇ ಸೊಳ್ಳೆಯನ್ನು ಓಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಈ ಆಪ್ ನ ಮೂಲಕ ಸೊಳ್ಳೆಗಳನ್ನು ಕಡಿಮೆ ಮಾಡಬಹುದು
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದಾದರು ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ. ಈಗಂತೂ ಸ್ಮಾರ್ಟ್ ಫೋನ್ ಜನರ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್ ಫೋನ್ ಬಳಕೆದರು ತಮ್ಮ ಮೊಬೈಲ್ ನಲ್ಲಿ ವಿವಿಧ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುತ್ತಾರೆ. ಇದೀಗ ನೀವು ಸೊಳ್ಳೆಗಳನ್ನು ನಿವಾರಿಸಲು ಈ ಆಪ್ ಗಳನ್ನೂ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆಪ್ ಗಳು ಆಪ್ ಸ್ಟೋರ್ ನಲ್ಲಿ ಲಭ್ಯವಿರುತ್ತದೆ.

App For Mosquitos Control
Image Credit: Gizbot

ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಲ್ಲಿ ಪ್ರಮುಖವಾಗಿ ಮಸ್ಕಿಟೋಸ್ ಕಿಲ್ಲರ್, ಮಸ್ಕಿಟೋಸ್ ವಾಯ್ಸ್, ಫ್ರಿಕ್ವೆನ್ಸಿ ಜನರೇಟ್ ಸೇರಿದಂತೆ ಇನ್ನಿತರ ಆಪ್ ಗಳು ಲಭ್ಯವಿದೆ. ಈ ಆಪ್ ಗಳನ್ನೂ ಬಳಸಿಕೊಂಡು ನೀವು ಸೊಳ್ಳೆಗಳನ್ನು ನಿವಾರಿಸಬಹುದು. ಈ ಆಪ್ ಗಳು ಪ್ಲೇ ಸ್ಟೋರ್ ನಲ್ಲಿಉಚಿತವಾಗಿ ಲಭ್ಯವಿದೆ.ಈ ಆಪ್ ಗಳ ಬಳಕೆಯಿಂದಾಗಿ ಸ್ವಲ್ಪ ಮಟ್ಟಿಗೆ ಸೊಳ್ಳೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group