Bank Leave: 10 ದಿನಗಳ ಕಾಲ ಬ್ಯಾಂಕ್ ರಜೆ, ಬ್ಯಾಂಕ್ ವ್ಯವಹಾರ ಮಾಡುವವರ ಬೇಗ ಮಾಡಿಕೊಳ್ಳಿ.

ಜೂನ್ ನಲ್ಲಿ 10 ದಿನಗಳ ಕಾಲ ಬ್ಯಾಂಕ್ ರಜೆ ಇರುತ್ತದೆ, ಬ್ಯಾಂಕ್ ನ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿಯಿರಿ.

10 days Bank Holiday In June: ಇದೀಗ 2023 ರ ಜೂನ್ (June) ತಿಂಗಳು ಆರಂಭಗೊಂಡು ಒಂದು ವಾರಗಳು ಮುಗಿದು ಬಂದಿದೆ.ಈಗಾಗಲೇ ಜೂನ್ ತಿಂಗಳ ರಜಾ ದಿನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಜೂನ್ ತಿಂಗಳಿನಲ್ಲಿ 12 ದಿನಗಳು ಬ್ಯಾಂಕ್ ಬಂದ್ ಆಗಿರುತ್ತದೆ. ಈಗಾಗಲೇ ಜೂನ್ ತಿಂಗಳಿನಲ್ಲಿ 11 ದಿನಗಳು ಮುಗಿದಿದೆ.

ಇನ್ನು ಜೂನ್ ತಿಂಗಳಿನಲ್ಲಿ 10 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. ನಿಮಗೆ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ವಹಿವಾಟು ಮಾಡಲು ಈ 10 ದಿನಗಳು ಬ್ಯಾಂಕ್ ಸೇವೆ ಲಭ್ಯವಿರುವುದಿಲ್ಲ.

10 bank holidays information
Image Credit: indianexpress

ಜೂನ್ ನಲ್ಲಿ ಇನ್ನು 10 ದಿನಗಳು ಬ್ಯಾಂಕ್ ರಜೆ
ದೇಶದಾದ್ಯಂತ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹಾಗೆಯೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಈ ಜೂನ್ ತಿಂಗಳಲ್ಲಿ ಬ್ಯಾಂಕ್ ಗೆ ಬರೋಬ್ಬರಿ 10 ದಿನಗಳು ರಜೆ ಸಿಗಲಿದೆ. ಗ್ರಾಹಕರ ಈ 10 ದಿನಗಳು ಬ್ಯಾಂಕ್ ಸೇವೆಯಿಂದ ವಂಚಿತರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಹಿವಾಟುಗಳು ಹೆಚ್ಚುತ್ತಿವೆ. ಈ ಕಾರಣದಿಂದ ಬ್ಯಾಂಕ್ ಗಳಿಗೆ ಜನರು ಹೆಚ್ಚಾಗಿ ಭೇಟಿ ನೀಡುವ ಅನಿವಾರ್ಯ ಇರುವುದಿಲ್ಲ.

ಆದರೂ ಕೆಲವು ಮುಖ್ಯ ಕಾರಣಗಳಿಗೆ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಇನ್ನು ಬ್ಯಾಂಕ್ ಸೇವೆ ಲಭ್ಯವಿಲ್ಲದ ದಿನದಂದು UPI, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮುಂತಾದ ಡಿಜಿಟಲ್ ಸೇವೆಗಳು ಬ್ಯಾಂಕ್ ಮುಚ್ಚಿದ ನಂತರವೂ ಕಾರ್ಯನಿರ್ವಹಿಸುತ್ತವೆ.

ಬ್ಯಾಂಕ್ ಗೆ ಸಂಬಂಧಿಸಿದ ಆನ್ಲೈನ್ ಸೇವೆಗಳು ಗ್ರಾಹಕರಿಗೆ ಲಾಭವಾಗುತ್ತದೆ. ಇನ್ನು ಯಾವ ದಿನದಂದು ಯಾವ ಕಾರಣಕ್ಕೆ ಬ್ಯಾಂಕ್ ಗಳಿಗೆ ರಜೆ ನೀಡಲಾಗುತ್ತದೆ ಎನ್ನುವ ಬಗ್ಗೆ ವಿವರಗಳನ್ನು ತಿಳಿಯೋಣ.

Join Nadunudi News WhatsApp Group

10 bank holidays information
Image Credit: news18

ಬ್ಯಾಂಕ್ ನ 10 ರಜಾ ದಿನಗಳ ಮಾಹಿತಿ
ಜೂನ್ 11 ರಂದು ಭಾನುವಾರ ರಜೆ ಇರುತ್ತದೆ.

ಜೂನ್ 15 ರಂದು ಗುರುವಾರ, ರಾಜಾ ಸಕ್ರಾಂತಿ ಪ್ರಯುಕ್ತ ರಜೆ ಇರಲಿದೆ. ಮಿಜೋರಾಂ ಮತ್ತು ಒಡಿಶಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ

ಜೂನ್ 18 ರಂದು ಭಾನುವಾರ, ರಾಷ್ಟ್ರವ್ಯಾಪಿ ರಜೆ,

ಜೂನ್ 20 ರಂದು ರಥಯಾತ್ರೆಯ ಕಾರಣ ಒಡಿಶಾದಲ್ಲಿ ಗುರುವಾರ ರಜೆ ಇರುತ್ತದೆ.

ಜೂನ್ 24 ರಂದು ನಾಲ್ಕನೇ ಶನಿವಾರ.

ಜೂನ್ 25 ರಂದು ವಾರಾಂತ್ಯದ ಭಾನುವಾರ ರಜೆ ಇರಲಿದೆ.

ಜೂನ್ 26 ರಂದು ಖಾರ್ಚಿ ಪೂಜೆ, ತ್ರಿಪುರಾ ರಾಜ್ಯ ಮಾತ್ರ ರಜೆ ಇರುತ್ತದೆ.

ಜೂನ್ 28 ರಂದು ಮಂಗಳವಾರ, ಈದ್ ಉಲ್ ಅಝಾ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಕೇರಳ ರಾಜ್ಯದಲ್ಲಿ ಮಾತ್ರ ರಜೆ ಇರಲಿದೆ.

ಜೂನ್ 29 ಗುರುವಾರ, ಈದ್ ಅಲ್- ಅಧಾ ರಜೆ.

ಜೂನ್ 30 ರಂದು ಈದ್ ಉಲ್ ಅಝ ಕಾರಣ ರೀಮಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

Join Nadunudi News WhatsApp Group