Pension Scheme: ಈಗ ಮದುವೆಯಾಗದವರಿಗೂ ಸಿಗಲಿದೆ ಪಿಂಚಣಿ, ಜಾರಿಗೆ ಬಂತು ಬ್ರಹ್ಮಚಾರಿ ಪಿಂಚಣಿ ಯೋಜನೆ.

ಅವಿವಾಹಿತರಿಗೂ ಪಿಂಚಣಿ ಯೋಜನೆ ಜಾರಿಗೆ ತರಲು ಚಿಂತನೆ ನೆಡೆಸಿದ ಹರಿಯಾಣ ಸರ್ಕಾರ.

Bachulors Pension Scheme: ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳು ಜಾರಿಗೆ ಆಗುತ್ತಾ ಇರುತ್ತವೆ. ಇದೀಗ ಹರಿಯಾಣ ರಾಜ್ಯದಲ್ಲಿ ಹೊಸ ಯೋಜನೆ ಒಂದು ಬಿಡುಗಡೆಯಾಗಿದೆ. ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬ್ಯಾಚುಲರ್ ಗಳಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಇದುವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಯಾಗದೆ ಇರುವ ಬ್ರಹ್ಮಚಾರಿಗಳಿದ್ದಾರೆ. ಅವರಿಗೆ ಈ ಯೋಜನೆಯಿಂದ ಆರ್ಥಿಕವಾಗಿ ಸಹಾಯ ಆಗಲಿದೆ. ಈ ನಿಟ್ಟಿನಲ್ಲಿ ಹರಿಯಾಣ ರಾಜ್ಯದ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

Pension scheme will be available for bachelors
Image Credit: Economictimes

ಹರಿಯಾಣದಲ್ಲಿ ಹಲವು ಪಿಂಚಣಿ ಯೋಜನೆಗಳು
ಹರಿಯಾಣದಲ್ಲಿ ಪ್ರಸ್ತುತ ವೃದ್ದಾಪ್ಯ ವೇತನ ವಿಧವಾ ಮತ್ತು ನಿರ್ಗತಿಕ ಪಿಂಚಣಿ. ಅಂಗವಿಕರಿಗೆ ಪಿಂಚಣಿ, ನಿರ್ಗತಿಕ ಮಕ್ಕಳಿಗೆ ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ತೃತೀಯ ಲಿಂಗಿಗಳಿಗೆ ಪಿಂಚಣಿ, ಕುಬ್ಜರಿಗೆ ಮತ್ತು ಪತ್ರಕರ್ತ ಪಿಂಚಣಿ ನೀಡಲಾಗುತ್ತಿದೆ.

ಬ್ರಹ್ಮಚಾರಿಗಳಿಗೆ ಪಿಂಚಣಿ ಯೋಜನೆ
ಬ್ರಹ್ಮಚಾರಿಗಳಿಗೆ ಪಿಂಚಣಿ ಯೋಜನೆ ಜಾರಿಗೆ ತರಲು ತಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಹರಿಯಾಣದ ಸಿಎಂ ತಿಳಿಸಿದ್ದಾರೆ. 40 ರಿಂದ 60 ವರ್ಷ ವಯೋಮಾನದವರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲು ಬಯಸಿರುವುದಾಗಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಂದು ತಿಂಗಳೊಳಗೆ ಈ ಯೋಜನೆ ತರಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Pension scheme will be available for bachelors
Image Credit: Newsdrum

ಕರ್ನಾಲ್ ನ ಕಲಂಪುರ ಗ್ರಾಮದಲ್ಲಿ ಜನ ಸಂವಾದ ಕಾರ್ಯಕ್ರಮದಲ್ಲಿ 60 ವರ್ಷದ ಬ್ರಹ್ಮಚಾರಿ ತಮಗೆ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿಕೊಂಡರು. ಕನಿಷ್ಠ ಪಿಂಚಣಿಯು ಸಿಗುತ್ತಿಲ್ಲ ಎಂದು ಕಷ್ಟವನ್ನು ಹೇಳಿಕೊಂಡಿದ್ದಾರೆ. ಈ ವೇಳೆ ತಮ್ಮ ಸರ್ಕಾರ ಬ್ರಹ್ಮಚಾರಿ ಪಿಂಚಣಿಯ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group