Mobile Call: ಮೊಬೈಲ್ ಬಳಸುವ ಎಲ್ಲರಿಗೂ ಮೇ 1 ರಿಂದ ಹೊಸ ನಿಯಮ, TRAI ಮಹತ್ವದ ನಿರ್ಧಾರ.

ನಕಲಿ ಕರೆ ಮತ್ತು ಸಂದೇಶಕ್ಕೆ ಕಡಿವಾಣ ಹಾಕಲು TRAI ಮೇ ೧ ನೇ ತಾರೀಕಿನಿಂದ ಹೊಸ ನಿಯಮವನ್ನ ಜಾರಿಗೆ ತರುತ್ತಿದೆ.

Artificial Intelligence Spam: ಇತ್ತೀಚಿನ ದಿನಗಳಲ್ಲಿ ಅನೇಕ ನಿಯಮಗಲ್ಲಿ ಬದಲಾವಣೆ ಆಗುತ್ತಿದೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ಈ ಬಾರಿಯ ಹಣಕಾಸು ವರ್ಷವೂ ಬಾರಿ ಹಣದುಬ್ಬರದ ಪರಿಸ್ಥಿಯನ್ನು ನೀಡಿದೆ.

ಇನ್ನು ಹಣಕಾಸು ವರ್ಷದ ಆರಂಭದ ಕಾರಣ ಹಣಕಾಸು ವ್ಯವಹಾರಗಳು ಸಾಕಷ್ಟು ಬದಲಾಗಿವೆ. ಇನ್ನು ಮೇ 1 ರಿಂದ ಕೂಡ ಅನೇಕ ನಿಯಮಗಳು ಬದಲಾಗಲಿವೆ. ಮೇ ಆರಂಭದಿಂದ ಮೊಬೈಲ್ ಕರೆಗಳ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ನಕಲಿ ಕರೆಗಳು ಹಾಗೂ ನಕಲಿ ಸಂದೇಶಗಳಿಗೆ ಸಂಬಂಧಿಸಿದಂತೆ ನಿಯಮಗಳ ಬದಲಾವಣೆಯನ್ನು ಘೋಷಿಸಲಾಗಿದೆ.

New rules will come into effect on mobile calls from May 1
Image Credit: youthkiawaaz

ಮೊಬೈಲ್ ಕರೆಗಳಲ್ಲಿ ಹೊಸ ನಿಯಮ
ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಸೈಬರ್ ಕ್ರೈಮ್ ಗಳು ನಡೆಯುತ್ತಿವೆ. ಮೊಬೈಲ್ ಫೋನ್ ಗಳಿಗೆ ಕರೆ ಅಥವಾ ಎಸ್ ಎಂಎಸ್ ಕಳುಹಿಸುವ ಮೂಲಕ ನಡೆಯುವ ವಂಚನೆಯ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ನಕಲಿ ಸಂದೇಶ ಹಾಗೂ ಎಸ್ ಎಂಎಸ್ ಗಳಿಂದ ಬಳಲುತ್ತಿರುವ ಗ್ರಾಹಕರಿಗೆ ಇದೀಗ ಪರಿಹಾರ ನೀಡಲು ಮುಂದಾಗಿದೆ. ಟ್ರಾಯ್ ಎಐ ಫಿಲ್ಟರ್ ಸ್ಥಾಪಿಸುವ ಮೂಲ ನಕಲಿ ಕರೆ ಹಾಗೂ ಸಂದೇಶಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

TRAI is implementing new rules from May 1 to crack down on fake calls and messages.
Image Credit: harvard

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪ್ಯಾಮ್ ಫಿಲ್ಟರ್ (Artificial Intelligence Spam Filter) 
ಮೇ 1 ರಿಂದ ತಮ್ಮ ಕೆರೆಗಳು ಮತ್ತು ಎಸ್ ಎಂಎಸ್ ಸೇವೆಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪ್ಯಾಮ್ ಫಿಲ್ಟರ್ ಅಳವಡಿಸುವುದು ಕಡ್ಡಾಯ ಎಂದು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಆದೇಶ ಹೊರಡಿಸಿದೆ.

ಈ ಹೊಸ ಫಿಲ್ಟರ್ ಗ್ರಾಹಕರಿಗೆ ನಕಲಿ ಕರೆ ಮತ್ತು ಎಸ್ ಎಂಎಸ್ ಬರುವುದನ್ನು ತಪ್ಪಿಸಲು ಸಹಾಯವಾಗಲಿದೆ. ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ ಈ ಸೇವೆಗಳನ್ನು ಶೀಘ್ರದಲ್ಲೇ ಅಳವಡಿಸುವುದಾಗಿ ಘೋಷಣೆ ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group