Bank Merging: ವಿಲೀನವಾಗಲಿದೆ ಈ ನಾಲ್ಕು ಸರ್ಕಾರೀ ಬ್ಯಾಂಕುಗಳು, ಖಾತೆ ಇದ್ದವರು ಎಚ್ಛೆತ್ತುಕೊಳ್ಳಿ

ಈ ನಾಲ್ಕು ಬ್ಯಾಂಕುಗಳು ಸದ್ಯದಲ್ಲೇ ವಿಲೀನಗೊಳ್ಳಲಿದೆ, ಗೊಂದಲದಲ್ಲಿ ಖಾತೆ ಹೊಂದಿರುವವರು

Bank Merger Latest Update: ಸದ್ಯ ದೇಶದಲ್ಲಿ ಬ್ಯಾಂಕ್ ಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. RBI ಬ್ಯಾಂಕ್ ಗಳಿಗೆ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಂಕ್ ಗಳು RBI ನಿಯಮದ ಪ್ರಕಾರವೇ ತನ್ನ ಹಣಕಾಸಿನ ವಹಿವಾಟನ್ನು ನಡೆಸುವುದು ಅಗತ್ಯವಾಗಿದೆ.

ದೇಶದಲ್ಲಿ ಈಗಾಗಲೇ ಹಲವಾರು ಬ್ಯಾಂಕ್ ಗಳು ತನ್ನ ವಿಲೀನ ಪ್ರಕ್ರಿಯನ್ನು ಮುಗಿಸಿಕೊಂಡಿದೆ. ಸದ್ಯ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ದೇಶದ ಇನ್ನು ನಾಲ್ಕು ಪ್ರಮುಖ ಬ್ಯಾಂಕ್ ಗಳು ವಿಲೀನವಾಗಲಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಈ ನಾಲ್ಕು ಬ್ಯಾಂಕ್ ಗಳ ವಿಲೀನದ ಸುದ್ದಿ ವೈರಲ್ ಆಗುತ್ತಿದೆ.

Union Bank Merge
Image Credit: News 18

ವಿಲೀನವಾಗಲಿದೆ ಈ ನಾಲ್ಕು ಸರ್ಕಾರೀ ಬ್ಯಾಂಕುಗಳು
ಬ್ಯಾಂಕ್ ಆಫ್ ಇಂಡಿಯಾ, (Bank of India)
ಬ್ಯಾಂಕ್ ಆಫ್ ಮಹಾರಾಷ್ಟ್ರ, (Bank of Maharashtra)
ಯೂನಿಯನ್ ಬ್ಯಾಂಕ್ ಮತ್ತು (Union Bank)
UCO ಬ್ಯಾಂಕ್ (UCO Bank)

ಈ ಬ್ಯಾಂಕ್ ನಲ್ಲಿ ಖಾತೆ ಇದ್ದವರು ಎಚ್ಛೆತ್ತುಕೊಳ್ಳಿ
ಸಂಸದೀಯ ಸಮಿತಿಯು ಮುಂದಿನ ವರ್ಷದ ಆರಂಭದಲ್ಲಿ ಅಂದರೆ ಜನವರಿ 2024 ರಿಂದ ಈ ನಾಲ್ಕು ಬ್ಯಾಂಕ್‌ ಗಳ ಸಂಭಾವ್ಯ ವಿಲೀನದ ಕುರಿತು ಚರ್ಚಿಸಲು ಪ್ರಾರಂಭಿಸಬಹುದು. ಈ ವಿಲೀನದ ನಂತರ ದೇಶದಲ್ಲಿ ಎರಡು ದೊಡ್ಡ ಬ್ಯಾಂಕ್‌ಗಳು ಹೊರಹೊಮ್ಮುತ್ತವೆ. ಹಣಕಾಸು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಈ ವರದಿ ನೀಡಿದೆ.

Bank of Maharashtra
Image Credit: The Hindu Business Line

ಇದರ ಪ್ರಕಾರ, ಸರ್ಕಾರವು ಜನವರಿ 2, 2024 ರಂದು UCO ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಬಹುದು, ನಂತರ ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಇಂಡಿಯಾದ ವಿಲೀನದ ಸಾಧ್ಯತೆಗಳನ್ನು ಜನವರಿ 6, 2024 ರಂದು ಅನ್ವೇಷಿಸಲಾಗುವುದು.

Join Nadunudi News WhatsApp Group

ಈ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ
ಮಾರ್ಚ್ 2020 ರಲ್ಲಿ ಸರ್ಕಾರವು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಿಲೀನಗೊಳಿಸಿತು. ಇದಲ್ಲದೆ, ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಯಿತು, ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಮತ್ತು ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ ನೊಂದಿಗೆ ವಿಲೀನಗೊಳಿಸಿದೆ. ಇದೀಗ ಈ ನಾಲ್ಕು ಬ್ಯಾಂಕುಗಳು ಸದ್ಯದಲ್ಲೇ ವಿಲೀನಗೊಳ್ಳಲಿದೆ.

Join Nadunudi News WhatsApp Group