Bank Holidays: ಮುಂದಿನ ತಿಂಗಳು 21 ದಿನಗಳ ಕಾಲ ಮುಚ್ಚಿರಲಿದೆ ದೇಶದ ಎಲ್ಲಾ ಬ್ಯಾಂಕುಗಳು, ಇಲ್ಲಿದೆ ಬ್ಯಾಂಕ್ ರಜಾ ದಿನದ ಲಿಸ್ಟ್.

ಹೆಚ್ಚಿನ ಜನರು ತಮ್ಮ ವ್ಯವಹಾರಗಳಿಗೆ ಬ್ಯಾಂಕುಗಳನ್ನ ಅವಲಂಬಿಸಿರುತ್ತಾರೆ ಮತ್ತು ಒಂದು ದಿನ ಬ್ಯಾಂಕ್ ರಜೆ ಇದ್ದರೆ ಕೆಲವು ವ್ಯವಹಾರಗಳು ನಿಲ್ಲುತ್ತದೆ. ಪ್ರತಿ ತಿಂಗಳು ಬ್ಯಾಂಕುಗಳಿಗೆ ಇಂತಿಷ್ಟು ದಿನಗಳ ಕಾಲ ರಜೆ ಇರುತ್ತದೆ. ಸರ್ಕಾರೀ ರಜೆ ಮತ್ತು ಸ್ಥಳೀಯ ರಜೆಗಳ ಕಾರಣ ಬ್ಯಾಂಕುಗಳು ತಿಂಗಳಲ್ಲಿ ಕೆಲವು ತಿಂಗಳು ಬಂದ್ ಆಗಿರುತ್ತದೆ. ಅದೇ ರೀತಿಯಲ್ಲಿ ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕುಗಳು ಹೆಚ್ಚಿನ ದಿನ ಬಂದ್ ಆಗಿರಲಿದ್ದು ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವವರು ಆದಷ್ಟು ಬ್ಯಾಂಕಿನ ರಜೆಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಂಡು ನಂತರ ವ್ಯವಹಾರವನ್ನ ಮಾಡುವುದು ಉತ್ತಮ ಎಂದು ಹೇಳಬಹುದು. ಮುಂದಿನ ದಿನಗಳು ಬರೋಬ್ಬರಿ 21 ದಿನಗಳ ಎಲ್ಲಾ ಬ್ಯಾಂಕುಗಳು ಬಂದ್ ಆಗಿರಲಿದೆ.

ಮುಂದಿನ ತಿಂಗಳು ಭಾಗಶಃ ದಿನಗಳು ಎಲ್ಲಾ ಬ್ಯಾಂಕುಗಳು ಬಂದ್ ಆಗಿರಲಿದ್ದು Bank Holidays ಇರುವ ಕಾರಣ ಜನರು ಈ ತಿಂಗಳಲ್ಲೇ ತಮ್ಮ ವ್ಯವಹಾರವನ್ನ ಮುಗಿಸಿಕೊಳ್ಳುವುದು ಉತ್ತಮ ಆಗಿದೆ. ಹಾಗಾದರೆ ಮುಂದಿನ ತಿಂಗಳು ಯಾವ ಯಾವ ದಿನಗಳು ಬ್ಯಾಂಕ್ ಬಂದ್ ಇರಲಿದೆ ಎಂದು ತಿಳಿಯೋಣ ಬನ್ನಿ. National Holidays And State Holidays ಮುಂದಿನ ತಿಂಗಳು ಬಹಳಷ್ಟು ಇರುವ ಕಾರಣ ಮುಂದಿನ ತಿಂಗಳು ಎರಡನೆಯ ಶನಿವಾರ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿ ಸುಮಾರು 21 ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರಲಿದೆ.

October month bank holidays
Image Credit: www.business-standard.com

ಅಕ್ಟೋಬರ್ 1 ಬ್ಯಾಂಕಿನ ಅರ್ಧವಾರ್ಷಿಕ ರಜೆಯಾದ ಕಾರಣ ಬ್ಯಾಂಕುಗಳು ಬಂದ್ ಇರಲಿದೆ. ಅಕ್ಟೋಬರ್ 2 ನೇ ತಾರೀಕು ಭಾನುವಾರದ ಜೊತೆಗೆ ಗಾಂಧಿ ಜಯಂತಿ ಆಗಿದೆ. ಇನ್ನು ಅಕ್ಟೋಬರ್ 3 ನೇ ಮಹಾ ಅಷ್ಟಮಿ ಆಗಿರುವ ಕಾರಣ ಬ್ಯಾಂಕುಗಳು ಬಂದ್ ಆಗಿರಲಿದೆ. ಅಕ್ಟೋಬರ್ 4 ನೇ ತಾರೀಕು ಮಹಾನವಮಿಯ ಕಾರಣ ಬ್ಯಾಂಕುಗಳು ರಜೆ ಇರಲಿದೆ. ಅಕ್ಟೋಬರ್ 5 ನೇ ತಾರೀಕು ವಿಜಯದಶಮಿಯಾದ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ. ಅಕ್ಟೋಬರ್ 6 ಮತ್ತು 7 ನೇ ತಾರೀಕು ದುರ್ಗಾ ಪೂಜೆಯಾದ ಕಾರಣ ಕೆಲವು ಬ್ಯಾಂಕುಗಳು ರಜೆ ಇರುವ ಸಾಧ್ಯತೆ ಇದೆ. ಅಕ್ಟೋಬರ್ 8 ಎರಡನೆಯ ಶನಿವಾರದ ಕಾರಣ ಬ್ಯಾಂಕ್ ರಜೆ ಇರಲಿದೆ ಮತ್ತು ಅಕ್ಟೋಬರ್ 9 ಭಾನುವಾರ.

ಅಕ್ಟೋಬರ್ 13 ಕರ್ವಾ ಚೌತ್ ಆದಕಾರಣ ಕೆಲವು ಬ್ಯಾಂಕುಗಳು ರಜೆ ಇರುತ್ತದೆ ಮತ್ತು ಅಕ್ಟೋಬರ್ 14 ನೇ ತಾರೀಕಿ ಈದ್ ಮಿಲಾದ್ ರಜೆ ಇರಲಿದೆ. ಅಕ್ಟೋಬರ್ 16 ಭಾನುವಾರದ ರಜೆ ಇದೆ. ಅಕ್ಟೋಬರ್ 18 ಕಟಿ ಬಿಹು ಆದಕಾರಣ ಕೆಲವು ಬ್ಯಾಂಕುಗಳು ರಜೆ ಇರಲಿದೆ ಮತ್ತು ಅಕ್ಟೋಬರ್ 22 ನಾಲ್ಕನೇ ಶನಿವಾರ ಮತ್ತು 23 ಭಾನುವಾರವಾಗಿದೆ. ಅಕ್ಟೋಬರ್ 24 ಮತ್ತು 25 ದೀಪಾವಳಿಯ ರಜೆ ಇರುತ್ತದೆ. ಅಕ್ಟೋಬರ್ 26 ಬಲಿಪಾಡ್ಯಮಿಯ ಕಾರಣ ರಜೆ ಇದೆ ಮತ್ತು 27 ನೇ ತಾರೀಕು ಚಿತ್ರಗುಪ್ತ ಜಯಂತಿಯ ಕಾರಣ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ. ಅಕ್ಟೋಬರ್ 30 ಭಾನುವಾರ ಮತ್ತು 31 ಸರ್ದಾರ್ ವಲ್ಲಭಾಯಿ ಪಟೇಲರ ಜನ್ಮದಿನವಾದ ಕಾರಣ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ರಜೆ ಇದೆ.

Join Nadunudi News WhatsApp Group

Join Nadunudi News WhatsApp Group