Bank Weekly Holidays: ಬ್ಯಾಂಕ್ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ, 2 ದಿನ ರಜೆ.

Bank Holidays And Working Hour Update: ಇದೀಗ ಬ್ಯಾಂಕ್ ಗ್ರಾಹಕರಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಈ ವಿಚಾರವನ್ನು ಸರಿಯಾಗಿ ತಿಳಿದುಕೊಂಡು ಬ್ಯಾಂಕ್ ಗೆ ಹೋಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು.

The central government has decided to change the working hours and holidays of banks
Image Credit: inslivemint

ಬ್ಯಾಂಕ್ ನೌಕರರಿಗೆ ವಾರಕ್ಕೆ ಐದೇ ದಿನ ಕೆಲಸ
ಖಾಸಗಿ ಕಂಪನಿಗಳಲ್ಲಿ ವಾರಕ್ಕೆ 5 ದಿನ ರಜೆ ಇರುವಂತೆ ಬ್ಯಾಂಕಿಂಗ್ ವಲಯದಲ್ಲಿಯೂ ಸಹ ವಾರಕ್ಕೆ ಐದು ದಿನ ಕೆಲಸ. ಎರಡು ದಿನ ರಜೆ ನೀಡಬೇಕೆಂಬ ಬೇಡಿಕೆ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಯುನೈಟೆದೆ ಫೋರಂ ಆಫ್ ಬ್ಯಾಂಕ್ ಎಂಪ್ಲಾಯಿಸ್ ನಿಂದ ಕೇಳಿ ಬಂದಿದ್ದು ಈ ಪ್ರಸ್ತಾಪಕ್ಕೆ ಭಾರತೀಯ ಬ್ಯಾಂಕ್ ಆಸೋಸಿಯೇಷನ್ ಒಪ್ಪಿಗೆ ನೀಡಿದೆ.

Henceforth banks will be open only five days a week and working hours of bank employees will increase.
Image Credit: livemint

ಬ್ಯಾಂಕ್ ನೌಕರರ ಬೇಡಿಕೆ
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 25 ನೇ ವಿಧಿ ಅನ್ವಯ ಇದನ್ನು ಸರ್ಕಾರ ಜಾರಿಗೊಳಿಸಬೇಕಿದೆ. ಬ್ಯಾಂಕ್ ಉದ್ಯೋಗಿಗಳಿಗೆ ನಾಲ್ಕು ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ರಜೆ ಇರಲಿದೆ. ಇದರ ಬದಲಿಗೆ ಕೆಲಸದ ಅವಧಿಯನ್ನು 50 ನಿಮಿಷ ಹೆಚ್ಚಳ ಮಾಡಿ ವಾರಕ್ಕೆ ಐದು ದಿನ ಕೆಲಸ, ಶನಿವಾರ ಮತ್ತು ಭಾನುವಾರ ರಜೆ ನೀಡಲಾಗುವುದು ಎನ್ನಲಾಗಿದೆ.

The central government has decided to give five days holiday in a week to the banks
Image Credit: businessinsider

ಬ್ಯಾಂಕ್ ನೌಕರರಿಗೆ ಬಹುದಿನಗಳ ಬೇಡಿಕೆ ಈಗ ಈಡೇರಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರದ ಐದು ದಿನಗಳ ಸೌಲಭ್ಯ ಶೀಘ್ರದಲ್ಲೇ ಜಾರಿಯಾಗಬಹುದು.

ಈ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ಯುನೈಟೆಡ್ ಫೋರಂ ಆಫ್ ಇಂಡಿಯನ್ ಬ್ಯಾಂಕ್ಸ್ ಎಂಪ್ಲಾಯಿಸ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಿಂಗಳಿಗೆ ಎರಡು ರಜೆ ಹೆಚ್ಚಿರುವುದರಿಂದ ಬ್ಯಾಂಕ್ ನೌಕರರ ಅವಧಿ ಕೂಡ ಹೆಚ್ಚಾಗಲಿದೆ. ಹೊಸ ಒಪ್ಪಂದದ ಪ್ರಕಾರ ಬ್ಯಾಂಕ್ ಉದ್ಯೋಗಿಗಳು ಪ್ರತಿದಿನ 50 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group