Seniors Pension: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಪ್ರತಿ ತಿಂಗಳು ಸಿಗಲಿದೆ 5000 ರೂ, ಕೇಂದ್ರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ಈ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ 5000 ಪಿಂಚಣಿ.

Senior Citizens Pensions: ಜನಸಾಮಾನ್ಯರಿಗಾಗಿ ಹೂಡಿಕೆ ಮಾಡಲು ವಿವಿಧ ಯೋಜನೆಗಳು ಚಾಲ್ತಿಯಲ್ಲಿವೆ. ಜನರು ಹೆಚ್ಚಾಗಿ ಕಡಿಮೆ ಹೂಡಿಕೆಯ ಯೋಜನೆಗಳನ್ನು ಅರಸುತ್ತಾರೆ. ಇನ್ನು ಜನರು ತಮ್ಮ ವೃದ್ದಾಪ್ಯದ ಜೀವನಕ್ಕಾಗಿ ಹೆಚ್ಚಾಗಿ ಪಿಂಚಣಿ ಯೋಜನೆಯಲ್ಲಿ (Pension Scheme) ಹೂಡಿಕೆ ಮಾಡಲು ಬಯಸುತ್ತಾರೆ.

ನೀವು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನಿಮಗೆ ಸಾಕಷ್ಟು ಆಯ್ಕೆಗಳು ಸಿಗುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಬೇರೊಬ್ಬರ ಮೇಲೆ ಅವಲಂಬಿತರಾಗದೆ ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದಾಗಿದೆ.

Atal Pension Scheme Latest
Image Credit: Hari Bhoomi

ಅಟಲ್ ಪಿಂಚಣಿ ಯೋಜನೆ (Atal Pension Scheme)
ಅಟಲ್ ಪಿಂಚಣಿ ಯೋಜನೆ (Atal Pension Scheme) ಯು 22 ವರ್ಷಗಳ ಹೂಡಿಕೆಯ ಅವಧಿಯನ್ನು ಪಡೆದುಕೊಂಡಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ 18 ರಿಂದ 42 ವರ್ಷದೊಳಗಿನವರು ಹೂಡಿಕೆ ಮಾಡಬಹುದಾಗಿದೆ. ಹಾಗೆ ಈ ಯೋಜನೆಗೆ ಸೇರಲು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರಬೇಕಾಗುತ್ತದೆ.

60 ವರ್ಷ ಮೇಲ್ಪಟ್ಟ ಹಿರಿಯರಿಗೆ ಪ್ರತಿ ತಿಂಗಳು ಸಿಗಲಿದೆ 5000
ಈ ಯೋಜನೆಗೆ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಗಂಡ ಹೆಂಡತಿ ಇಬ್ಬರು ಹೂಡಿಕೆ ಮಾಡಿದರೆ 60 ವರ್ಷ ವಯಸ್ಸಿನ ನಂತರ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಪ್ರತಿ ತಿಂಗಳು ಐದು ಸಾವಿರ ರೂಪಾಯಿಗಳ ಪಿಂಚಣಿ ಪಡೆಯುತ್ತಾರೆ.

Atal Pension Scheme Profit
Image Credit: NDTV

ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಸಂಗಾತಿಗೆ ಪಿಂಚಣಿ ದೊರೆಯುತ್ತದೆ. ಒಂದು ವೇಳೆ ಇಬ್ಬರೂ ಮೃತಪಟ್ಟರೆ ಪಿಂಚಣಿ ನಿಧಿಯು ನಾಮಿನಿಗೆ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಅರ್ಧಕ್ಕೆ ಪಿಂಚಣಿಯನ್ನು ಕೊನೆಗೊಳಿಸುವಂತಿಲ್ಲ. ಹೂಡಿಕೆದಾದರೂ ಮೃತಪಟ್ಟ ಸಂದರ್ಭದಲ್ಲಿ ಮಾತ್ರ ಈ ಯೋಜನೆಯನ್ನು ರದ್ದುಗೊಳಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group