Aviva Bidapa: ಅಭಿಷೇಕ್ ಪತ್ನಿಗೆ ಇದು ಎರಡನೆಯ ಮದುವೆ, ಹಾಗಾದರೆ ಅವೀವಾ ಅವರ ಮೊದಲ ಗಂಡ ಯಾರು.

ಸಾಮಾಜಿಕ ಜಾಲತಾಣದಲ್ಲಿ ಅವೀವಾ ಅವರ ಮೊದಲ ಮದುವೆಯ ವಿಷಯ ಈಗ ವೈರಲ್ ಆಗಿದೆ.

Aviva Bidapa Fiorst Husband: ಅಭಿಷೇಕ್ (Abhishek Ambareesh) ಹಾಗೂ ಅವಿವಾ (Aviva) ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೈರಲ್ ಆಗುತ್ತಿದೆ. ಚಂದನವನದ ಸ್ಟಾರ್ ನಟ ನಟಿಯರು ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಅಭಿಷೇಕ್ ಹಾಗೂ ಅವಿವಾ ಮದುವೆಗೆ ಸಾಕ್ಷಿಯಾಗಿದ್ದಾರೆ.

The topic of Aviva's first marriage has now gone viral on social media.
Image Credit: postsen

ಬಹುಕಾಲದ ಗೆಳತಿಯ ಕೈಹಿಡಿದ ಅಂಬಿ ಪುತ್ರ
ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿ ಹಾಗೂ ಅವಿವಾ ಮದುವೆ ನಡೆದಿದೆ. ಸಾಕಷ್ಟು ಕಲಾವಿದರು, ಗಣ್ಯರು. ಕುಟುಂಬದವರ ಜೊತೆ ಅವಿವಾ ಹಾಗು ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಜೂನ್ 5 ರ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30 ರಿಂದ 10:30 ಮುಹೂರ್ತದಲ್ಲಿ ಅಭಿಶೇಕ್ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಇಬ್ಬರು ಜೊತೆಯಾಗಿ ಸಪ್ತಪದಿ ತುಳಿದು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Aviva Bidapa's second marriage is now being heard on social media
Image Credit: dnaindia

ಅಭಿಷೇಕ್ ಪತ್ನಿ ಅವಿವಾ ಮೊದಲನೇ ಮದುವೆ
ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಫ್ಯಾಶನ್ ಡಿಸೈನರ್ ಪ್ರಾಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಜೂನ್ 5 ರಂದು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಇದೀಗ ಅಭಿಷೇಕ್ ಅವರ ಪತ್ನಿ ಅವಿವಾ ಮೊದಲು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಜೊತೆಗೆ ಅವಿವಾ ಅಭಿಷೇಕ್ ಗಿಂತ ದೊಡ್ಡವರಾಗಿದ್ದರಿಂದ ಯಾಕೆ ಮದುವೆಯಾಗಿದ್ದೀರಿ ಎಂದು ಅಭಿಷೇಕ್ ಅವರನ್ನು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅವಿವಾ ಈ ಮೊದಲು ಉದ್ಯಮಿ ವಿಕ್ರಂ ಮೆಹ್ತಾ ಅವರನ್ನು ಮದುವೆಯಾಗಿದ್ದು 2016 ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದಾರಂತೆ.

Join Nadunudi News WhatsApp Group

Aviva Bidapa already had one marriage which she got divorced
Image Credit: sakshi

ಆ ಬಳಿಕ ಸಿಂಗಲ್ ಆಗಿದ್ದ ಅವಿವಾ ಅವರಿಗೆ ಪಾರ್ಟಿ ಒಂದರಲ್ಲಿ ಸ್ನೇಹಿತರ ಮೂಲಕ ಅಭಿಷೇಕ್ ಅಂಬರೀಷ್ ಅವರ ಪರಿಷಯ ಆಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಇದೀಗ ಎರಡು ಕುಟುಂಬದವರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದಾರಂತೆ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣ ಮಂಟಪದಲ್ಲಿ ಗೌಡರ ಸಂಪ್ರದಾಯದಂತೆ ಅಭಿಷೇಕ್ ಹಾಗೂ ಅವಿವಾ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

Join Nadunudi News WhatsApp Group